ETV Bharat / state

ಸಚಿವ ಸ್ಥಾನ ನನಗೆ ಬೇಕಿಲ್ಲ: ಶಾಸಕ ಜ್ಯೋತಿ ಗಣೇಶ್ - ಶಾಸಕ ಜ್ಯೋತಿ ಗಣೇಶ್

''ನನಗೆ ಸಚಿವ ಸ್ಥಾನ ಬೇಡ, ಜೆ.ಸಿ.ಮಾಧುಸ್ವಾಮಿ ಉತ್ತಮ ಸಂಸದೀಯ ಪಟುವಾಗಿದ್ದಾರೆ, ಬಿ.ಸಿ.ನಾಗೇಶ್ ಜಿಲ್ಲೆಯಲ್ಲಿ ಹಿರಿಯರಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಬೇಕು'' ಎಂದು ಶಾಸಕ ಜ್ಯೋತಿ ಗಣೇಶ್ ಹೇಳಿದ್ದಾರೆ.

Tumakuru
ಶಾಸಕ ಜ್ಯೋತಿ ಗಣೇಶ್ ಪ್ರತಿಕ್ರಿಯೆ
author img

By

Published : Jul 31, 2021, 12:44 PM IST

ತುಮಕೂರು: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಮಗೆ ಅದು ಬೇಕಾಗಿಲ್ಲ, ಜನರನ್ನ ಗೆಲ್ಲುವಂತ ಕೆಲಸವನ್ನು ಈ ಕೋವಿಡ್ ಸಂದರ್ಭದಲ್ಲಿ ಮಾಡ್ಬೇಕು ಎಂದು ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಎಂದಿದ್ದಾರೆ.

ಶಾಸಕ ಜ್ಯೋತಿ ಗಣೇಶ್ ಪ್ರತಿಕ್ರಿಯೆ

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಅಭಿಮಾನಿಗಳು ಯಾರೂ ನನ್ನ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಬಾರದು ಪಕ್ಷದಲ್ಲಿ ಸೇವೆ ಮಾಡಿದ್ದ ನೂರಾರು ನಾಯಕರಿದ್ದಾರೆ. ಅಂಥವರನ್ನು ಗುರುತಿಸಿ ಪಕ್ಷ ಸಚಿವ ಸ್ಥಾನ ಕೊಡಲಿ ಎಂದಿದ್ದಾರೆ.

ಸಾಕಷ್ಟು ಜನ ಹಿರಿಯರಿದ್ದಾರೆ, ಮೂರ್ನಾಲ್ಕು ಸಾರಿ ಗೆದ್ದಿರುವವರು ಇದ್ದಾರೆ. ಜೆ.ಸಿ.ಮಾಧುಸ್ವಾಮಿ ಉತ್ತಮ ಸಂಸದೀಯ ಪಟುವಾಗಿದ್ದಾರೆ, ಬಿ.ಸಿ.ನಾಗೇಶ್ ಜಿಲ್ಲೆಯಲ್ಲಿ ಹಿರಿಯರಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದಿದ್ದಾರೆ. ನಾನು ಮಾಧ್ಯಮದ ಮುಖಾಂತರ ಹೇಳ್ತಾ ಇದ್ದೇನೆ, ಕೇಂದ್ರದ ವರಿಷ್ಠರು ಉತ್ತಮವಾದ ಮಂತ್ರಿ ಮಂಡಲ ರಚನೆ ಮಾಡಿ ಒಳ್ಳೆಯ ಸರ್ಕಾರ ಕೊಡ್ತಾರೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.