ತುಮಕೂರು: ಒಳ ಮೀಸಲಾತಿ ಹೆಚ್ಚಳ ನಿರ್ಧಾರಕ್ಕೆ ವಿರೋಧ ಪಕ್ಷಗಳ ನಾಯಕರು ಟೀಕೆ ಮಾಡ್ತಿರೋ ವಿಚಾರದಲ್ಲಿ ಅವರು ಟೀಕೆ ಮಾಡುವ ಪಾತ್ರವನ್ನ ಅಭಿನಯಿಸುತ್ತಿದ್ದಾರೆ. ಟೀಕೆ ಮಾಡಲಿ. ಸಿದ್ದರಾಮಯ್ಯನವರು ಆತ್ಮಸಾಕ್ಷಿಯಾಗಿ ಮಾತನಾಡಿರುವ ವಿಚಾರ ಅಲ್ಲ ಎಂದು ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿಮದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿಗೆ ಅನುಗುಣವಾಗಿ ಹೇಳಿರೋ ಮಾತು. ಮುಸ್ಲಿಂ ಸಮುದಾಯಕ್ಕೆ ಒಳ್ಳೆಯದಾಗಿದೆ ಎಂದು ನಾವು ಭಾವಿಸಿದ್ದೇವೆ. EWSನಲ್ಲಿ 10%ಮಿಸಲಾತಿ ಕೊಟ್ಟಿದ್ರು. ಲಿಫ್ಟ್ ಓವರ್ ಕಮ್ಯೂನಿಟಿಸ್ 3.5%ಗಿಂತ ಹೆಚ್ಚು ಇರಲಿಲ್ಲ ಎಂದರು. ಆದಾಯ 8 ಲಕ್ಷಕ್ಕಿಂತ ಕಡಿಮೆ ಇರೋರು ಬಹಳ ಕಡಿಮೆ ಇದ್ರು. 1ರಿಂದ 1.5% ಇರೋರಿಗೆ 10% ಮೀಸಲಾತಿ ಹೆಚ್ಚಳ ಮಾಡಲಿಕ್ಕೆ ಆಗ್ತಾ ಇರಲಿಲ್ಲ. ನಾವು ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳ ಮಾಡಿದಾಗ, EWSನಲ್ಲಿ ಸ್ವಲ್ಪ ಕೋಟಾನಾ ಬಳಸಿಕೊಳ್ಳೋಣ ಅಂತಾ ಅನ್ಕೊಂಡಿದ್ವಿ ಎಂದರು.
ಇದನ್ನೂ ಓದಿ : ಮೀಸಲಾತಿ ಪರಿಷ್ಕರಣೆ ಅಸಾಂವಿಧಾನಿಕ, ಕೂಡಲೇ ರಾಜ್ಯ ಸರ್ಕಾರ ವಜಾಗೊಳ್ಳಲಿ: ಸಿದ್ದರಾಮಯ್ಯ
EWSನಲ್ಲಿ 10% ಅನ್ನು ಸಂಪೂರ್ಣವಾಗಿ ಬಳಸಿಕೊಳ್ಳದೇ ಸ್ವಲ್ಪ ರೆಡ್ಯೂಸ್ ಮಾಡ್ತಿವಿ ಅಂತಾ ಭಾವಿಸಿದ್ದೆವು. ಆದ್ರೆ ಕೇಂದ್ರ ಸರ್ಕಾರದವ್ರು ಭಾರೀ ಸ್ಪಷ್ಟವಾಗಿ ಇದ್ರು. ಆ 10% ಅನ್ನು ಯಾವುದೇ ಕಾರಣಕ್ಕೂ ಟಚ್ ಮಾಡಂಗಿಲ್ಲ ಎಂದರು. ಅದನ್ನು ಹಿಂದುಳಿದ ವರ್ಗ, ಎಸ್ಸಿ, ಎಸ್ಟಿಗೆ ಬಳಸೋಕೆ ಬಿಡಲ್ಲ. ಅದನ್ನು EWS ಆಗಿಯೇ ಇಡಬೇಕು ಅಂತಾ ಹೇಳಿದ್ರು. ಹಾಗಾಗಿ ಅದನ್ನು ನಾವು ಟಚ್ ಮಾಡೊಕೆ ಆಗಿಲ್ಲ ಎಂದರು.
ಇದನ್ನೂ ಓದಿ : ಕರ್ನಾಟಕದಲ್ಲಿ ಮೀಸಲಾತಿ ರದ್ದು ಕ್ರಮಕ್ಕೆ ಮುಸ್ಲಿಂ ನಾಯಕರ ಆಕ್ರೋಶ: ಕಾನೂನು ಹೋರಾಟಕ್ಕೆ ನಿರ್ಧಾರ
ಆಗ ನಮಗೆ ಆಯ್ಕೆ ಇದ್ದಿದ್ದು ಒಂದೇ. ಯಾವುದಾದರೂ ಒಂದು ದೊಡ್ಡ ಸಮುದಾಯವನ್ನು ಮೀಸಲಾತಿಯಿಂದ ಹೊರತೆಗೆದು EWSನಲ್ಲಿ ಎಂಪವರ್ ಮಾಡೋದು. 8ರಿಂದ 10% ಇರುವ ಮುಸ್ಲಿಂ ಸಮುದಾಯ 2ಬಿನಲ್ಲಿ ಇದ್ರು. ನಿಮಗೊಂದು ಗೊತ್ತಿರ್ಲಿ, ಮುಸ್ಲಿಮರನ್ನು ಮೂರು ಕೆಟಗರಿಯಲ್ಲಿ ಇಟ್ಟಿದ್ವಿ. ಪ್ರವರ್ಗ ಒಂದರಲ್ಲಿ ಇದ್ದಾರೆ. 2ಎನಲ್ಲಿ ಇದ್ದಾರೆ, 2ಬಿನಲ್ಲಿ ಎಕ್ಸ್ ಕ್ಲೂಸಿವ್ ಆಗಿ ಇಡಲಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ : ಮೀಸಲಾತಿ ವಿಚಾರ.. ಡಿಕೆಶಿ ಹೇಳಿಕೆಗೆ ಖಡಕ್ ಉತ್ತರ ಕೊಟ್ಟ ಯತ್ನಾಳ್
2ಬಿಯಿಂದ ತೆಗೆದಿದ್ದರಿಂದ ಅವರೇನು 4%ಗಾಗಿ ಫೈಟ್ ಮಾಡ್ತಾ ಇದ್ರು. ಈಗ 10%ಗಾಗಿ ಫೈಟ್ ಮಾಡ್ತಾ ಇದ್ದಾರೆ. ಅವರಿಗೆ ಏನು ಭಾವನೆ ಅಂದ್ರೆ, ನಾವು ಬ್ರಾಹ್ಮಣರು ಮತ್ತು ಇತರೆ ಸಮುದಾಯದ ಜೊತೆ ಫೈಟ್ ಮಾಡಿಲಿಕ್ಕೆ ಆಗೊಲ್ಲ ಅನ್ನೋದು. ಆದ್ರೆ ನಾವು ಅವರಿಗೆ ಕನ್ವಿನ್ಸ್ ಮಾಡ್ತಾ ಇದ್ದೀವಿ. 8-10ಲಕ್ಷ ಆದಾಯ ಇರುವ ಬ್ರಾಹ್ಮಣರು ಕೂಡ ಈ ಕೆಟಗೆರಿನಲ್ಲಿ ಇಲ್ಲ, ಜನರಲ್ ನಲ್ಲೇ ಬರ್ತಾರೆ. ಹೀಗಾಗಿ ಅವರಿಗೆ 10% ಒಳಗೆ ಸ್ಕೋಪ್ ಸಿಗ್ತಾ ಇದೆ ಎಂದರು.
ಇದನ್ನೂ ಓದಿ : ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡ್ತಿದೆ: ಹೆಚ್ ಡಿ ಕುಮಾರಸ್ವಾಮಿ