ತುಮಕೂರು: ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರೋ ಗ್ರಾಮೀಣ ಭಾಗದ ಜನರಿಗೆ ದಿನಸಿ ಕಿಟ್ನ್ನು ವಿತರಿಸಲು ತೆರಳಿದ್ದ ಮಧುಗಿರಿ ಶಾಸಕ ವೀರಭದ್ರಯ್ಯ ಅವರಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಜಿಲ್ಲೆ ಮಧುಗಿರಿ ತಾಲೂಕಿನ ಚಿಕ್ಕದಾಳವಟ್ಟ ಗ್ರಾಮದಲ್ಲಿ ನಡೆದಿದೆ.
ಈ ವೇಳೆ ಬೇಸರಗೊಂಡ ಶಾಸಕರು, ನಾನೇನು ನನ್ನ ಮಗಳ ಮದುವೆಗೆ ಆಮಂತ್ರಣ ನೀಡಲು ಬಂದಿಲ್ಲ. ಬದಲಾಗಿ ಸಂಕಷ್ಟಕ್ಕೆ ಒಳಗಾಗಿರೋ ಜನರಿಗೆ ದಿನಸಿ ಕಿಟ್ ವಿತರಿಸಲು ಬಂದಿದ್ದೇನೆ. ಆದರೆ, ಇಂತಹ ಸಮಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಆಕ್ಷೇಪ ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮ ಆಯೋಜಸುವಂತೆ ಪಿಡಿಒಗೆ ಸೂಚಿಸಲಾಗಿತ್ತು. ಆದ್ರೆ ಅವರು ಸಮರ್ಪಕವಾಗಿ ಆಯೋಜನೆ ಮಾಡದಿದ್ದರಿಂದ ಕೋಪಗೊಂಡ ಶಾಸಕರು ಚಿಕ್ಕದಾಳವಟ್ಟ ಪಿಡಿಒಗೆ ಏಕವಚನದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು. ನಂತರ ಬೇಸರಗೊಂಡು ಸ್ಥಳದಿಂದ ಹೊರಟು ಹೋದರು.