ETV Bharat / state

ಆಸ್ಪತ್ರೆಗೆ ಬರಲು ಒಪ್ಪದ 16 ಮಂದಿ ಸೋಂಕಿತರ ಮನವೊಲಿಸಿದ ಶಿರಾ ತಾಲೂಕು ಆಡಳಿತ

ಎಲ್ಲರನ್ನು ಆ್ಯಂಬುಲೆನ್ಸ್ ಮೂಲಕ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಯಿತು..

tumkur
ಸೋಂಕಿತರ ಮನವೊಲಿಸಿ ಆಸ್ಪತ್ರೆಗೆ ಕರೆದೊಯ್ದ ಶಿರಾ ತಾಲೂಕು ಆಡಳಿತ
author img

By

Published : Apr 30, 2021, 12:37 PM IST

Updated : Apr 30, 2021, 9:49 PM IST

ತುಮಕೂರು : ಜಿಲ್ಲೆಯ ಶಿರಾ ತಾಲೂಕಿನ ಗ್ರಾಮವೊಂದರಲ್ಲಿ 16 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ವಿಷಯ ತಿಳಿದ ತಾಲೂಕು ಆಡಳಿತ ಸೋಂಕಿತರ ಮನವೊಲಿಸಿ ಆಸ್ಪತ್ರೆಗೆ ದಾಖಲಿಸಲು ಹರಸಾಹಸ ಪಟ್ಟಿದೆ.

ಗುಡ್ಡದಹಟ್ಟಿ ಗ್ರಾಮದಲ್ಲಿ ಮೊದಲಿಗೆ ಓರ್ವ ವ್ಯಕ್ತಿಯಲ್ಲಿ ಸೋಂಕು ಕಾಣಿಸಿತ್ತು. ಒಂದು ವಾರದ ಅಂತರದಲ್ಲಿ ಬರೋಬ್ಬರಿಗೆ 16 ಮಂದಿಯಲ್ಲಿ ಸೋಂಕಿನ ಗುಣಲಕ್ಷಣಗಳಾದ ಜ್ವರ, ಕೆಮ್ಮು, ಶೀತ, ನೆಗಡಿ ಕಾಣಿಸಿತ್ತು.

ವಿಷಯ ತಿಳಿದು ಗ್ರಾಮಕ್ಕೆ ತಾಲೂಕು ಆರೋಗ್ಯಾಧಿಕಾರಿ, ಶಿರಾ ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ, ಶಾಸಕ ಡಾ. ರಾಜೇಶ್ ಗೌಡ, ತಹಶೀಲ್ದಾರ್ ಮಮತಾ ದೌಡಾಯಿಸಿದರು.

ಆಸ್ಪತ್ರೆಗೆ ಬರಲು ಒಪ್ಪದ 16 ಮಂದಿ ಸೋಂಕಿತರ ಮನವೊಲಿಸಿದ ಶಿರಾ ತಾಲೂಕು ಆಡಳಿತ

ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗುವಂತೆ ತಿಳಿಸಲಾಯಿತು. ಆದ್ರೆ, 16 ಮಂದಿ ಸೋಂಕಿತರು ಇದಕ್ಕೆ ಹಿಂದೇಟು ಹಾಕಿದರು. ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ಬರೋದಿಲ್ಲ ಎಂದು ಪಟ್ಟು ಹಿಡಿದರು.

ಬಳಿಕ ಶಾಸಕರು ಮತ್ತು ಅಧಿಕಾರಿಗಳು ಸೋಂಕಿತರ ಮನವೊಲಿಸಿ ಯಾವುದೇ ಚಿಕಿತ್ಸೆಯಿಲ್ಲದೆ ಗ್ರಾಮದಲ್ಲಿಯೇ ಸೋಂಕಿತರು ಉಳಿದುಕೊಂಡರೆ ಕುಟುಂಬದವರಿಗೆ ಮತ್ತು ಗ್ರಾಮಸ್ಥರಿಗೆ ಸೋಂಕು ಹರಡುವ ಸಾಧ್ಯತೆ ಇದೆ.

ಹೀಗಾಗಿ, ಆಸ್ಪತ್ರೆಗೆ ದಾಖಲಾದ್ರೇ, ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

ಬಳಿಕ ಎಲ್ಲರನ್ನು ಆ್ಯಂಬುಲೆನ್ಸ್ ಮೂಲಕ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಯಿತು.

ನಂತರ ವೈದ್ಯರು ಗ್ರಾಮದ ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಲಾಯಿತು. ಅಲ್ಲದೇ ಗ್ರಾಮಸ್ಥರಿಗೆ ಮಾಸ್ಕ್ ಮತ್ತು ಸ್ಯಾನಿಟೇಸರ್ ವಿತರಿಸಲಾಯಿತು.

Last Updated : Apr 30, 2021, 9:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.