ತುಮಕೂರು: ರೈತ ಸಂಘದ ಕಾರ್ಯಕರ್ತೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಾನು ಮನುಷ್ಯ, ಮನವಿ ಮಾಡಿಕೋ, ಅದರ ಬದಲು ಆದೇಶಿಸಲು ಬರಬೇಡ ಎಂದು ಹೇಳಿದರೂ ಕೇಳದೆ ಮಹಿಳೆ ಜೋರಾಗಿ ಏನ್ರೀ ಮಾಡುತ್ತಿರಾ ಎಂದರು. ಆಗ ನಾನು ಮುಚ್ಚಮ್ಮ ಬಾಯಿ ಸಾಕು. ಈ ರೀತಿ ಮಾತನಾಡಬೇಡ ರಾಸ್ಕಲ್ ಎಂದೆ. ನನಗೂ ಸ್ವಾಭಿಮಾನವಿದೆ. ನಾನು ಮನುಷ್ಯನೇ, ಅವರಿವರ ಬಳಿ ಬೈಸಿಕೊಂಡು ಹೋಗುವುದಕ್ಕೆ ಆಗುತ್ತದೆಯೇ ಎಂದು ಮಾಧ್ಯಮದವರನ್ನು ಸಚಿವರು ಪ್ರಶ್ನಿಸಿದರು.
ನಿನ್ನೆ ಸುಮಾರು 900 ಎಕರೆಯಷ್ಟು ದೊಡ್ಡದಾದ ಎಸ್. ಅಗ್ರಹಾರ ಕೆರೆಯನ್ನು ವೀಕ್ಷಿಸಲು ಹೋದಂತಹ ಸಮಯದಲ್ಲಿ ಅನೇಕರು ತಮ್ಮ ಅಹವಾಲನ್ನು ತಿಳಿಸಲು ಬಂದಿದ್ದರು. ಆ ಸಮಯದಲ್ಲಿ ರೈತ ಸಂಘದ ಕಾರ್ಯಕರ್ತೆಯರನ್ನು ಕರೆದು ಸಚಿವರು ಸಮಸ್ಯೆ ಕೇಳಲು ಮುಂದಾಗಿದ್ದರು. ಈ ವೇಳೆ ರೈತ ಕಾರ್ಯಕರ್ತೆ ಮಹಿಳೆಯೊಬ್ಬರು 130 ಎಕರೆ ಜಮೀನು ಒತ್ತವರಿಯಾಗಿದೆ. ನೀವೇನು ಮಾಡುತ್ತೀದ್ದೀರಿ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಆಗ ನಾನು ಮಂತ್ರಿಯಾಗಿರುವುದು ಈಗ, ಇನ್ನು ಆ ಸ್ಥಳಕ್ಕೆ ನಿನ್ನೆ ಹೊಗಿದ್ದೇನೆ. ನನ್ನ ಪ್ರಶ್ನೆ ಮಾಡುತ್ತಾ ಇದೆಯಲ್ಲಮ್ಮ. ಇಲ್ಲಿಯವರೆಗೂ ನೀನು ಏನು ಮಾಡುತ್ತಿದ್ದಿಯಮ್ಮ ಎಂದು ಕೇಳಿದೆ. ಅದಕ್ಕೇನೆ ಎಲ್ಲಿದ್ರಿ ಇಷ್ಟು ದಿನ ಎಂದು ನನ್ನ ಮೇಲೆ ಆ ಮಹಿಳೆ ರೇಗಿದಳು. ನಾನು ಮನುಷ್ಯ ಮನವಿ ಮಾಡಿಕೊ ಅದರ ಬದಲು ಆದೇಶಿಸಲು ಬರಬೇಡ ಎಂದು ಹೇಳಿದರೂ ಕೇಳದೇ, ಜೋರಾಗಿ ಏನ್ರಿ ಮಾಡುತ್ತಿರಾ ಎಂದರು. ಆಗ ನಾನು ಮುಚ್ಚಮ್ಮ ಬಾಯಿ ಸಾಕು. ಈ ರೀತಿ ಮಾತಾಡಬೇಡ ರಾಸ್ಕಲ್ ಎಂದು ಗುಡುಗಿದೆ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟನೆ ನೀಡಿದರು.
ಆಗ ಮಧ್ಯೆ ಪೊಲೀಸ್ ಅಧಿಕಾರಿಗಳು ಬಂದು ಸಾರ್ ಈ ಮಹಿಳೆ ಪ್ರತಿ ಬಾರಿಯೂ ಅಧಿಕಾರಿಗಳ ಹತ್ತಿರ ಹೀಗೆಯೇ ವರ್ತಿಸುವುದು ಎಂದು ತಿಳಿಸಿದರು. ಈ ರೀತಿಯ ಘಟನೆ ನಡೆಯಬಾರದಿತ್ತು ನಡೆಯಿತು. ನನಗೂ ಬೇಸರವಾಗಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನನ್ನ ಮಂತ್ರಿ ಮಾಡಿಲ್ಲ. ತಬ್ಬಿಕೊಂಡು ಯಾರಿಗೂ ಮುತ್ತು ನೀಡಿಲ್ಲ. ನಾನು ರಾಜೀನಾಮೆ ನೀಡುವ ಸ್ಥಿತಿ ಬರುವುದಿಲ್ಲ ಎಂದು ತಿರುಗೇಟು ನೀಡಿದರು.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ ಸಚಿವರು, ಹೊರಗಡೆಯಿಂದ ಜಿಲ್ಲೆಗೆ ಆಗಮಿಸಿದವರು ಹೆಚ್ಚು ಜನರಿದ್ದಾರೆ. ಅದಷ್ಟು ಹೊರಗಿನಿಂದ ಬಂದವರನ್ನು ಬೇರೆ ಕಡೆ ಸ್ಥಳಾಂತರಗೊಳಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿ ಗುಣಮುಖರಾದವರನ್ನು ಅವರವರ ಮನೆಗಳಿಗೆ ಕಳುಹಿಸಲಾಗುತ್ತಿದೆ. ಅಲ್ಲದೇ ನಗರ ಭಾಗದಿಂದ ಹೊರಗೆ ಇಟ್ಟು ಕ್ವಾರಂಟೈನ್ ಮಾಡಲಾಗುತ್ತದೆ ಎಂದು ತಿಳಿಸಿದರು.