ETV Bharat / state

ಫೆ. 13 ರಂದು ಪ್ರಧಾನಿಯಿಂದ ಹೆಚ್ಎಎಲ್ ಹೆಲಿಕಾಪ್ಟರ್ ಘಟಕ ಲೋಕಾರ್ಪಣೆ - ಸಂಸದ ಬಸವರಾಜು

ಬಹುನಿರೀಕ್ಷಿತ ಹೆಚ್​ಎಎಲ್​​ ಹೆಲಿಕಾಪ್ಟರ್​ ಘಟಕ ಫೆ. 13ರಂದು ಲೋಕಾರ್ಪಣೆ- ಘಟಕಕ್ಕೆ ಹೆಚ್ಚುವರಿಯಾಗಿ 1300 ಎಕರೆ ಅರಣ್ಯ ಜಾಗ - ಸಂಸದ ಜಿ.ಎಸ್​ ಬಸವರಾಜು ಮಾಹಿತಿ

MP GS Basavaraju
ಸಂಸದ ಜಿ.ಎಸ್​ ಬಸವರಾಜು
author img

By

Published : Jan 7, 2023, 11:25 AM IST

ಪ್ರಧಾನಿಯಿಂದ ಹೆಚ್ಎಎಲ್ ಹೆಲಿಕಾಪ್ಟರ್ ಘಟಕ ಲೋಕಾರ್ಪಣೆ:ಸಂಸದ ಜಿ.ಎಸ್​ ಬಸವರಾಜು

ತುಮಕೂರು: ಗುಬ್ಬಿ ತಾಲೂಕು ಬಿದಿರೆಹಳ್ಳ ಕಾವಲ್​​ನಲ್ಲಿ ಫೆಬ್ರವರಿ 13ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೆಚ್ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ನಾಡಿಗೆ ಸಮರ್ಪಿಸಲಿದ್ದಾರೆ ಎಂದು ಸಂಸದ ಬಸವರಾಜು ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದೊಗೆ ಮಾತನಾಡಿದ ಅವರು, 2016ರಲ್ಲಿ ಹೆಚ್‌ಎಎಲ್‌ ಘಟಕಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. 2018ರಲ್ಲಿ ಸಾಂಕೇತಿಕವಾಗಿ ಹೆಲಿಕಾಪ್ಟರ್ ಘಟಕವನ್ನು ಲೋಕಾರ್ಪಣೆ ಮಾಡಲಾಗಿತ್ತು. ಈಗ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಫೆ. 13ರಂದು ಬೆಂಗಳೂರಿನ ಏರ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಗುಬ್ಬಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

ಹೆಚ್​​ಎಎಲ್ ಘಟಕಕ್ಕೆ ಹೆಚ್ಚುವರಿಯಾಗಿ 1300 ಎಕರೆ ಅರಣ್ಯ ಜಾಗ ನೀಡಲಾಗುತ್ತಿದೆ. ಇದರ ಬದಲಾಗಿ ಗುಬ್ಬಿ ತಾಲೂಕಿನಲ್ಲಿ ಅರಣ್ಯ ಇಲಾಖೆಗೆ ಸರ್ಕಾರದ ಜಮೀನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಘಟಕ ವಿಸ್ತರಣೆಯಾಗಲಿದ್ದು ಸಾಕಷ್ಟು ಸಂಖ್ಯೆ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಅವರು ಹೇಳಿದರು. ಮೋದಿ ಜತೆಗೆ ಕೇಂದ್ರ ಮತ್ತು ರಾಜ್ಯ ನಾಯಕರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಹೆಲಿಕಾಪ್ಟರ್ ಘಟಕ ಹತ್ತಿರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸುಮಾರು 50 ಸಾವಿರ ಜನ ಸೇರಲಿದ್ದಾರೆ ಎಂದು ಹೇಳಿದರು.

ಇಎಸ್​​ಐ ಆಸ್ಪತ್ರೆ ಮಂಜೂರು: ಜಿಲ್ಲೆಯ ದಿನ ಕೈಗಾರಿಕಾ ಬೆಳವಣಿಗೆಯಲ್ಲಿ ಕ್ಷೇತ್ರ ಗತಿಯಲ್ಲಿ ಸಾಗುತ್ತಿದೆ ಬೆಂಗಳೂರಿನ ನಂತರ ಅತಿ ವೇಗವಾಗಿ ಅಭಿವೃದ್ಧಿಯಾಗುತ್ತದೆ ಕಾರ್ಮಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಈಗಾಗಲೇ ಇಎಸ್​​ಐ ಆಸ್ಪತ್ರೆ ಮಂಜುರಾಗಿದೆ. ವಸಂತ ನರಸಾಪುರ ಮತ್ತು ಆಮಲಾಪುರ ಎರಡು ಕಡೆಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಗುರ್ತಿಸಲಾಗಿದೆ ಎಂದು ತಿಳಿಸಿದರು.

ಹೆಚ್ಎಎಲ್ ಹೆಲಿಕಾಪ್ಟರ್ ಘಟಕದ ಬಗ್ಗೆ ಒಂದಿಷ್ಟು ಮಾಹಿತಿ: ಹೆಚ್ಎಎಲ್ ಘಟಕದಲ್ಲಿ ಸದ್ಯಕ್ಕೆ 3000 ಕೆಜಿ ತೂಕದ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ನಿರ್ಮಾಣ ಮಾಡಲಿದ್ದು, ಈ ಲಘು ಹೆಲಿಕಾಪ್ಟರ್​​ನಲ್ಲಿ ಐದಾರು ಮಂದಿ ಪ್ರಯಾಣಿಸಬಹುದಾಗಿದೆ. ಭೂಸೇನೆ ಮತ್ತು ವಾಯು ಸೇನೆಯಲ್ಲಿ ಇದನ್ನು ಬಳಕೆ ಮಾಡಲಾಗುವುದು ಎಂದು ಹೇಳಲಾಗಿದೆ. ಹೆಚ್ಎಎಲ್ ಕಾರ್ಖಾನೆ ತುಮಕೂರಿನಲ್ಲಿ 615 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಉತ್ಪಾದನೆ, ರಚನಾತ್ಮಕ ಜೋಡಣೆ, ಅಂತಿಮ ಅಸೆಂಬ್ಲಿ ಲೈನ್ ಸೌಲಭ್ಯಗಳು, ಹೆಲಿಪ್ಯಾಡ್, ಫ್ಲೈಟ್ ಹ್ಯಾಂಗರ್, ಎಟಿಸಿ, ಸಜ್ಜುಗೊಳಿಸಲಾಗಿದೆ. ಹ್ಯಾಂಗರ್, ನಿರ್ವಾಹಕ ಕಟ್ಟಡ ಮತ್ತು ಇತರ ಸೌಲಭ್ಯಗಳು ಪೂರ್ಣಗೊಂಡಿವೆ.

ಹೆಚ್‌ಎಲ್‌ ಪ್ರಕಾರ, ಕಾರ್ಖಾನೆಯು ಉದ್ಯಮದ 4.0 ಮಾನದಂಡಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಐಟಿ ಸೇವೆಗಳು, ಇಂಟಿಗ್ರೇಟೆಡ್ ಬಿಲ್ಡಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ ಎಲ್ಲಾ ಸೇವೆಗಳ ಸಂಪೂರ್ಣ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಹೊಂದಿರುವ ಸಂಪೂರ್ಣ ಕ್ಯಾಂಪಸ್‌ನ ಕಾರ್ಯಾಚರಣೆಯನ್ನು ಕೇಂದ್ರವು ಹೊಂದಿದೆ.

ಸೌಲಭ್ಯದ ಮೊದಲ ಹೆಲಿಕಾಪ್ಟರ್, ಲಘು ಉಪಯುಕ್ತತೆ ಒಂದು ಹೆಲಿಕಾಪ್ಟರ್ , ಈಗಾಗಲೇ ತಯಾರಿಸಲ್ಪಟ್ಟಿದೆ ಹಾಗೂ ಉದ್ಘಾಟನೆಯ ಸಮಯದಲ್ಲಿ ಅದನ್ನು ಹೊರತರಲಾಗುವುದು. ಹೊಸ ಕಾರ್ಖಾನೆ ಜನವರಿ 2016ರಲ್ಲಿ ಪ್ರಧಾನ ಮಂತ್ರಿ ಅಡಿಪಾಯ ಹಾಕಿದ್ದರು. ಲಘು ಉಪಯುಕ್ತತೆಯ ಹೆಲಿಕಾಪ್ಟರ್‌ಗಳನ್ನು ಹಾಗೂ ಅಂತಿಮವಾಗಿ ರಷ್ಯಾದ ಕಮೊವ್‌ 226 ಹೆಲಿಕಾಪ್ಟರ್‌ಗಳನ್ನು ತಯಾರಿಸುತ್ತದೆ. ಹಂತ 1ರ ಕಾರ್ಯಾಚರಣೆಗಳ ಭಾಗವಾಗಿ ವರ್ಷಕ್ಕೆ 30 ಲಘು ಉಪಯುಕ್ತತೆಯ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ರಚಿಸಲಾಗಿದೆ. ಇದನ್ನು ವರ್ಷಕ್ಕೆ 60 ಚಾಪರ್‌ಗಳಿಗೆ ಅಪ್‌ಗ್ರೇಡ್ ಮಾಡಬಹುದು.

ಇದನ್ನೂ ಓದಿ: ಹೆಚ್‌ಎಎಲ್‌ ಹೆಲಿಕಾಪ್ಟರ್ ತಯಾರಿಕಾ ಘಟಕ ವಿಸ್ತರಣೆಗೆ ಪ್ರಸ್ತಾವನೆ: ಜಿ.ಬಸವರಾಜ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.