ತುಮಕೂರು: ಕುಟುಂಬದ ಆರೋಗ್ಯವನ್ನು ಲೆಕ್ಕಿಸದೆ ಮನೆ ಮನೆಗೆ ತೆರಳಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಿರತರಾಗಿರೋ ಅಂಗನವಾಡಿ ಕಾರ್ಯಕರ್ತರ ಪಾತ್ರ ಬಹುಮುಖ್ಯವಾಗಿದೆ. ಇಂಥವರನ್ನು ಗುರುತಿಸಿ ತುಮಕೂರು ಗ್ರಾಮಾಂತರ ಶಾಸಕ ಡಿ. ಸಿ. ಗೌರಿಶಂಕರ್ ಪಾದಪೂಜೆ ಮಾಡಿದ್ದಾರೆ.
ಜೆಡಿಎಸ್ ಶಾಸಕ ಡಿ. ಸಿ. ಗೌರಿಶಂಕರ್ ತಮ್ಮ ಕ್ಷೇತ್ರದ ಜನರಿಗೆ ಕೊರೊನಾ ಸಂಕಷ್ಟ ಎದುರಾದಾಗ ಕೊರೊನಾ ವಾರಿಯರ್ಸ್ ಬೆನ್ನೆಲುಬಾಗಿ ನಿಂತಿದ್ದಾರೆ. ಗಂಡ, ಮನೆ, ಮಕ್ಕಳನ್ನ ಬಿಟ್ಟು ಹಳ್ಳಿಹಳ್ಳಿಗೆ ತೆರಳಿ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.
ತುಮಕೂರು ತಾಲೂಕಿನ ಕೈದಾಳದ ಗ್ರಾಮದಲ್ಲಿ ನಡೆದ ಈ ಸಮಾರಂಭರದಲ್ಲಿ ಭಾಗಿಯಾಗಿದ್ದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿಗೆ ಪಾದಪೂಜೆ ಮಾಡೋ ಮೂಲಕ ಕೊರೊನಾ ವಾರಿಯರ್ಸ್ಗೆ ಬೃಹತ್ ಪಾದಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವತಃ ಶಾಸಕ ಗೌರಿಶಂಕರ್ ಅವರೇ ಅಂಗನವಾಡಿ ಕಾರ್ಯಕರ್ತೆಯರ ಕಾಲು ತೊಳೆದು, ಅರಿಶಿಣ, ಕುಂಕುಮ ಹೂಗಳನ್ನ ಹಾಕಿ ಪಾದಪೂಜೆ ನೆರವೇರಿಸಿದರು.
ಬಳಿಕ ಈ ಬಗ್ಗೆ ಮಾತನಾಡಿದ ಶಾಸಕರು, ನನ್ನ ಜೀವನ ಇರೋವರೆಗೂ ನಿಮ್ಮ ಸೇವೆಗೆ ಸಿದ್ಧ. ಏನೇ ಸಮಸ್ಯೆಯಿದ್ರೂ ನನ್ನ ಬಳಿ ಹೇಳಿಕೊಳ್ಳಿ ಅಂದ್ರು.