ತುಮಕೂರು : ಅಂಗನವಾಡಿ ಸಹಾಯಕಿಯನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮ(Halkure village)ದಲ್ಲಿ ಜರುಗಿದೆ.
ಅಂಗನವಾಡಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಭಾರತಿ (Anganwadi activist Bharati ) (30) ಕೊಲೆಯಾದವರು. ಈಕೆಯ ಪತಿ ನಾಗರಾಜ ಈ ಹಿಂದೆಯೇ ಮೃತಪಟ್ಟಿದ್ದಾರೆ. ನಾಗರಾಜ ಅವರ ಅಕ್ಕನ ಮಗ ದಿವಾಕರ ಈ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಅಂಗನವಾಡಿ ಕಟ್ಟಡದ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಅಲ್ಲಿ ವಾಸವಿರುವ ಮನೆಯ ಓರ್ವ ಮಹಿಳೆ ಈ ದೃಶ್ಯ ನೀಡಿದ್ದಾರೆ. ಅಷ್ಟೇ ಅಲ್ಲದೆ ಆಕೆಯನ್ನು ಕೊಲೆ ಮಾಡುವಾಗ ಸಾರ್ವಜನಿಕರೂ ಸಹ ಘಟನೆಯನ್ನು ನೋಡಿದ್ದಾರೆ.
ಅವರೂ ಆಕೆಯನ್ನು ಕಾಪಾಡಲು ಹೋದಾಗ ಆರೋಪಿ ಅವರಿಗೆ ಬೆದರಿಕೆ ಹಾಕಿದ್ದಾನಂತೆ. ಈ ಸಂಬಂಧ ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಘಟನೆ ನಡೆದ ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು (Honnavalli police)ತೆರಳಿ ಪರಿಶೀಲನೆ ನಡೆಸಿದ್ದಾರೆ.