ETV Bharat / state

Job Alert: ತುಮಕೂರು ಎಚ್​ಎಎಲ್​ನಲ್ಲಿದೆ ಉದ್ಯೋಗಾವಕಾಶ; 41 ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ - ತುಮಕೂರಿನಲ್ಲಿರುವ ಘಟಕಕ್ಕೆ ವಿವಿಧ ಹುದ್ದೆಗಳ ಭರ್ತಿ

ಎಚ್​ಎಎಲ್​ ತುಮಕೂರಿನಲ್ಲಿ ನಾನ್​ ಎಕ್ಸಿಕ್ಯೂಟಿವ್​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

Non Executives Post Recruitment for HAL
Non Executives Post Recruitment for HAL
author img

By ETV Bharat Karnataka Team

Published : Sep 11, 2023, 5:20 PM IST

ಹಿಂದೂಸ್ತಾನ್​ ಏರೋನಾಟಿಕಲ್​ ಲಿಮಿಟೆಡ್​ (ಎಚ್​ಎಎಲ್​) ತುಮಕೂರಿನಲ್ಲಿರುವ ಘಟಕಕ್ಕೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ನಾನ್​ ಎಕ್ಸಿಕ್ಯೂಟಿವ್​ ಕ್ರೇಡ್​ ಹುದ್ದೆಗಳು ಇವಾಗಿವೆ. ನಾಲ್ಕು ವರ್ಷದವರೆಗೆ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಸಲಾಗುವುದು. ಒಟ್ಟು 41 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ಎಚ್​ಎಎಲ್​ನಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಸೇರಿದಂತೆ ಒಟ್ಟು 41 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

  • ಫಿಟ್ಟರ್​ - 17
  • ಎಲೆಕ್ಟ್ರಿಷಿಯನ್​ - 5
  • ಸ್ಟೋರ್​ ಕ್ಲೆರಿಕಲ್​/ ಕಾಮರ್ಸ್​ ಅಸಿಸ್ಟಂಟ್​/ ಆಡ್ಮಿನ್​ ಅಸಿಸ್ಟ್​ - 4
  • ಅಕೌಂಟ್ಸ್​​ - 2
  • ಸಿವಿಲ್​ - 1
  • ಟೆಕ್ನಿಷಿಯನ್​ (ಎಲೆಕ್ಟ್ರಿಕಲ್​) - 7
  • ಟೆಕ್ನಿಷಿಯನ್​ (ಮೆಕಾನಿಕಲ್​ ) - 2
  • ಅಸಿಸ್ಟಂಟ್​​ (ಐಟಿ) - 2

ವಿದ್ಯಾರ್ಹತೆ:

  • ಫಿಟ್ಟರ್​, ಎಲೆಕ್ಟ್ರಿಷಿಯನ್​ಗೆ ಎಚ್​ಎಎಲ್​ ಇಂಡಿಯಾ ನಿಯಮ ಅನುಸಾರ ಹುದ್ದೆ ಅರ್ಹತೆ ಹೊಂದಿರಬೇಕು.
  • ಸ್ಟೋರ್​ ಕ್ಲರಿಕಲ್​/ ಕಾಮರ್ಸ್​ ಅಸಿಸ್ಟಂಟ್​/ ಆಡ್ಮಿನ್​ ಅಸಿಸ್ಟ್- ಬಿಎ, ಬಿಕಾಂ, ಬಿಬಿಎ, ಬಿಬಿಎಂ, ಬಿಸಿಎ, ಬಿಎಸ್​ಡಬ್ಲ್ಯೂ, ಪದವಿಯನ್ನು ಹೊಂದಿರಬೇಕು
  • ಅಕೌಂಟ್ಸ್​​: ಬಿಕಾಂ, ಪದವಿ ಹೊಂದಿರಬೇಕು
  • ಟೆಕ್ನಿಷಿಯನ್​: ಡಿಪ್ಲೊಮಾ ಪದವಿ ಹೊಂದಿರಬೇಕು.

ವಯೋಮಿತಿ: ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 28 ವರ್ಷ ಮೀರಿರಬಾರದು. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಪ. ಜಾ, ಪ. ಪಂ ಅಭ್ಯರ್ಥಿಗಳಿಗೆ 10 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಮೆರಿಟ್​ ಪಟ್ಟಿ, ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನ ಮೂಲಕ ನಡೆಸಲಾಗುವುದು

ವೇತನ: ಟೆಕ್ನಿಷಿಯನ್​ ಹುದ್ದೆಗೆ ಮಾಸಿಕ 23 ಸಾವಿರ ಮತ್ತು ಉಳಿದ ಹುದ್ದೆಗಳಿಗೆ 22 ಸಾವಿರ ರೂ. ಮಾಸಿಕ ವೇತನ ನಿಗದಿಸಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ವೇಳೆ ಅಭ್ಯರ್ಥಿಗಳು ಸ್ಪಷ್ಟ ಮಾಹಿತಿಯೊಂದಿಗೆ ಅರ್ಜಿ ಭರ್ತಿ ಮಾಡಬೇಕಿದೆ. ಸೆಪ್ಟೆಂಬರ್​ 9ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕಡೆಯ ದಿನ ಸೆಪ್ಟೆಂಬರ್​ 24 ಆಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ hal-india.co.in ಜಾಲತಾಣಕ್ಕೆ ಭೇಟಿ ನೀಡಬಹುದು.

ಈ ಹುದ್ದೆ ಕುರಿತು ಸ್ಪಷ್ಟೀಕರಣ ಸಂಬಂಧ ಅಭ್ಯರ್ಥಿಗಳು rectt.helicopter@hal-india.co.in ಅಥವಾ 080-22323744/22322964 ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ: Job alert: ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ 21 ಮೇಲ್ವಿಚಾರಕರ ಹುದ್ದೆ ನೇಮಕಾತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.