ETV Bharat / state

ಮತದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದೆ: ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ - ಶಿರಾ ಉಪಚುನಾವಣೆ ಅಪ್​ಡೇಟ್ಸ್​​

ಅಭಿವೃದ್ಧಿ ಎಂಬುದು ಕುಂಠಿತವಾಗಿದೆ. ಹೀಗಾಗಿ ಮತದಾರರ ಮನಸ್ಸು ಹೇಗಿದೆ ಎಂಬುದನ್ನು ಅರಿಯಲು ಈ ಚುನಾವಣೆ ಸಹಕಾರಿಯಾಗಿದೆ. ಕ್ಷೇತ್ರದಲ್ಲಿ ಮತದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

congress candidate TB Jayachandra
ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ
author img

By

Published : Nov 3, 2020, 11:37 AM IST

ತುಮಕೂರು: ನಿನ್ನೆ ರಾತ್ರಿಯವರೆಗೂ ಮತದಾರರ ಮನ - ಮನೆಗಳನ್ನು ತಲುಪುವಂತಹ ಪ್ರಯತ್ನ ಮಾಡಿದ್ದು, ಮತದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಿರಾ ನಗರದಲ್ಲಿ ಮತ ಚಲಾಯಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ನನ್ನ ಪ್ರಯತ್ನ ಮಾಡಿದ್ದೇನೆ. ಉಳಿದದ್ದು ಮತದಾರರಿಗೆ ಬಿಟ್ಟಂತಹ ವಿಚಾರವಾಗಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ

ಇದು ವಿಶೇಷವಾದ ಚುನಾವಣೆ ಎಂದು ಭಾವಿಸುತ್ತೇನೆ. ಮತದಾರರು ತೋರಿಸಿದಂತಹ ಪ್ರೀತಿ - ವಿಶ್ವಾಸ ಸಾಕಷ್ಟು ಸಂತಸ ಉಂಟುಮಾಡಿದೆ. 2008ರಲ್ಲಿ ನನಗೆ ಶಿರಾದಲ್ಲಿ ಸಿಕ್ಕಿದ ಸ್ಪಂದನೆ ಈಗಲೂ ಸಿಗುತ್ತಿದೆ ಎಂದರು. ಕೊರೊನಾ ಸೋಂಕು ಹರಡುವ ಭೀತಿ ನಡುವೆಯೂ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಜಾಗೃತಿ ಮೂಡಿಸಿದ್ದೇವೆ, ಅದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಹಾಸನ ಮತ್ತು ಕೆಆರ್ ಪೇಟೆಯಿಂದ ಬಂದಂತಹ ಜನರನ್ನು ಶಿರಾ ವಿಧಾನಸಭಾ ಕ್ಷೇತ್ರದ ಮತದಾರರು ಕೂಡಿಹಾಕಿ ಕ್ಷೇತ್ರದಿಂದ ಓಡಿಸಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿ ಎಂದು ಆರೋಪಿಸಿದ ಜಯಚಂದ್ರ, ಇವೆಲ್ಲವನ್ನು ಗಮನಿಸಿದರೆ ಬೇಸರವೆನಿಸುತ್ತದೆ ಎಂದು ತಿಳಿಸಿದರು.

ಬಿಜೆಪಿ ಪಕ್ಷಕ್ಕೆ ಶಿರಾ ಕ್ಷೇತ್ರದಲ್ಲಿ ಅವಕಾಶವಿಲ್ಲ. ಹಾಗಿದ್ದರೂ ತೋಳ್ಬಲ ಹಾಗೂ ಹಣಬಲದಿಂದ ಗೆಲ್ಲುತ್ತೇವೆ ಎಂಬ ಭಾವನೆ ಹೊಂದಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಈ ಕುರಿತಂತೆ ದೂರು ಕೂಡಾ ನೀಡಿದ್ದೇನೆ ಎಂದರು. ಅಲ್ಲದೇ, ರಾಷ್ಟ್ರೀಯ ಪಕ್ಷವಾದ ಬಿಜೆಪಿ ಇಂತಹ ಕೆಲಸಕ್ಕಿಳಿದರೆ ಜನತಂತ್ರ ವ್ಯವಸ್ಥೆಗೆ ಧಕ್ಕೆ ಎಂದು ಅಸಮಾಧಾನ ಹೊರಹಾಕಿದರು.

ಶಿರಾ ವಿಧಾನಸಭಾ ಉಪಚುನಾವಣೆ ಕ್ಷೇತ್ರಕ್ಕೆ ಮಾತ್ರ ಸೀಮಿತವಾದದ್ದು. ಆದ್ರೆ ಉಪಚುನಾವಣೆ ಹಿನ್ನೆಲೆ ಮೂರು ಪಕ್ಷಗಳ ರಾಜ್ಯಮಟ್ಟದ ಮುಖಂಡರು ಬಂದು ಅಬ್ಬರದ ಪ್ರಚಾರ ಮಾಡಿದ್ದಾರೆ. ಯಾವುದೇ ದೂರಿಗೂ ಕಿಮ್ಮತ್ತು ಬೆಲೆ ಇಲ್ಲದಂತಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.