ETV Bharat / state

ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಒಂದು, ಜೆಡಿಎಸ್​​ ಶಾಸಕರ ಕ್ಷೇತ್ರಕ್ಕೆ ಮತ್ತೊಂದು ನ್ಯಾಯವೇ?: ಗೌರಿಶಂಕರ್​​ ಆಕ್ರೋಶ - ಜೆಡಿಎಸ್ ಶಾಸಕ

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ದಿನಗಳಿಂದ ನೀರು ಹರಿಸುವ ಸಂಬಂಧ ರಾಜಕೀಯ ಮಾಡಲಾಗುತ್ತಿದೆ. ಅಲ್ಲದೆ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಬಿಜೆಪಿ ಎಂಎಲ್ಎ ಕ್ಷೇತ್ರಕ್ಕೆ ಒಂದು ನ್ಯಾಯ, ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ಮತ್ತೊಂದು ನ್ಯಾಯ: ಗೌರಿಶಂಕರ್ ಆಕ್ರೋಶ
author img

By

Published : Sep 10, 2019, 9:59 PM IST

ತುಮಕೂರು: ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನಾಲೆಗಳ ಮೂಲಕ ನೀರು ಹರಿದು ಬರುತ್ತಿದೆ. ಇನ್ನೊಂದೆಡೆ ನಿಗದಿಯಂತೆ ಉಪ ನಾಲೆಗಳಿಗೆ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದ್ರೆ ಉಪ ನಾಲೆಗಳಿಗೆ ನೀರು ಹರಿಸಿಕೊಳ್ಳಲು ರೈತರು ಮುಂದಾಗುತ್ತಿದ್ದಾರೆ. ಹೀಗಾಗಿ ನಾಲೆಗಳ ಬಳಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬಿಜೆಪಿ ಎಂಎಲ್ಎ ಕ್ಷೇತ್ರಕ್ಕೆ ಒಂದು ನ್ಯಾಯ, ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ಮತ್ತೊಂದು ನ್ಯಾಯ: ಗೌರಿಶಂಕರ್ ಆಕ್ರೋಶ

ಅದರಲ್ಲಿ ಮುಖ್ಯವಾಗಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ದಿನಗಳಿಂದ ನೀರು ಹರಿಸುವ ಸಂಬಂಧ ರಾಜಕೀಯ ಮಾಡಲಾಗುತ್ತಿದೆ. ಅಲ್ಲದೆ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಜಿಲ್ಲಾಡಳಿತ ನಿಯಮಿತವಾಗಿ ನೀರು ಹರಿಸುವ ಕುರಿತಂತೆ ಸಮಯ ನಿಗದಿಪಡಿಸಿದೆ. ಯಾವುದೇ ರಾಜಕೀಯ ಹಸ್ತಕ್ಷೇಪ ಆಗದಂತೆ ನಾಲೆಯ ಸುತ್ತಲೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ತುಮಕೂರು ತಾಲೂಕು ಅದಲಾಪುರ ಗ್ರಾಮದ ಬಳಿ ಹೇಮಾವತಿ ನಾಲೆಯಿಂದ ಸೆಪ್ಟೆಂಬರ್ 10ರಂದು ಉಪ ನಾಲೆಗೆ ನೀರು ಹರಿಸಲಾಗುವುದು ಎಂದು ಈಗಾಗಲೇ ಜಿಲ್ಲಾಡಳಿತ ತಿಳಿಸಿತ್ತು. ಅದರಂತೆ ಇಂದು ಹೇಮಾವತಿ ನಾಲಾ ಅಧಿಕಾರಿಗಳು ನೀರು ಹರಿಸುವ ಕುರಿತಂತೆ ಕ್ರಮ ಕೈಗೊಂಡಿರಲಿಲ್ಲ. ರೈತರು ತುಮಕೂರು ತಾಲೂಕು ಜೆಡಿಎಸ್ ಅಧ್ಯಕ್ಷ ಅನಂತ್ ಅವರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಅನಂತ್,​ ಗೇಟ್ ತೆಗೆದು ನೀರು ಹರಿಸಿಕೊಳ್ಳುವಂತೆ ಹೇಳಿ ಅಲ್ಲಿಂದ ಹೋಗುತ್ತಿದ್ದಂತೆಯೇ ದಾರಿ ಮಧ್ಯೆ ಅಡ್ಡಹಾಕಿದ ಪೊಲೀಸರು ಅವರನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಶಾಸಕ ಗೌರಿಶಂಕರ್, ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಹೇಮಾವತಿ ನಾಲಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಗೌರಿಶಂಕರ್, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ತುಮಕೂರು ಗ್ರಾಮಾಂತರ ವ್ಯಾಪ್ತಿಗೆ ಬರುವಂತಹ ಕ್ಯಾತ್ಸಂದ್ರ ಪೊಲೀಸ್ ಠಾಣೆ ಮತ್ತು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದಿರುವಂತಹ ಸಬ್ ಇನ್ಸ್​​ಪೆಕ್ಟರ್​​ಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಸಿಎಸ್ ಪುರ ಬಳ್ಳಿ ನಿಯಮ ಮೀರಿ ಹೇಮಾವತಿ ನಾಲೆಯಿಂದ ಪ್ರಬನಹಳ್ಳಿಕೆರೆಗೆ ನೀರನ್ನು ಹರಿಸಿಕೊಳ್ಳಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವಾಗಿರುವುದರಿಂದ ಅಲ್ಲಿಗೆ ನಿಯಮ ಪಾಲನೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ನಿಯಮ ಮತ್ತು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಮತ್ತೊಂದು ನಿಯಮವೇ? ನೀರಿಲ್ಲದೆ ರೈತರು ಅನುಭವಿಸಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:ಬಿಜೆಪಿ ಎಂಎಲ್ಎ, ಮಂತ್ರಿಗಳು ಇರುವಂತಹ ಕ್ಷೇತ್ರಕ್ಕೆ ಒಂದು ನ್ಯಾಯವೇ ಮತ್ತು ಜೆಡಿಎಸ್ ಶಾಸಕರು ಇರುವಂತ ಕ್ಷೇತ್ರಗಳಿಗೆ ಮತ್ತೊಂದು ನ್ಯಾಯ....... ಜೆಡಿಎಸ್ ಶಾಸಕ ಗೌರಿಶಂಕರ್ ಆಕ್ರೋಶ......

ತುಮಕೂರು
ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನಾಲೆಗಳ ಮೂಲಕ ನೀರು ಹರಿದು ಬರುತ್ತಿದೆ. ಇನ್ನೊಂದೆಡೆ ನಿಗದಿಯಂತೆ ಉಪ ನಾಲೆಗಳಿಗೆ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದ್ರೆ ಉಪ ನಾಲೆಗಳಿಗೆ ನೀರು ಹರಿಸಿ ಕೊಳ್ಳಲು ರೈತರು ಮುಂದಾಗುತ್ತಿದ್ದಾರೆ ಹೀಗಾಗಿ ನಾಲೆಗಳ ಬಳಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಅದರಲ್ಲಿ ಮುಖ್ಯವಾಗಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಹಲವುದಿನಗಳಿಂದ ನೀರು ಹರಿಸುವ ಸಂಬಂಧಪಟ್ಟಂತೆ ರಾಜಕೀಯ ಮಾಡಲಾಗುತ್ತಿದೆ ಅಲ್ಲದೆ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಜಿಲ್ಲಾಡಳಿತ ನಿಯಮಿತವಾಗಿ ನೀರು ಹರಿಸುವ ಕುರಿತಂತೆ ಸಮಯವನ್ನು ನಿಗದಿಪಡಿಸಿದೆ. ಯಾವುದೇ ರಾಜಕೀಯ ಹಸ್ತಕ್ಷೇಪ ವಾಗದಂತೆ ನಾಳೆಯ ಸುತ್ತಲೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ತುಮಕೂರು ತಾಲೂಕು ಅದಲಾಪುರ ಗ್ರಾಮದ ಬಳಿ ಹೇಮಾವತಿ ನಾಲೆಯಿಂದ ಸೆಪ್ಟೆಂಬರ್10 ರಂದು ಉಪ ನಾಲೆಗೆ ನಾಲೆಗೆ ನೀರು ಹರಿಸಲಾಗುವುದು ಎಂದು ಈಗಾಗಲೇ ಜಿಲ್ಲಾಡಳಿತ ತಿಳಿಸಿತ್ತು. ಅದರಂತೆ ಇಂದು ಹೇಮಾವತಿ ನಾಲಾ ಅಧಿಕಾರಿಗಳು ನೀರು ಹರಿಸುವ ಕುರಿತಂತೆ ಕ್ರಮ ಕೈಗೊಂಡಿರಲಿಲ್ಲ. ರೈತರು ತುಮಕೂರು ತಾಲೂಕು ಜೆಡಿಎಸ್ ಅಧ್ಯಕ್ಷ ಅನಂತ್ ಅವರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಅನಂತ ಗೇಟ್ ತೆಗೆದು ನೀರು ಹರಿಸಿ ಕೊಳ್ಳುವಂತೆ ಹೇಳಿ ಅಲ್ಲಿಂದ ಹೋಗುತ್ತಿದ್ದಂತೆಯೇ ದಾರಿಮಧ್ಯೆ ಅಡ್ಡಹಾಕಿದ ಪೊಲೀಸರು ಅವರನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಶಾಸಕ ಗೌರಿಶಂಕರ್ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಹೇಮಾವತಿ ನಾಲಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಗೌರಿಶಂಕರ್, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ತುಮಕೂರು ಗ್ರಾಮಾಂತರ ವ್ಯಾಪ್ತಿಗೆ ಬರುವಂತಹ ಕ್ಯಾತ್ಸಂದ್ರ ಪೊಲೀಸ್ ಠಾಣೆ ಮತ್ತು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದಿರುವಂತಹ ಸಬ್ಇನ್ಸ್ಪೆಕ್ಟರ್ ಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಸಿಎಸ್ ಪುರ ಬಳ್ಳಿ ನಿಯಮ ಮೀರಿ ಹೇಮಾವತಿ ನಾಲೆಯಿಂದ ಪ್ರಬನಹಳ್ಳಿಕೆರೆಗೆ ನೀರನ್ನು ಹರಿಸಿ ಕೊಳ್ಳಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವಾಗಿರುವುದರಿಂದ ಅಲ್ಲಿಗೆ ನಿಯಮಪಾಲನೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ನಿಯಮ ಮತ್ತು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಮತ್ತೊಂದು ನಿಯಮವೇ ನೀರಿಲ್ಲದೆ ರೈತರು ಅನುಭವಿಸಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಎಂಎಲ್ಎ ಬಿಜೆಪಿ ಮಂತ್ರಿಗಳು ಇರುವಂತಹ ಕ್ಷೇತ್ರಕ್ಕೆ ಒಂದು ನ್ಯಾಯವೇ ಮತ್ತು ಜೆಡಿಎಸ್ ಶಾಸಕರು ಇರುವಂತ ಕ್ಷೇತ್ರಗಳಿಗೆ ಮತ್ತೊಂದು ನ್ಯಾಯವೇ ಎಂದು ಬೇಸರ ವ್ಯಕ್ತಪಡಿಸಿದರು.

ಬೈಟ್: ಡಿಸಿ ಗೌರಿಶಂಕರ್, ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ......
ಬೈಟ್: ಅನಂತ್, ಜೆಡಿಎಸ್ ತಾಲೂಕು ಅಧ್ಯಕ್ಷ.....

Body:ತುಮಕೂರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.