ETV Bharat / state

ಪಂಚಮಸಾಲಿ ಸಮುದಾಯ 2ಎ ಮೀಸಲು ಕೇಳುವುದು ಯಾವ ನ್ಯಾಯ?: ಮುಖ್ಯಮಂತ್ರಿ ಚಂದ್ರು ಪ್ರಶ್ನೆ - ಪಂಚಮಸಾಲಿ ಸಮುದಾಯ ಮೀಸಲಾತಿ ಕುರಿತು ಮುಖ್ಯಮಂತ್ರಿ ಚಂದ್ರು ಹೇಳಿಕೆ

ರಾಜಕೀಯವಾಗಿ ಸದೃಢರಾಗಿದ್ದಾರೆ. ಇಡೀ ಸರಕಾರವೇ ಅವರ ಮನೆಗೆ ತೆರಳಿ ಅವರ ಮನವಿಯನ್ನು ಸ್ವೀಕಾರ ಮಾಡುತ್ತಿದೆ ಎಂದರೆ ಸಣ್ಣ ಸಮುದಾಯಗಳ ಗತಿ ಏನು ಎಂದು ಪ್ರಶ್ನಿಸಿದರು. ಹಸಿದವರ ಅನ್ನವನ್ನು ಕಿತ್ತುಕೊಂಡು ತಿನ್ನುವ ಭಾವನೆ ಬರುತ್ತಿದೆ..

mukyamanthri-chandru-statement-on-panchamasali-community
ಮುಖ್ಯಮಂತ್ರಿ ಚಂದ್ರು
author img

By

Published : Aug 21, 2021, 7:04 PM IST

ತುಮಕೂರು : ಪಂಚಮಸಾಲಿ ಜನಾಂಗ ರಾಜಕೀಯವಾಗಿ ಪ್ರಬಲವಾಗಿದೆ. ಆ ಸಮುದಾಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಇದ್ದಾರೆ. ಇಂತಹ ಸಂದರ್ಭದಲ್ಲಿ 2ಎ ಮೀಸಲಾತಿಗಾಗಿ ಪಂಚಮಸಾಲಿಗಳು ಹೋರಾಟ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್ ಮುಖಂಡ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯ ಪಟ್ಟಿದ್ದಾರೆ.

2ಎ ಮೀಸಲಾತಿ ಕುರಿತು ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯೆ ನೀಡಿರುವುದು..

ನಗರದ ಖಾಸಗಿ ಹೋಟೆಲ್​ನಲ್ಲಿ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಹಿಂದುಳಿದ ವರ್ಗಗಳ ಜಾಗೃತಿ ಸಭೆಯಲ್ಲಿ ಭಾಗವಹಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದಲ್ಲಿ ಬೃಹತ್ ಮಠಗಳಿವೆ.

ಆದರೂ ಮಠಾಧಿಪತಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆ ಸಮುದಾಯದಲ್ಲಿಯೂ ಬಡವರಿದ್ದಾರೆ. ಅವರಿಗಾಗಿ ನಿಗಮ ಮಾಡಿ, ಅದರಿಂದ ಅವರು ಸೌಲಭ್ಯಗಳನ್ನು ಪಡೆಯಲಿ ಎಂದರು.

102 ಜಾತಿಗಳು 2ಎನಲ್ಲಿವೆ, ಇಲ್ಲಿಯೇ ಸಾಕಷ್ಟು ಬಿಕ್ಕಟ್ಟು ಇದೆ. ಇದರ ಮಧ್ಯ ಪಂಚಮಸಾಲಿ ಸಮುದಾಯದವರು 2ಎ ಪಟ್ಟಿಗೆ ಸೇರಲು ಮುಂದಾಗಿದ್ದಾರೆ. ಬಡತನ ನಿರ್ಮೂಲನೆಗೆ ಅಲ್ಲ, ಸರ್ವರಿಗೂ ಸಮಪಾಲು ಎಂದು ಮೀಸಲಾತಿ ನೀಡಲಾಗಿದೆ ಎಂದು ಅವರು ಹೇಳಿದರು.

5 ಪ್ರವರ್ಗಗಳಿಗೆ 75 ವರ್ಷವಾದ್ರೂ ಇನ್ನೂ ಸೌಲಭ್ಯಗಳು ಸಿಗುತ್ತಿಲ್ಲ. ಕುಲಶಾಸ್ತ್ರದ ಮೇಲೆ ಇದನ್ನು ವಿಂಗಡಿಸಲಾಗಿದೆ. ಹಿಂದುಳಿದ ವರ್ಗಗಳ ಆಯೋಗ ಇದನ್ನು ಸ್ಪಷ್ಟಪಡಿಸಬೇಕು. ಪಂಚಮಸಾಲಿ ಜನಾಂಗದಲ್ಲಿ ಜಮೀನ್ದಾರರಿದ್ದಾರೆ, ವ್ಯಾಪಾರಸ್ಥರಿದ್ದಾರೆ, ಸಾಂಸ್ಕೃತಿಕವಾಗಿ ಬೆಳೆದಿದ್ದಾರೆ.

ರಾಜಕೀಯವಾಗಿ ಸದೃಢರಾಗಿದ್ದಾರೆ. ಇಡೀ ಸರಕಾರವೇ ಅವರ ಮನೆಗೆ ತೆರಳಿ ಅವರ ಮನವಿಯನ್ನು ಸ್ವೀಕಾರ ಮಾಡುತ್ತಿದೆ ಎಂದರೆ ಸಣ್ಣ ಸಮುದಾಯಗಳ ಗತಿ ಏನು ಎಂದು ಪ್ರಶ್ನಿಸಿದರು. ಹಸಿದವರ ಅನ್ನವನ್ನು ಕಿತ್ತುಕೊಂಡು ತಿನ್ನುವ ಭಾವನೆ ಬರುತ್ತಿದೆ.

ಅತಿ ಹಿಂದುಳಿದ ವರ್ಗದಲ್ಲಿ ನೂರಾರು ಜಾತಿ ಇರುವುದರಿಂದ ಸಂಘಟನೆ ಮಾಡಲು ನಿರ್ಧರಿಸಲಾಗಿದೆ. ಬಡತನದ ಕೊರತೆ ಇರುವುದರಿಂದ ಅವರನ್ನು ಜಾಗೃತಿಗೊಳಿಸಿ ಸಣ್ಣ ಸಮುದಾಯದ ನೆರವಿಗೆ ಬರಲು ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.