ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕು ಹಾಗೂ ಮಧುಗಿರಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿಯಿಡೀ ವ್ಯಾಪಕ ಮಳೆಯಾಗಿದೆ. ಇದರಿಂದಾಗಿ ಸಿದ್ದರಬೆಟ್ಟದ ಮೇಲ್ಭಾಗದಲ್ಲಿರುವ ಅಪರೂಪದ ತೀರ್ಥ ಕಲ್ಯಾಣಿಯಲ್ಲಿ ಅಪಾರ ಪ್ರಮಾಣದ ನೀರು ಉಕ್ಕಿ ಹರಿಯುತ್ತಿದೆ.
ಸಿದ್ದೇಶ್ವರ ಶಿವಲಿಂಗುವಿನ ಮುಂಭಾಗದಲ್ಲಿ ತೀರ್ಥ ಕಲ್ಯಾಣಿ ಇದೆ. ರಾತ್ರಿ ಸುರಿದ ಮಳೆಯಿಂದ ಇದು ನಿರಂತರವಾಗಿ ಉಕ್ಕಿ ಹರಿಯುತ್ತಿದೆ. ಸಾಮಾನ್ಯವಾಗಿ ಬೆಟ್ಟ ಹತ್ತಿ ಬರುವ ಭಕ್ತರು ದೊಣೆ ನೀರಿನಲ್ಲಿ ಸ್ನಾನ ಮಾಡುವ ಪ್ರತೀತಿ ಇದೆ. ಸಿದ್ದೇಶ್ವರ ಲಿಂಗದ ಮುಂದಿನ ದೊಣೆ ನೀರಿನಿಂದ ಸ್ನಾನ ಮಾಡಿದರೆ, ಅನೇಕ ಚರ್ಮರೋಗಗಳು ಗುಣಮುಖವಾಗುತ್ತವೆ ಎಂಬ ಪ್ರತೀತಿ ಭಕ್ತರಲ್ಲಿದೆ.
ಓದಿ: ಸಿಲಿಂಡರ್ ಬೆಲೆ ಏರಿಕೆಗೆ ಆಕ್ರೋಶ: ಆರ್‌ಎಸ್‌ಎಸ್ ಈ ಬಗ್ಗೆ ದನಿ ಎತ್ತಬೇಕೆಂದ ಹೆಚ್ಡಿಕೆ