ETV Bharat / state

ಮದಲೂರು ಕೆರೆಗೆ ನೀರು ಹರಿಸುವ ಕೊಟ್ಟ ಮಾತನ್ನು ಸರ್ಕಾರ ಉಳಿಸಿಕೊಂಡಿದೆ: ಶಾಸಕ ರಾಜೇಶ್ ಗೌಡ

ಮದಲೂರು ಕೆರೆಯ ಸಾಮರ್ಥ್ಯ 282 ಎನ್​ಸಿಎಫ್​ಟಿ ಮಾತ್ರ. ಆದರೆ ಹೇಮಾವತಿ ಜಲಾಶಯದಿಂದ 50 ದಿನಗಳ ಕಾಲ ಸತತವಾಗಿ 1,200 ಎಂಸಿಎಫ್​ಟಿ ನೀರನ್ನು ಹರಿಸಲಾಗಿದೆ. ಆದರೂ ಕೆರೆ ತುಂಬಲಿಲ್ಲ ಎಂದರೆ ಅದಕ್ಕೆ ಸ್ಪಷ್ಟವಾದ ಉತ್ತರ ಕೆರೆಯ ತುಂಬೆಲ್ಲಾ ಮರಳು ಮಿಶ್ರಿತ ಮಣ್ಣು ಇರುವುದು. ಇದರಿಂದಾಗಿ ನೀರು ಬಹುಬೇಗ ಅಂತರ್ಜಲ ತಲುಪಿದೆ ಎಂದು ಶಿರಾ ಶಾಸಕ ಡಾ. ರಾಜೇಶ್ ಗೌಡ ಹೇಳಿದ್ದಾರೆ.

MLA Rajesh Gowda
ಶಾಸಕ ರಾಜೇಶ್ ಗೌಡ
author img

By

Published : Feb 23, 2021, 9:03 PM IST

Updated : Feb 23, 2021, 10:32 PM IST

ತುಮಕೂರು: ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸಲು ಸರ್ಕಾರ ನೀಡಿದ್ದ ಭರವಸೆ ಈಡೇರಿದೆ ಎಂದು ಶಿರಾ ಶಾಸಕ ಡಾ. ರಾಜೇಶ್ ಗೌಡ ತಿಳಿಸಿದ್ದಾರೆ.

ಶಿರಾದಲ್ಲಿ ಮಾತನಾಡಿದ ಅವರು, ಮದಲೂರು ಕೆರೆಯ ಸಾಮರ್ಥ್ಯ 282 ಎನ್​ಸಿಎಫ್​ಟಿ ಮಾತ್ರ. ಆದರೆ ಹೇಮಾವತಿ ಜಲಾಶಯದಿಂದ 50 ದಿನಗಳ ಕಾಲ ಸತತವಾಗಿ 1,200 ಎಂಸಿಎಫ್​ಟಿ ನೀರನ್ನು ಹರಿಸಲಾಗಿದೆ. ಆದರೂ ಕೆರೆ ತುಂಬಲಿಲ್ಲ ಎಂದರೆ ಅದಕ್ಕೆ ಸ್ಪಷ್ಟವಾದ ಉತ್ತರ ಕೆರೆಯ ತುಂಬೆಲ್ಲಾ ಮರಳು ಮಿಶ್ರಿತ ಮಣ್ಣು ಇರುವುದು. ಇದರಿಂದಾಗಿ ನೀರು ಬಹುಬೇಗ ಅಂತರ್ಜಲ ತಲುಪಿದೆ ಎಂದರು.

ಶಿರಾ ಶಾಸಕ ಡಾ. ರಾಜೇಶ್ ಗೌಡ

ಅಲ್ಲದೇ ಕೆರೆಯ ಸುತ್ತಮುತ್ತ 35 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ರೈತರ ಬೋರ್​ವೆಲ್​​ಗಳಲ್ಲಿ ಯಥೇಚ್ಛವಾಗಿ ನೀರು ಕಾಣಿಸಿಕೊಳ್ಳುತ್ತಿದೆ. ನೀರು ಹರಿಸಿದ ಸಂದರ್ಭದಲ್ಲಿ ಮುಕ್ಕಾಲು ಭಾಗ ಕೆರೆ ತುಂಬಿ ಹೋಗಿತ್ತು. ಆದರೆ ಹೇಮಾವತಿ ಜಲಾಶಯದಲ್ಲಿ ನೀರು ಕಡಿಮೆಯಾಗಿದ್ದರಿಂದ ನೀರು ಹರಿಸಬೇಕೆಂದು ಸ್ಥಗಿತಗೊಳಿಸಲಾಗಿತ್ತು ಎಂದರು.

ಓದಿ:ಚಿಕ್ಕಬಳ್ಳಾಪುರ ಜಿಲೆಟಿನ್​​​ ಸ್ಫೋಟ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಸುಧಾಕರ್​​​ ಒತ್ತಾಯ

ಮಳೆಗಾಲದಲ್ಲಿಯೂ ಮೊದಲು ಕೆರೆಗೆ ಹೇಮಾವತಿ ಜಲಾಶಯದಿಂದ ನೀರು ಹರಿಸುವಂತೆ ವಿಜಯೇಂದ್ರ ಅವರಿಗೆ ಮನವಿ ಮಾಡಿದ್ದೇವೆ. ಇದಕ್ಕೆ ಸಕಾರಾತ್ಮಕವಾಗಿ ಉತ್ತರ ಕೊಟ್ಟಿದ್ದಾರೆ. ಮದಲೂರು ಕೆರೆಯ ಸಾಮರ್ಥ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ನೀರು ಹರಿಸಲಾಗಿದೆ. ಕೂಡಲೇ ಅಂತರ್ಜಲವನ್ನು ತಲುಪಿದೆ ಎಂದರು.

Last Updated : Feb 23, 2021, 10:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.