ETV Bharat / state

ಕೊರೊನಾ ರೂಪಾಂತರ ಭೀತಿ : ಲಂಡನ್‌ನಿಂದ ಬಂದ ಐವರಿಗೆ ಹೋಮ್ ಕ್ವಾರಂಟೈನ್ - ಕೊರೊನಾ ರೂಪಾಂತರ,

ಕೊರೊನಾ ರೂಪಾಂತರ ಭೀತಿ ಹಿನ್ನೆಲೆ ಲಂಡನ್‌ನಿಂದ ತುಮಕೂರು ಜಿಲ್ಲೆಗೆ ಬಂದಿರುವ ಐದು ಜನರಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ.

Home Quarantine at Tumkur, New corona wave, New corona wave news, five came from London, ತುಮಕೂರಿನಲ್ಲಿ ಹೋಂ ಕ್ವಾರಂಟೈನ್, ಲಂಡನ್​ನಿಂದ ಬಂದ ಐವರು ಹೋಂ ಕ್ವಾರಂಟೈನ್​, ಕೊರೊನಾ ರೂಪಾಂತರ, ಕೊರೊನಾ ರೂಪಾಂತರ ಸುದ್ದಿ, ​
ಕೊರೊನಾ ರೂಪಾಂತರ ಭೀತಿ
author img

By

Published : Dec 23, 2020, 9:57 AM IST

ತುಮಕೂರು: ರೂಪಾಂತರ ಕೊರೊನಾ ಸೋಂಕಿನ ಆತಂಕದ ನಡುವೆ ಬ್ರಿಟನ್‌ನಿಂದ ತುಮಕೂರು ಜಿಲ್ಲೆಗೆ ಬಂದಿರುವ ಐವರನ್ನು ಹೋಮ್‌ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.

ತುಮಕೂರು ಹೊರವಲಯದ ಮರಳೂರು ದಿಣ್ಣೆಗೆ ನಾಲ್ವರು ಮತ್ತು ತಿಪಟೂರಿಗೆ ಒಬ್ಬರು ಲಂಡನ್​ನಿಂದ ಬಂದಿದ್ದಾರೆ. ಐವರನ್ನೂ ಕೂಡ ಕೋವಿಡ್ ಟೆಸ್ಟ್‌ಗೆ ಒಳಪಡಿಸಿ, ಮುಂಜಾಗ್ರತ ಕ್ರಮವಾಗಿ ಹೋಂ ಕ್ವಾರಂಟೈನ್ ಮಾಡಲಾಗಿದೆ.

ಐದು ಜನರು ಲಂಡನ್‌ನಿಂದ ಬಂದ ವಿಮಾನದಲ್ಲಿ ಮೊದಲು ಬೆಂಗಳೂರಿಗೆ ಬಂದು ತುಮಕೂರು ಹಾಗೂ ತಿಪಟೂರಿಗೆ ಆಗಮಿಸಿದ್ದಾರೆ. ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಹೋಂ ಕ್ವಾರಂಟೈನ್‌ನಲ್ಲಿರಿಸಿ ನಿರಂತರವಾಗಿ ಅವರ ಮೇಲೆ ವೈದ್ಯಕೀಯ ತಂಡ ನಿಗಾ ವಹಿಸಿದೆ. ಅಲ್ಲದೇ ಅವರ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ಇಡಲಾಗಿದೆ ಎಂದಿದ್ದಾರೆ.

ಇದುವರೆಗೂ ಯಾವುದೇ ರೀತಿಯ ಆತಂಕದ ವಾತಾವರಣ ನಿರ್ಮಾಣವಾಗಿಲ್ಲ ಎಂದು ಅಧಿಕಾರಿ ಡಾ. ನಾಗೇಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.