ತುಮಕೂರು : ಪಾವಗಡ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಮೀರ್ಲಗೊಂದಿ ಗ್ರಾಮದ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ನೀರು ನುಗ್ಗಿದ ಪರಿಣಾಮ 7000 ಸಾವಿರ ಕೋಳಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ನರಸಿಂಹಯ್ಯ ಎಂಬುವರಿಗೆ ಸೇರಿದ ಕೋಳಿ ಕೇಂದ್ರಕ್ಕೆ ನೀರು ನುಗ್ಗಿ 7000 ಕೋಳಿಗಳು ಸಾವನ್ನಪ್ಪಿದ್ದು ಭಾರಿ ಪ್ರಮಾಣ ನಷ್ಟ ಉಂಟಾಗಿದೆ.
ಸುಮಾರು 5 ಲಕ್ಷಕ್ಕೂ ಹೆಚ್ಚು ಹಣ ಸಾಲ ಪಡೆದು ನಿರ್ಮಾಣ ಮಾಡಿದ್ದ ಶೆಡ್ ಮತ್ತು ಕೋಳಿಗಳ ಸಾವಿನಿಂದ ರೈತ ಕಂಗಾಲಾಗಿದ್ದಾನೆ. ಇದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.