ತುಮಕೂರು: ಕನಿಷ್ಠ ಸೌಲಭ್ಯವೂ ಇಲ್ಲದೆ ಸಂಕಷ್ಟದ ಜೀವನ ನಡೆಸುತ್ತಿರುವ ಚಿಂದಿ ಆಯುವವರ ಕುಟುಂಬಗಳಿಗೆ ನಗರದ ಹಸಿರು ದಳ ಸಂಸ್ಥೆಯಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಮಾರಿಯಮ್ಮ ನಗರದಲ್ಲಿ ವಾಸವಿರುವ ಚಿಂದಿ ಆಯುವವರ ಒಂಬತ್ತು ಕುಟುಂಬಗಳನ್ನು ಗುರುತಿಸಿ ಹಸಿರು ದಳ ಸ್ವಯಂ ಸೇವಾ ಸಂಸ್ಥೆಯವರು ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು. ಪ್ರತಿ ಕಿಟ್ 10 ಕೆ.ಜಿ ಅಕ್ಕಿ, 1 ಲೀ. ಅಡುಗೆ ಎಣ್ಣೆ, ಸಕ್ಕರೆ, ಉಪ್ಪು, ಬೇಳೆ, ಸಾಂಬಾರ್ ಪದಾರ್ಥಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಅನಾಥ ಶವದ ಅಂತ್ಯಕ್ರಿಯೆ ನಡೆಸಿದ ರೈಲ್ವೇ ಹೆಡ್ಕಾನ್ಸ್ಟೇಬಲ್... ಮಾನವೀಯತೆಗೆ ಮೆಚ್ಚುಗೆ
ಚಿಂದಿ ಆಯುವರು ಪ್ರಸ್ತುತ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕಿದೆ. ಅಲ್ಲದೆ, ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತುಮಕೂರು ಪಾಲಿಕೆ ಆಯುಕ್ತೆ ರೇಣುಕಾದೇವಿ ಇದೇ ವೇಳೆ ಕಿವಿಮಾತು ಹೇಳಿದರು. ಹಸಿರು ದಳ ಸಂಸ್ಥೆಯ ಮೋಹನ್, ಸ್ಲಂ ಜನಾಂದೋಲನದ ನರಸಿಂಹಮೂರ್ತಿ ಹಾಜರಿದ್ದರು.