ETV Bharat / state

ಎಲೆಕ್ಷನ್​ಗಾಗಿ ಹಲವು ಕಂಪನಿಗಳಿಂದ ಹೆಚ್‌ಡಿಕೆ ಸಾವಿರಾರು ಕೋಟಿ ಕಲೆಕ್ಟ್‌ ಮಾಡಿದ್ದಾರೆ: ಸಚಿವ ಚಲುವರಾಯಸ್ವಾಮಿ ಆರೋಪ - CHALUVARAYASWAMY

ರಾಜ್ಯ ಉಪಚುನಾವಣೆ ಮತ್ತು ಮಹಾರಾಷ್ಟ್ರ ಎಲೆಕ್ಷನ್ ಮುಂದಿಟ್ಟುಕೊಂಡು ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ನೂರಾರು ಕಂಪನಿಗಳಿಂದ ಸಾವಿರಾರು ಕೋಟಿ ಹಣ ಕಲೆಕ್ಟ್ ಮಾಡಿರುವುದು​ ಸತ್ಯ ಎಂದು ಸಚಿವ ಚಲುವರಾಯಸ್ವಾಮಿ ಆರೋಪಿಸಿದ್ದಾರೆ.

ಸಚಿವ ಚಲುವರಾಯಸ್ವಾಮಿ
ಸಚಿವ ಚಲುವರಾಯಸ್ವಾಮಿ (ETV Bharat)
author img

By ETV Bharat Karnataka Team

Published : Nov 18, 2024, 10:13 PM IST

ಮಂಡ್ಯ: "ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಮತ್ತು ಮಹಾರಾಷ್ಟ್ರ ಎಲೆಕ್ಷನ್ ಮುಂದಿಟ್ಟುಕೊಂಡು ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ನೂರಾರು ಕಂಪನಿಗಳಿಂದ ಸಾವಿರಾರು ಕೋಟಿ ಹಣ ಕಲೆಕ್ಟ್ ಮಾಡಿರುವುದು​ ಸತ್ಯ" ಎಂದು ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ದುಡ್ಡು ಖರ್ಚು ಮಾಡಿದ ತಕ್ಷಣ ಚುನಾವಣೆ ಗೆಲ್ಲಲ್ಲ. ಉಪ ಚುನಾವಣೆಯಲ್ಲಿ ದುಡ್ಡಿನಲ್ಲಿ ಅವರ ಜೊತೆ ಫೈಟ್ ಮಾಡಲಾಗಲಿಲ್ಲ. ನಮ್ಮ ಬಳಿ ಹಣವಿಲ್ಲ, ಗ್ಯಾರಂಟಿ ನೀಡಿದ್ದೇವೆ ಎಂದು ಜನರ ಬಳಿ ಮತ ಕೇಳಿದ್ದೇವೆ. 40 ಪರ್ಸೆಂಟ್ ಹಗರಣ ಮಾಡಿದ್ದರಿಂದಲೇ ಬಿಜೆಪಿ ಸರ್ಕಾರ ಹೋಯ್ತು. ನಮ್ಮ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಮತ್ತೆ ಪ್ರಯತ್ನ ಮಾಡುತ್ತಿದೆ" ಎಂದು ಕಿಡಿಕಾರಿದರು.

ಸಚಿವ ಚಲುವರಾಯಸ್ವಾಮಿ (ETV Bharat)

"ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ವಿಚಾರ‌ಕ್ಕೆ ಪ್ರತಿಕ್ರಿಯಿಸಿ, ಹಿಂದೆ ಇದೂ ಕೂಡ ಪ್ರೂವ್ ಆಗಿದೆ. ಇದು ಮೊದಲ ಬಾರಿ ಅಲ್ಲ. ಇವರು ಆಪರೇಷನ್​ ಕಮಲ‌ ಮಾಡ್ತಿರೋದು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಇದೇ ಬಿ.ಎಸ್‌ ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿಸಲು ಆಪರೇಷನ್​ ಕಮಲ ಮಾಡಿದ್ದರು" ಎಂದು ದೂರಿದರು.

"ಎಷ್ಟು ಹಣ ಕೊಟ್ರೋ ಚುನಾವಣೆಗೆ ಎಷ್ಟು ಹಾಕಿದ್ರೋ ಅದು ನನಗೆ ಗೊತ್ತಿಲ್ಲ. ಆಗ ಆಪರೇಷನ್​ ಕಮಲಕ್ಕೆ ಒಳಗಾದವರು, ಹಣ ಖರ್ಚು ಮಾಡದೇ ಚುನಾವಣೆ ಮಾಡಿಲ್ಲ. ಹಣ ಪಡೆಯದೇ ಅವರು ಕಾಂಗ್ರೆಸ್​-ಜೆಡಿಎಸ್ ನಿಂದ ಬಿಜೆಪಿಗೆ ಹೋಗಿಲ್ಲ. ಈಗ ಈ ಬಹುಮತದ ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿ - ಜೆಡಿಎಸ್ ನವರು ಈ ಸರ್ಕಾರ ಉಳಿಯಲ್ಲ ಅಂತಿದ್ದಾರೆ. ಹಾಗಾದರೆ ಆಪರೇಷನ್​ ಕಮಲದ ಉದ್ದೇಶದಿಂದಲೇ ಈ ರೀತಿ ಹೇಳಿರೋದು ಅನಿಸುತ್ತೆ" ಎಂದರು.

ಸರ್ಕಾರ ಉಳಿಯಲ್ಲ ಎಂದು ಹೆಚ್​ಡಿಕೆ 20 ಸಲ ಹೇಳಿದ್ದಾರೆ: "ಈ ಮಾತನ್ನು ಕುಮಾರಸ್ವಾಮಿ 20 ಬಾರಿ ಹೇಳಿದ್ದಾರೆ. ಬಿಜೆಪಿಯವರು ಹೇಳಿದ್ದಾರೆ. ಈ ಉಪಚುನಾವಣೆಯಲ್ಲೂ ಹಲವರು ಸರ್ಕಾರ ಉಳಿಯಲ್ಲ ಅಂದಿದ್ದಾರೆ. ಆಪರೇಷನ್​ ಕಮಲಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ?. ಅವ್ರು ಪ್ರಯತ್ನ ಮಾಡ್ತಿದ್ದಾರೆ ಎಂಬುವುದಕ್ಕೆ ಇದೇ ಸಾಕ್ಷಿ ಸಾಕಲ್ವ. ಅವರು ಎಷ್ಡು ದುಡ್ಡು ಕೊಡ್ತೀನಿ ಅಂದಿದ್ದಾರೆ ಅದು ಈಗ ಬೇಡ. ಒಂದಲ್ಲ ಒಂದು ದಿನ ಆ ಸತ್ಯ ಹೊರಗೆ ಬಂದೆ ಬರುತ್ತೆ. ಸದ್ಯ ಆ ಸತ್ಯ ಅಂತೂ ಅವರ ಬಾಯಲ್ಲೆ ಬಂದಿದೆ. ನೂರು ಕೋಟಿ ಆಫರ್ ವಿಚಾರ, ಈ ಮೊದಲು ಆಪರೇಷನ್​ನಲ್ಲಿ ಎಷ್ಟು ಕೊಟ್ಟಿದ್ರೋ ಗೊತ್ತಿಲ್ಲ. ಈಗ ಅದು ಡಬಲ್ ಆಗಿರಬಹುದು" ಎಂದು ಲೇವಡಿ ಮಾಡಿದರು.

ನಾವು ಹಗರಣ ಮಾಡಿಲ್ಲ: "ಈಗ ಚುನಾವಣೆಗಳು ಮೊದಲಿನಂತೆ ನಡೆಯುತ್ತಿಲ್ಲ. ಹಾಗಾಗಿ ಜಾಸ್ತಿ ಆಫರ್ ಕೊಟ್ಟಿರಬಹುದೇನೋ. ಹಗರಣಗಳು ಇದ್ರೆ ಸರ್ಕಾರ ಉಳಿಯಲ್ಲ. ನಾವು ಹಗರಣ ಮಾಡಿಲ್ಲ. ನಮ್ಮದನ್ನು ಯಾವುದಾದರೂ ಹಗರಣ ಪ್ರೂವ್ ಮಾಡಿದ್ದಾರಾ? ಸಿಎಂ ಸೇರಿದಂತೆ ಹಲವರ ಮೇಲೆ ಆರೋಪ ಮಾಡಿದ್ದಾರೆ. ಅವರು ಒಂದನ್ನೂ ನಿರೂಪಿಸಿಲ್ಲ, ಆಪರೇಷನ್ ಕಮಲದ ಮೂಲಕ ನಮ್ಮ ಸರ್ಕಾರ ತೆಗೆಯಲು ಮುಂದಾಗಿದ್ದಾರೆ" ಎಂದು ಆರೋಪಿಸಿದರು.

"ನಮ್ಮ ಶಾಸಕರಲ್ಲಿ ಹಲವರನ್ನು ಬಿಜೆಪಿ ಅವರು ಸಂಪರ್ಕ ಮಾಡಿದ್ದಾರೆ. ಒಂದು ವರ್ಷದಿಂದಲೂ ಈ ಪ್ರಯತ್ನ ಮಾಡ್ತಾ ಇದ್ದಾರೆ. ನಮ್ಮವರು ಅವರಿಗೆ ಮನ್ನಣೆ ಕೊಡ್ತಾ ಇಲ್ಲ. ನಮ್ಮ ಶಾಸಕರನ್ನು ಸಂಪರ್ಕ ಮಾಡಿರೋದು ಸತ್ಯ. ಆಡಿಯೋ ವಿಡಿಯೋ ಯಾರ ಹತ್ತಿರ ಇದೆ ಅವರು ಬಿಡುಗಡೆ ಮಾಡ್ತಾರೆ" ಎಂದರು.

ಇದನ್ನೂ ಓದಿ: ಬಿಜೆಪಿಯಿಂದ ₹50 ಕೋಟಿ ಅಲ್ಲ, ₹100 ಕೋಟಿ ಆಫರ್: ಮತ್ತೆ ಆರೋಪ ಮಾಡಿದ ಶಾಸಕ ರವಿಕುಮಾರ್​ ಗಣಿಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.