ತುಮಕೂರು: ಎರಡು ಬಾರಿ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ರಾಜಕಾರಣಿ ಈ ರಾಷ್ಟ್ರದಲ್ಲಿದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದರು. ಜಿಲ್ಲೆಯ ಕೊರಟಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರೈತರಿಗೆ ಸಾಲ ಮನ್ನಾ ಮಾಡಬೇಕಾದರೆ ಕಾಂಗ್ರೆಸ್‌ನವರು ಅಡ್ಡಿ ಪಡಿಸಿದರು ಎಂದರು.
ಲೋಕಸಭೆ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಬೇಕು ಎಂದ ಬಯಸಿರಲಿಲ್ಲ. ನಾನು ರಾಜಕೀಯ ನಿವೃತ್ತಿಯಾಗಬೇಕು ಎಂದು 2018ರಲ್ಲಿ ಲೋಕಸಭೆಯಲ್ಲಿ ಹೇಳಿದ್ದೆ. ಚುನಾವಣಾ ರಾಜಕೀಯ ಸಾಕಾಗಿದೆ ಅಂತಾ ಹಿಂದೆಯೇ ಹೇಳಿದ್ದೆ, ತುಮಕೂರಿನ ಕೆಲವು ಮುಖಂಡರು ನನ್ನನ್ನು ಬಲಿಪಶು ಮಾಡಿದರು ಎಂದು ಹೇಳಲ್ಲ. ನಾನು ಮುಸ್ಲಿಮರಿಗೆ, ದಲಿತರಿಗೆ, ಗೊಲ್ಲ, ನಾಯಕ ಸಮಾಜಕ್ಕೆ ಮೀಸಲಾತಿಯನ್ನು ಕೊಟ್ಟಿದ್ದೀನಿ ಎಂದು ದೇವೇಗೌಡರು ಸ್ಮರಿಸಿಕೊಂಡರು.
ಇದನ್ನು ಓದಿ:ಮತ್ತೆ ಗೆಲ್ತಾರಾ ಹೆಬ್ಬಾಳ್ಕರ್, ಜೊಲ್ಲೆ, ನಿಂಬಾಳ್ಕರ್..? ರತ್ನಾ ಕೊರಳಿಗೆ ಬೀಳುತ್ತಾ ವಿಜಯದ ಮಾಲೆ?
ನನ್ನನ್ನು ಮುಖ್ಯಮಂತ್ರಿ ಮಾಡಲು ತುಮಕೂರು ಜಿಲ್ಲೆಯ 11 ಸ್ಥಾನಗಳಲ್ಲಿ 9 ಸ್ಥಾನ ಗೆಲ್ಲಿಸಿಕೊಟ್ಟರು. ಕುಮಾರಸ್ವಾಮಿಯವರು ಸುವರ್ಣ ಗ್ರಾಮ, ಸಾಲ ಮನ್ನಾ, ಪಂಚರತ್ನ ಯೋಜನೆಗಳು, ಪ್ರತಿ ಹಳ್ಳಿಗೆ ಕುಡಿಯುವ ನೀರು, ಹೆಣ್ಣು ಮಕ್ಕಳಿಗೆ 6 ಸಾವಿರ ಹೆರಿಗೆ ಭತ್ಯೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಯಾರದರೂ ರಾಜಕಾರಣಿ ಈ ರಾಷ್ಟ್ರದಲ್ಲಿದ್ದರೆ ಅದು ಹೆಚ್ ಡಿ ಕುಮಾರಸ್ವಾಮಿ ಮಾತ್ರ ಎಂದು ಮಾಜಿ ಪ್ರಧಾನಿ ದೇವೇಗೌಡರು ಕೊಂಡಾಡಿದರು.
ಈಗ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ಯಾವ ದೇವೇಗೌಡ ಪಾರ್ಲಿಮೆಂಟ್ನಲ್ಲಿ ನಿಂತು ಕಣ್ಣೀರು ಹಾಕುವ ಕೆಟ್ಟ ಸಂದರ್ಭ ತಂದ ಆ ನಾಯಕನ ಕಣ್ಣಲಿ ನೀರು ಬರಿಸಬೇಕು. ಅವತ್ತು ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಮಾಜಿ ಪ್ರಧಾನಿ ಭಾವುಕರಾದರು.
ಇದನ್ನು ಓದಿ:502 ನಾಮಪತ್ರಗಳು ತಿರಸ್ಕೃತ, 3130 ಅಭ್ಯರ್ಥಿಗಳ ಉಮೇದುವಾರಿಕೆ ಕ್ರಮಬದ್ಧ: ಚುನಾವಣಾ ಆಯೋಗ ಮಾಹಿತಿ
ಇನ್ನೂ ಮಧುಗಿರಿಯ ಕೈಮರ ಗ್ರಾಮದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ.ದೇವೇಗೌಡ, ವೀರಭದ್ರಯ್ಯ ಈ ಕ್ಷೇತ್ರದ ಅಭಿವೃದ್ದಿ ಕಾರ್ಯ ಮಾಡಿದ್ದಾರೆ. ಮಧುಗಿರಿ ಜಿಲ್ಲೆಯಾಗಬೇಕು ಎನ್ನುವುದು ವೀರಭದ್ರಯ್ಯ ಕನಸಾಗಿದೆ ಎಂದರು. ಏಕಶಿಲೆಯನ್ನ ಪ್ರವಾಸಿ ತಾಣ ಮತ್ತು ಇಂಡಸ್ಟ್ರಿಯಲ್ ಕ್ಲಸ್ಟರ್ ಮಾಡುವುದು ಅವರ ಕನಸು. ನಾನು ಯಾರ ಮನಸ್ಸನ್ನು ನೋಯಿಸುವುದಿಲ್ಲ. ಕಾಂಗ್ರೆಸ್ ನವರು ಜೆಡಿಎಸ್ಗೆ 20 ಸೀಟ್ ಬುರುತ್ತೆ ಅಂತ ಹೇಳಿದ್ದಾರೆ. ಬಹುಶಃ ಮಧುಗಿರಿ ಒಂದೇ ಸಾಕು ಉತ್ತರ ಕೊಡೋಕೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ: ನಾಳೆ ರಾಜ್ಯಕ್ಕೆ ಪ್ರಿಯಾಂಕ ಗಾಂಧಿ ಆಗಮನ; ಮೈಸೂರು ಜಿಲ್ಲೆಯಲ್ಲಿ ಭರ್ಜರಿ ಪ್ರಚಾರ
ಇದನ್ನೂ ಓದಿ:ವಿಜಯಪುರ: ಪಕ್ಷದ ಮುಖಂಡರೊಂದಿಗೆ ತಡರಾತ್ರಿ ಮಹತ್ವದ ಸಭೆ ನಡೆಸಿದ ರಾಹುಲ್ ಗಾಂಧಿ