ETV Bharat / state

ರಾಜ್ಯ ರಾಜಕೀಯದಲ್ಲಿ ಯಾರೇ ಸಿಎಂ ಆದ್ರೂ ಗೊಂದಲ ಸೃಷ್ಟಿ: ಸಚಿವ ಮಾಧುಸ್ವಾಮಿ

ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಎಸ್.ಎಂ ಕೃಷ್ಣ ಹಾಗು ಸಿದ್ದರಾಮಯ್ಯ ಅವರು ಮಾತ್ರ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದ್ದಾರೆ. ಅವರನ್ನು ಬಿಟ್ಟರೆ, ಯಾರೇ ಮುಖ್ಯಮಂತ್ರಿಯಾದರೂ ಸಹ ಅವರ ಆಡಳಿತಾವಧಿಯ ಒಂದೂವರೆ ವರ್ಷಗಳ ನಂತರ ರಾಜಕೀಯ ಗೊಂದಲ ಸೃಷ್ಟಿಯಾಗುತ್ತಲೇ ಇದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

in-state-politics-cm-position-is-creating-problems
ಸಚಿವ ಮಾಧುಸ್ವಾಮಿ
author img

By

Published : Jul 25, 2021, 8:46 PM IST

ತುಮಕೂರು: ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದೂವರೆ ವರ್ಷಗಳ ನಂತರ ರಾಜಕೀಯ ಗೊಂದಲ ಸೃಷ್ಟಿಯಾಗುತ್ತಲೇ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಸ್ಎಂ ಕೃಷ್ಣ ಹಾಗು ಸಿದ್ದರಾಮಯ್ಯ ಅವರು ಮಾತ್ರ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ. ಇನ್ನುಳಿದಂತೆ ಯಾರೇ ಸಿಎಂ ಆಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಹಾಗೂ ನಿರ್ಗಮಿಸುವ ವೇಳೆ ರಾಜಕೀಯ ಗೊಂದಲಗಳು ಸರ್ವೇಸಾಮಾನ್ಯವಾಗಿದ್ದವು ಎಂದು ತಿಳಿಸಿದರು.

'ರಾಜ್ಯ ರಾಜಕೀಯದಲ್ಲಿ ಯಾರೇ ಸಿಎಂ ಆದ್ರೂ ಗೊಂದಲ ಸೃಷ್ಟಿಯಾಗುತ್ತಲೇ ಇದೆ'

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ, ಬಂಗಾರಪ್ಪ, ವೀರಪ್ಪ ಮೊಯಿಲಿ, ಧರ್ಮಸಿಂಗ್, ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಹಾಗೂ ಸದಾನಂದ ಗೌಡ ಅವರುಗಳ ಕಾಲಾವಧಿಯಲ್ಲಿ ಇಂತಹ ಗೊಂದಲಮಯ ರಾಜಕೀಯ ವಾತಾವರಣ ಸೃಷ್ಟಿಯಾಗಿತ್ತು ಎಂದು ಹೇಳಿದರು.

ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೆಚ್​.ಡಿ. ಕುಮಾರಸ್ವಾಮಿಯವರು ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಿರಲಿಲ್ಲ. ಆಗ ರಾಜ್ಯ ರಾಜಕೀಯ ಗೊಂದಲಮಯವಾಗಿತ್ತು ಎಂದು ಹಿಂದಿನ ದಿನಗಳನ್ನು ನೆನೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.