ತುಮಕೂರು: ನಗರದ ನಾಗಣ್ಣನಪಾಳ್ಯದಲ್ಲಿ ನಡೆದಿದ್ದ ಮಹಾಂತೇಶ್ ಎಂಬ ವ್ಯಕ್ತಿಯ ಕೊಲೆ ಪ್ರಕರಣದ ಹಿನ್ನೆಲೆ, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಸವಣ್ಣನಪಾಳ್ಯದ ಸುಹಾಸ್ ಅಲಿಯಾಸ್ ಚಿನ್ನಿ, ನಾಗಣ್ಣನಪಾಳ್ಯದ ಮನೋಹರ್ ಅಲಿಯಾಸ್ ಶಿವಣ್ಣ, ಪಾವಗಡ ತಾಲೂಕಿನ ದವಳಹಳ್ಳಿಯ ಯಶವಂತ್ ಅಲಿಯಾಸ್ ಕುಳ್ಳ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗುರುವಾರ ನಗರದ ನಾಗಣ್ಣನಪಾಳ್ಯದ ಅನಿಕೇತನ ಶಾಲೆಯ ಸಮೀಪ, ಮಾರಕಾಸ್ತ್ರಗಳಿಂದ ಮಂಜುನಾಥ್ ಮತ್ತು ಮಹಾಂತೇಶ ಎಂಬುವವರ ಮೇಲೆ ಹಲ್ಲೆ ಮಾಡಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತಲೆಗೆ ಪೆಟ್ಟು ಬಿದ್ದಿರುವ ಮಂಜುನಾಥ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಜುನಾಥ್ ನೀಡಿದ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.