ETV Bharat / state

ಬುರ್ಖಾ ಕುರಿತ ವಿವಾದಾತ್ಮಕ ಹೇಳಿಕೆ.. ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ದೂರು - ಬುರ್ಖಾ ಸಂಸ್ಕೃತಿ ಬಗ್ಗೆ ಸೊಗಡು ಶಿವಣ್ಣ ಹೇಳಿಕೆ

ಮಾಜಿ ಸಚಿವರು ತಮ್ಮ ಪೈಶಾಚಿಕ ಮನಸ್ಸನ್ನು ಸ್ಥಿಮಿತದಲ್ಲಿಟ್ಟು ಕೊಳ್ಳಬೇಕು. ಧಾರ್ಮಿಕ‌ ಭಾವನೆಗೆ ಹಾನಿ ಉಂಟು ಮಾಡುವ ಉದ್ದೇಶದಿಂದ ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಕಿಡಿಕಾರಿದ್ದಾರೆ..

Muslim leader lodge a complaint against ex minister sogadu shivanna
ಮಾಜಿ ಸಚಿವರ ವಿರುದ್ಧ ಮುಸ್ಲಿಮರಿಂದ ದೂರು
author img

By

Published : Sep 11, 2021, 9:59 PM IST

ತುಮಕೂರು : ಮಾಜಿ ಸಚಿವ ಸೊಗಡು ಶಿವಣ್ಣರ ವಿವಾದಾತ್ಮಕ ಹೇಳಿಕೆಗೆ ಮುಸ್ಲಿಂ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಮಾಜಿ ಸಚಿವ ಶಿವಣ್ಣ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

complaint copy
ಮಾಜಿ ಸಚಿವ ಶಿವಣ್ಣ ವಿರುದ್ಧ ದೂರು ನೀಡಿರುವ ಪ್ರತಿ

ಸೈಯದ್ ಬುರ್ಹಾನ್ ಉದ್ದಿನ್ ಎಂಬುವರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಮಾಜಿ ಸಚಿವರು ತಮ್ಮ ಪೈಶಾಚಿಕ ಮನಸ್ಸನ್ನು ಸ್ಥಿಮಿತದಲ್ಲಿಟ್ಟು ಕೊಳ್ಳಬೇಕು. ಧಾರ್ಮಿಕ‌ ಭಾವನೆಗೆ ಹಾನಿ ಉಂಟು ಮಾಡುವ ಉದ್ದೇಶದಿಂದ ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಭಾರತದಲ್ಲಿ ಎಲ್ಲಿಯೂ ಬುರ್ಖಾ ಸಂಸ್ಕೃತಿ ಇರಲಿಲ್ಲ. ಮೊದಲು ಆ ಸಂಸ್ಕೃತಿಯನ್ನು ತೆಗೆದು ಹಾಕಬೇಕಿದೆ.

ಯಾರು ಬುರ್ಖಾ ಬೇಕು ಎನ್ನುತ್ತಿದ್ದಾರೆ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ಬಂಧಿಸಬೇಕು. ದೇಶದ ಕಾನೂನು ಬೇಡ ಎನ್ನುವವರು ಎಲ್ಲರೂ ತಾಲಿಬಾನಿಗಳು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಓದಿ: ದೇಶದಲ್ಲಿ ಬುರ್ಖಾ ಸಂಸ್ಕೃತಿ ಬೇಕು ಎನ್ನುವವರು ತಾಲಿಬಾನಿಗಳು : ಸೊಗಡು ಶಿವಣ್ಣ ವಿವಾದಾತ್ಮಕ ಹೇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.