ತುಮಕೂರು: ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸುವ ಸಂಬಂಧ ನೀರಾವರಿ ಇಲಾಖೆ ಅಧಿಕಾರಿಗಳು ನನ್ನನ್ನು ದಾರಿತಪ್ಪಿಸಿಲ್ಲ. ಅಕಸ್ಮಾತ್ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಧಿಕಾರಿಗಳು ತಪ್ಪಿಸುತ್ತಿರುವುದು ಗೊತ್ತಾಗುತ್ತಿದ್ದಂತೆ ನನಗೆ ಹೇಳಬೇಕಿತ್ತು ಎಂದು ಸಂಸದ ಬಸವರಾಜ್ ಅವರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿರುಗೇಟು ನೀಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ನಮ್ಮ ನಮ್ಮಲ್ಲೇ ಸಂಸದ ಬಸವರಾಜ್ ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ. ಅಧಿಕಾರಿಗಳು ಮಿಸ್ ಗೈಡ್ ಮಾಡಿದ್ದರೆ ಸಂಸದರು ಗೈಡ್ ಮಾಡಬೇಕಿತ್ತು ಎಂದರು. ಶಿರಾ ನಗರಕ್ಕೆ 0.5 ಟಿಎಂಸಿ ನೀರು ಕುಡಿಯಲು ಅಗತ್ಯವಿದೆ. ಮದಲೂರು ಕೆರೆಗೆ ನೀರು ಹರಿಸುವ ಮಾರ್ಗದಲ್ಲಿ ಮಾಜಿ ಸಚಿವ ಟಿ.ಬಿ ಜಯಚಂದ್ರ ಅವೈಜ್ಞಾನಿಕವಾಗಿ ಕೆಲಸ ಮಾಡಿಸಿದ್ದಾರೆ.
ಹೀಗಾಗಿ ಮದಲೂರು ಕೆರೆಗೆ ನೀರು ಹರಿಸುವ ಮೊದಲು ಶಿರಾ ನಗರದ ಜನರಿಗೆ ಕುಡಿವ ನೀರು ಕೊಡುವ ಜವಾಬ್ದಾರಿಯಿದೆ. ಒಟ್ಟು 0.9 ಟಿಎಂಸಿ ನೀರು ಕೊಡುತ್ತಿದ್ದೇವೆ, ಹೆಚ್ಚುವರಿ ನೀರನ್ನು ಕೊಡಲು ಸಾಧ್ಯವಿಲ್ಲ ಎಂದರು.
ಓದಿ: ಮದಲೂರು ಕೆರೆಗೆ ಹೇಮಾವತಿ ನದಿ ನೀರು ಹರಿಸಬಹುದಾಗಿದೆ: ಸಂಸದ ಬಸವರಾಜ್