ತುಮಕೂರು: ನಾನು ಚಪ್ಪಾಳೆ ಶಬ್ದದ ಬೆನ್ನತ್ತಿ ರಂಗಭೂಮಿಗೆ ಬಂದಿದ್ದು ಎಂದು ರಂಗಭೂಮಿ ಕಲಾವಿದ ಹಾಗೂ ಚಿತ್ರನಟ ಅಚ್ಯುತ್ ಕುಮಾರ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 10 ದಿನಗಳ ಅಭಿನಯ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಟನ ರಂಗಕ್ಕೆ ಪಾದಾರ್ಪಣೆ ಮಾಡಲು ನನ್ನನ್ನು ಆಕರ್ಷಿಸಿದ್ದು ಚಪ್ಪಾಳೆ. ಕಲಾವಿದರು ನಟನೆಯ ಸುಖವನ್ನು ತಮ್ಮಷ್ಟಕ್ಕೆ ತಾವೇ ಅನುಭವಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇವಲ 10 ದಿನಗಳಲ್ಲಿ ನಟನಾ ಕಲೆಯನ್ನು ಕಲಿಯಲು ಸಾಧ್ಯವಾಗುವುದಿಲ್ಲ, ಬಹಳ ಪರಿಶ್ರಮವಿರುತ್ತದೆ. ಜೊತೆಗೆ ಪ್ರತಿಯೊಂದು ರಂಗವು ಸಹ ಅದರದೇ ಆದ ಬೆಲೆಯನ್ನು ಹೊಂದಿರುತ್ತದೆ. ಅದಕ್ಕೆ ತಕ್ಕಂತೆ ನಾವು ಹೊಂದಿಕೊಳ್ಳಬೇಕು. ಕೇವಲ ಚಪ್ಪಾಳೆಗೆ ಮಾತ್ರ ನಾವು ಮಾರು ಹೋಗಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೀನಾಸಂ ಸತೀಶ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು.