ತುಮಕೂರು : ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರೋದು ನನಗೆ ಗೊತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕೊಟ್ಟಿರೋದು ಪಕ್ಷದ ವರಿಷ್ಠರಿಗೆ ಬಿಟ್ಟಿದೆ. ಪಕ್ಷದಲ್ಲಿ ಏನು ತೀರ್ಮಾನ ತೆಗೆದುಕೊಳ್ತಾರೆ, ಪಕ್ಷದ ಆ ತೀರ್ಮಾನಕ್ಕೆ ಅನುಯಾಯಿಗಳಾಗಿ ಹೋಗಬೇಕು ಎಂದರು.
ನಾವೆಲ್ಲಾ ಯಡಿಯೂರಪ್ಪ ಸಹಪಾಠಿಗಳು, ನಮಗೆಲ್ಲ ಏನು ಅನ್ನಿಸುತ್ತಿಲ್ಲ. ನಮಗೆಲ್ಲಾ ಅಂತಹ ವಾತಾವರಣ ಸೃಷ್ಟಿಯಾಗಿಲ್ಲ. ಯಡಿಯೂರಪ್ಪನವರಿಂದಲೇ ನಾವೆಲ್ಲಾ ಕ್ಯಾಬಿನೆಟ್ ಮಿನಿಸ್ಟ್ರು ಆದವರು.
ನಮಗೆ ಪಕ್ಷ ಯಾವ ವಿಷಯದಲ್ಲೂ ಬೇರ್ಪಡೆ ಮಾಡೋದು ಮಾಡಿಲ್ಲ. ನಾವೆಲ್ಲಾ ಫ್ರೀಯಾಗಿ ಕೆಲಸ ಮಾಡ್ತಿದ್ದೇವೆ. ಸುರೇಶ್ ಗೌಡರಿಗೆ ಎಲ್ಲಾ ಸಹಕಾರ ಕೊಟ್ಟಿದ್ದೇವೆ. ಅವರು ಕರೆಯುವ ಮೀಟಿಂಗ್ ನಲ್ಲಿ ಎಲ್ಲದರಲ್ಲೂ ಮಾತನಾಡಿದ್ದೇವೆ ಎಂದರು.
ಪಾರ್ಟಿ ವ್ಯವಹಾರಕ್ಕೂ ಉಸ್ತುವಾರಿಗೂ ಸಂಬಂಧ ಇಲ್ಲ. ಪಾರ್ಟಿ ತಗೊಂಡಿರುವ ಹೆಸರಲ್ಲಿ ಸೂಚಿಸಿ ಅಂದ್ರೆ ಕೂತು ಮಾತನಾಡ್ತೀವಿ. ನಾನು ಸುರೇಶ್ ಗೌಡರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ.
ನಮ್ಮ ಕಡೆಯಿಂದ ಆಗುವ ಸಹಕಾರ ಕೊಡ್ತೇನೆ. ಸುರೇಶ್ ಗೌಡ್ರು ಕಾಂಗ್ರೆಸ್ ಗೆ ಹೋಗೋ ತೀರ್ಮಾನ ತಗೋತಾರೆ ಎಂದು ನಂಗೆ ಅನ್ಸಿಲ್ಲ. ಸಣ್ಣಪುಟ್ಟ ಗೊಂದಲಗಳು ಇದ್ರೆ ಸೆಟ್ಲು ಮಾಡ್ಕೋತಾರೆ ಎಂದರು.