ETV Bharat / state

ಕೋವಿಡ್ ಆರೈಕೆ ಕೇಂದ್ರದ ಬಳಿ ಸಂಗೀತ ಆಲಿಸಿದ ಸಚಿವ ಮಾಧುಸ್ವಾಮಿ

ತುಮಕೂರು ಜಿಲ್ಲಾ ಕೋವಿಡ್ ಆರೈಕೆ ಕೇಂದ್ರಕ್ಕೆ ತೆರಳಿದ ಸಚಿವ ಮಾಧುಸ್ವಾಮಿ, ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅಲ್ಲದೆ ಸೋಂಕಿತರಿಗಾಗಿ ಆಯೋಜಿಸಿದ್ದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಕೆಲಕಾಲ ಕುಳಿತು ಸಂಗೀತ ಆಲಿಸಿದರು.

madhuswamy
ಸಚಿವ ಮಾಧುಸ್ವಾಮಿ
author img

By

Published : Jun 8, 2021, 8:49 AM IST

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ರೇಣುಕಾ ವಿದ್ಯಾಪೀಠದಲ್ಲಿನ ಕೋವಿಡ್ ಆರೈಕೆ ಕೇಂದ್ರಕ್ಕೆ ತೆರಳಿ ಸೋಂಕಿತರಿಗೆ ಧೈರ್ಯ ತುಂಬಿದರು.

ಸಂಗೀತ ಆಲಿಸಿದ ಸಚಿವ ಮಾಧುಸ್ವಾಮಿ

ಕೇಂದ್ರದ ಕಾಂಪೌಂಡ್ ಬಳಿ ಪ್ರತಿ ನಿತ್ಯ ಆಯೋಜಿಸಲಾಗುವ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಕೆಲಕಾಲ ಕುಳಿತು ಸಂಗೀತ ಆಲಿಸಿದರು. ಅಲ್ಲದೆ ಸೋಂಕಿತರು ಯಾವುದೇ ರೀತಿಯಿಂದಲೂ ಭಯ ಪಡಬಾರದು. ಜಿಲ್ಲಾಡಳಿತ ಹಾಗೂ ರೇಣುಕಾ ವಿದ್ಯಾಪೀಠದ ಸಹಯೋಗದಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗುವುದು. ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಸೋಂಕಿನ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರ ಬಳಿ ಬಂದು ಕನಿಷ್ಠ ಚಿಕಿತ್ಸೆ ಸೌಲಭ್ಯದ ಕುರಿತು ಮಾಹಿತಿ ಪಡೆದು ಸೋಂಕು ಹರಡುವಿಕೆ ತಡೆಗಟ್ಟಬೇಕು ಎಂದು ಇದೇ ವೇಳೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಜ್ಯೋತಿ ಗಣೇಶ್ ಹಾಜರಿದ್ದರು.

ಇದನ್ನೂ ಓದಿ: ಸಿಸಿಬಿ ಪೊಲೀಸರಿಂದ ಐಷಾರಾಮಿ ಕಾರು ಮಾರಾಟ ಪ್ರಕರಣ: ಸಿಐಡಿ ತನಿಖೆ ಚುರುಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.