ETV Bharat / state

ಕಾಮಗಾರಿ ತಡೆಗೆ ಸಹಿ ಹಾಕುವಾಗ ಜ್ಞಾನ ಇರಲಿಲ್ವೇ: ಬಿಎಸ್​ವೈಗೆ ಶಾಸಕ ಗೌರಿಶಂಕರ್​ ತರಾಟೆ - tumkur latest news

ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿ ಮುಂದುವರೆಯಲು ಮಧುಗಿರಿ ವಿಧಾನಸಭೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಹಕಾರ ನೀಡಿದ್ದಕ್ಕೆ ಈಗ ಋಣ ತೀರಿಸಿ ಎಂದು ತುಮಕೂರು ಗ್ರಾಮಾಂತರ ಜೆಡಿಎಸ್​​ ಶಾಸಕ ಡಿ.ಸಿ. ಗೌರಿಶಂಕರ್ ಅವರು ಸಿಎಂ ಯಡಿಯೂರಪ್ಪಗೆ ಆಗ್ರಹಿಸಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಹಕರಿಸಿದ್ದಕ್ಕೆ ಈಗ ಖುಣ ತೀರಿಸಿ: ಶಾಸಕ ಡಿ.ಸಿ.ಗೌರಿಶಂಕರ್
author img

By

Published : Oct 25, 2019, 9:10 AM IST

Updated : Oct 25, 2019, 1:59 PM IST

ತುಮಕೂರು: ನೀವು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿ ಮುಂದುವರೆಯಲು ಮಧುಗಿರಿ ವಿಧಾನಸಭೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಹಕಾರ ನೀಡಿದ್ದಕ್ಕೆ ಈಗ ಋಣ ತೀರಿಸಿ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪಗೆ ಒತ್ತಾಯಿಸಿದ್ದಾರೆ.

ಕಾಮಗಾರಿ ತಡೆಗೆ ಸಹಿ ಹಾಕುವಾಗ ಜ್ಞಾನ ಇರಲಿಲ್ವೇ?: ಬಿಎಸ್​ವೈಗೆ ಶಾಸಕ ಗೌರಿಶಂಕರ್​ ತರಾಟೆ

ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನು ಕಡಿತಗೊಳಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪಗೆ ವಿರುದ್ಧ ಕಿಡಿಕಾರಿದ್ರು. ಹೆಚ್.ಡಿ. ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದ ವೇಳೆ 91 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಆದ್ರೆ ರಸ್ತೆ ಕಾಮಗಾರಿಗಳು ಸುಸ್ಥಿತಿಯಲ್ಲಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಸುಳ್ಳು ಮಾಹಿತಿ ನೀಡಿ ಕಾಮಗಾರಿಗಳನ್ನು ತಡೆಹಿಡಿಯುವಂತೆ ಮಾಜಿ ಶಾಸಕ ಸುರೇಶ್ ಗೌಡಗೆ ಪತ್ರ ಬರೆಯುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಯಡಿಯೂರಪ್ಪ ಅವರೇ, ಕಾಮಗಾರಿ ತಡೆಹಿಡಿಯಿರಿ ಎಂಬ ಪತ್ರಕ್ಕೆ ಮನ್ನಣೆ ನೀಡುವಾಗ ನಿಮಗೆ ಜ್ಞಾನ ಇರಲಿಲ್ಲವೇ? ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಶಾಸಕರೆಲ್ಲರೂ ನಿಮ್ಮ ಕುಟುಂಬದವರೇ, ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗಬೇಕು. ಆದ್ರೆ ಅದನ್ನು ನೀವು ಮಾಡಿಲ್ಲ. 2008ರಲ್ಲಿ ನಾನು ಮಧುಗಿರಿ ಕ್ಷೇತ್ರದಲ್ಲಿ 28ನೇ ವಯಸ್ಸಿನಲ್ಲೇ ಶಾಸಕನಾಗಿದ್ದೆ. ಬಿಜೆಪಿಯಲ್ಲಿ 110 ಶಾಸಕರಿದ್ದ ವೇಳೆ ಬಿಎಸ್​ವೈ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿ ಎಂಬ ಉದ್ದೇಶದಿಂದ ನಾನು ಅಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಆನಂತರ ಜನರ ಆರ್ಶೀವಾದದಿಂದ ಮತ್ತೊಮ್ಮೆ ಶಾಸಕನಾಗಿದ್ದು, ಇದೀಗ ಅನುದಾನ ಹಂಚಿಕೆಯಲ್ಲಿ ವಿಷಯದಲ್ಲಿ ಅಂದಿನ ಖುಣ ತೀರಿಸಿ, ತಾರತಮ್ಯ ಮಾಡಬೇಡಿ ಎಂದರು.

ಪ್ರಧಾನಿ ಮೋದಿ ಹೊಗಳಿದ ಜೆಡಿಎಸ್ ಶಾಸಕ ಗೌರಿಶಂಕರ್

ಇನ್ನು, ಇದೇ ವೇಳೆ ಪ್ರಧಾನಿ ಮೋದಿಯವರನ್ನ ಹೊಗಳಿದ ಶಾಸಕ ಗೌರಿಶಂಕರ್​, ಮೋದಿಯವರಿಗೆ ಈ ದೇಶದಲ್ಲಿ ಒಂದು ಒಳ್ಳೆ ಹೆಸರಿದೆ. ದೇಶ ಅಭಿವೃದ್ಧಿ ಮಾಡುವ ಒಳ್ಳೆ ಅಜೆಂಡಾ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. ದೇಶದ ಬಗೆಗಿನ ಅವರ ದೃಷ್ಟಿಕೋನ ಒಳ್ಳೆಯದಿದೆ. ಬಿಜೆಪಿಯಲ್ಲಿನ ಕೆಲ ನಾಯಕರಿಂದ ಆ ಪಕ್ಷಕ್ಕೆ ಹಾನಿಯಾಗುತ್ತಿದೆ. ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡರಂತಹವರಿಂದ ಬಿಜೆಪಿಗೆ ಕೆಟ್ಟ ಹೆಸರು ಬರ್ತಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ರಸ್ತೆ ಕಾಮಗಾರಿಗೆ ಬಿಡುಗಡೆಯಾದ ಹಣವನ್ನ ತಡೆಹಿಡಿಯುವಂತೆ ಸುರೇಶ್ ಗೌಡ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಸುರೇಶ್ ಗೌಡ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಈ ಕುರಿತು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯಪಾಲರಿಗೂ ನಾನು ಟ್ವೀಟ್ ಮಾಡಿ ವಿಚಾರ ತಿಳಿಸುತ್ತೇನೆ ಎಂದು ಶಾಸಕ ಗೌರಿಶಂಕರ್​ ಹೇಳಿದ್ರು.

Intro:Body:
ಸಿಎಂ ಆಗಿ ಮುಂದುವರೆಯಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನನ್ನ ಖುಣ ತೀರಿಸಿ….. ಶಾಸಕ ಗೌರಿಶಂಕರ್ ನೋವಿನ ನುಡಿ….

ತುಮಕೂರು

ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಆಗಿ ಮುಂದುವರೆಯಲು ಮಧುಗಿರಿ ವಿಧಾನಸಭೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಹಕಾರ ನೀಡಿದ್ದಕ್ಕೆ ಇದೀಗ ಖುಣ ತೀರಿಸಿ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ನೊಂದು ನುಡಿದ ಘಟನೆ ನಡೆದಿದೆ.

ಹೌದು ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನು ಕಡಿತಗೊಳಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಗೆ ಮನವಿ ಮಾಡಿದರು.

ಎಚ್.ಡಿ. ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದ ವೇಳೆ 91 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಆದ್ರೆ ರಸ್ತೆ ಕಾಮಗಾರಿಗಳು ಸುಸ್ಥಿತಿಯಲ್ಲಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಸುಳ್ಳು ಮಾಹಿತಿ ನೀಡಿ ಕಾಮಗಾರಿಗಳನ್ನು ತಡೆಹಿಡಿಯುವಂತೆ ಮಾಜಿ ಶಾಸಕ ಸುರೇಶ್ ಗೌಡ ಪತ್ರ ಬರೆದಿದ್ದಾರೆ. ಈ ಮೂಲ್ಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ತಡೆ ಹಿಡಿಯಿರಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪತ್ರ ಮೇಲೆ ಬರೆಯುವಾಗ ನಿಮಗೆ ಜ್ಞಾನ ಇರಲಿಲ್ಲವೇ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಶಾಸಕರೆಲ್ಲರೂ ನಿಮ್ಮ ಕುಟುಂಬದವರೇ ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗಬೇಕು ಆದ್ರೆ ಅದನ್ನು ಮಾಡಿಲ್ಲ ಎಂದರು.

2008ರಲ್ಲಿ ಮಧುಗಿರಿ ಕ್ಷೇತ್ರದಲ್ಲಿ 28 ನೇ ವಯಸ್ಸಿನಲ್ಲೇ ಶಾಸಕನಾಗಿದ್ದೆ, 110 ಶಾಸಕರಿದ್ದ ವೇಳೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿ ಎಂಬ ಉದ್ದೇಶದಿಂದ ನಾನು ಅಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಆನಂತರ ಜನರ ಆಶೀವಾಱದಿಂದ ಮತ್ತೊಮ್ಮೆ ಶಾಸಕನಾಗಿದ್ದು ಇದೀಗ ಅನುದಾನ ಹಂಚಿಕೆಯಲ್ಲಿ ವಿಷಯದಲ್ಲಿ ಅಂದಿನ ಖುಣ ತೀರಿಸಿ, ತಾರತಮ್ಯ ಮಾಡಬೇಡಿ ಎಂದರು.

ಕೆಜೆಪಿ ಪಕ್ಷ ಕಟ್ಟಿದ್ದ ವೇಳೆ ಮಾಜಿ ಶಾಸಕ ಸುರೇಶ್ ಗೌಡ ಅಂದು ನಿಮ್ಮ ವಿರುದ್ಧ ನಾಯಿ ನರಿಗಳು ಬಿಜೆಪಿ ಪಕ್ಷ ಬಿಟ್ಟು ಹೋದ್ರೆ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನಿಮಗೆ ಅವಮಾನ ಮಾಡಿದ್ದವರ ಪತ್ರಕ್ಕೆ ಮನ್ನಣೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಬೈಟ್ : ಡಿ.ಸಿ. ಗೌರಿಶಂಕರ್, ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ.

Conclusion:
Last Updated : Oct 25, 2019, 1:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.