ತುಮಕೂರು: ಮನೆ ಮುಂದೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಹೆಣ್ಣು ಮಗುವನ್ನು ಚಿರತೆ ಕಚ್ಚಿಕೊಂಡು ಹೋಗಿರುವ ಘಟನೆ ತಾಲೂಕಿನ ಬೈಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ನಿವಾಸಿಯೊಬ್ಬರ ತವರು ಮನೆಗೆ ಬಂದಿದ್ದ ಚಂದನ ಎಂಬುವವರು ತಮ್ಮ ಮಗುವಿನೊಂದಿಗೆ ಮನೆ ಮುಂದೆ ಕುಳಿತಿದ್ದರಂತೆ. ಈ ವೇಳೆ ಏಕಾಏಕಿ ಪೊದೆಯೊಳಗಿಂದ ಹಾರಿ ಬಂದ ಚಿರತೆ ಮಗುವನ್ನು ಕಚ್ಚಿಕೊಂಡು ಓಡಿದೆ. ಸಮೀಪದಲ್ಲಿದ್ದ ಮಗುವಿನ ತಾತ ಗಂಗ ಚಿಕ್ಕಣ್ಣ ಹಾಗೂ ಪಕ್ಕದ ಮನೆಯವರು ಚಿರತೆ ಹಿಂದೆ ಓಡಿದರೂ ಚಿರತೆ ಸಿಕ್ಕಿಲ್ಲ.
ಇನ್ನು ರಕ್ತದ ಗುರುತನ್ನು ಪತ್ತೆ ಹಚ್ಚಿ ಸಾಗಿದ ಕುಟುಂಬಸ್ಥರಿಗೆ ಪೊದೆಯೊಂದರಲ್ಲಿ ಮಗುವಿನ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಪತ್ತೆ ಹಚ್ಚಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ.