ತುಮಕೂರು : ತಿಪಟೂರು ಮಾಜಿ ಶಾಸಕ ಬಿ.ನಂಜಾಮರಿ ಮನೆ ಹಾಗೂ ಅಂಗಡಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಲೆಕ್ಕಪತ್ರವನ್ನು ಪರಿಶೀಲನೆ ನಡೆಸಿದರು.
ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ತಾಲೂಕಿನ ಕಸಬಾ ಹೋಬಳಿ ಬೆಳಗರಹಳ್ಳಿ ನಿವಾಸ ಹಾಗೂ ಅಂಗಡಿಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಕೊಬ್ಬರಿ ಅಂಗಡಿ, ಬಿ.ನಂಜಾಮರಿ ಆಪ್ತ ವರ್ತಕರ ಮನೆ ಹಾಗೂ ಅಂಗಡಿ ಕಚೇರಿಗಳ ಮೇಲೂ ದಾಳಿ ನಡೆದಿದೆ.
ಇದನ್ನೂ ಓದಿ:ACB Raid: ಗದಗ ಕೃಷಿ ಅಧಿಕಾರಿಯ ಶಿವಮೊಗ್ಗ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ, ₹15 ಲಕ್ಷ ನಗದು ಪತ್ತೆ
ದಾಳಿ ಹಿನ್ನೆಲೆ ಸ್ಥಳದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಅಧಿಕಾರಿಗಳಿಂದ ಪರಿಶೀಲನೆ ಮುಂದುವರಿದಿದೆ.