ETV Bharat / state

ಗುಬ್ಬಿ ಬಸ್ ನಿಲ್ದಾಣದಿಂದಲೇ ಕೆಎಸ್‌ಆರ್‌ಟಿಸಿ ಬಸ್ ಕದ್ದ ಕಳ್ಳರು! - thieves theft Govt Bus

ಗುಬ್ಬಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಕೆಎಸ್ಆರ್​ಟಿಸಿ (KSRTC) ಬಸ್ ಅನ್ನು ಕಳ್ಳರು ತೆಗೆದುಕೊಂಡು ಹೋಗಿದ್ದು, ಕುಣಿಗಲ್ ಅಮೃತೂರು ಯಡಿಯೂರು ಸುತ್ತಮುತ್ತಲ ಗ್ರಾಮಗಳ ಸಮೀಪ ಓಡಾಡಿಸಿ ಡೀಸೆಲ್ ಖಾಲಿಯಾದ ನಂತರ ಜನ್ನೇನಹಳ್ಳಿ ಬಳಿ ನಿಲ್ಲಿಸಿ ಪರಾರಿಯಾಗಿದ್ದಾರೆ.

thieves theft Govt Bus from Gubbi bus stop
ಗುಬ್ಬಿ ಬಸ್ ನಿಲ್ದಾಣದಿಂದಲೇ KSRTC ಬಸ್ ಕದ್ದ ಕಳ್ಳರು!
author img

By

Published : Oct 19, 2021, 8:12 AM IST

ತುಮಕೂರು: ಜಿಲ್ಲೆಯ ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಆರ್​ಟಿಸಿ ಬಸ್ ಅನ್ನು ನಿನ್ನೆ ಕಳ್ಳರು ಕದ್ದೊಯ್ದಿದ್ದಾರೆ. ನಂತರ ಬಸ್ಸನ್ನು ಗುಬ್ಬಿ ತಾಲೂಕಿನ ಜನ್ನೇನಹಳ್ಳಿ ಗ್ರಾಮದಲ್ಲಿ ಬಿಟ್ಟುಹೋಗಿದ್ದಾರೆ.

ಗುಬ್ಬಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಕೆಎಸ್ಆರ್​ಟಿಸಿ ಬಸ್ಸನ್ನು ಕಳ್ಳರು ತೆಗೆದುಕೊಂಡುಹೋಗಿ ಕುಣಿಗಲ್ ಅಮೃತೂರು ಯಡಿಯೂರು ಸುತ್ತಮುತ್ತಲ ಗ್ರಾಮಗಳ ಸಮೀಪ ಓಡಾಡಿಸಿದ್ದಾರೆ ಎನ್ನಲಾಗಿದೆ. ಅದರಲ್ಲಿ ಡೀಸೆಲ್ ಖಾಲಿಯಾದ ನಂತರ ಜನ್ನೇನಹಳ್ಳಿ ಬಳಿ ನಿಲ್ಲಿಸಿ ಪರಾರಿಯಾಗಿದ್ದಾರೆ.

ಈ ರೀತಿ ಬಸ್ ನಿಲ್ದಾಣದಿಂದಲೇ ಬಸ್ ಕಳವು ಮಾಡಿರುವುದಕ್ಕೆ ಬಸ್ ನಿರ್ವಾಹಕ ಮತ್ತು ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಕನಿಷ್ಠ ಸಿಸಿಟಿವಿ ಕ್ಯಾಮೆರಾ ಅಳವಡಿಸುವಲ್ಲಿ ಕೂಡ ಕೆಎಸ್ಆರ್​ಟಿಸಿ ಮುಂದಾಗದೇ ಇರುವುದು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಹಾಗೂ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಹಿನ್ನಡೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.