ETV Bharat / state

ಗುಬ್ಬಿ ತಾಲೂಕನ್ನು ಕೊರೊನಾ ಮುಕ್ತಗೊಳಿಸಲು ಸ್ವಯಂ ಲಾಕ್​ಡೌನ್​​ ಮೊರೆ ಹೋದ ವರ್ತಕರು - corona news

ಗುಬ್ಬಿ ತಾಲೂಕಿನಲ್ಲಿ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸ್ವಯಂ ಲಾಕ್​ಡೌನ್​ಗೆ ವರ್ತಕರು ನಿರ್ಧರಿಸಿದ್ದಾರೆ.

ಸ್ವಯಂ ಲಾಕ್​ಡೌನ್​​ ಮೊರೆಹೋದ ವರ್ತಕರು
ಸ್ವಯಂ ಲಾಕ್​ಡೌನ್​​ ಮೊರೆಹೋದ ವರ್ತಕರು
author img

By

Published : Jun 22, 2020, 9:39 PM IST

Updated : Jun 22, 2020, 10:25 PM IST

ತುಮಕೂರು: ಗುಬ್ಬಿ ಪಟ್ಟಣದಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ವರ್ತಕರು ಸ್ವಯಂಪ್ರೇರಿತರಾಗಿ ವ್ಯಾಪಾರ ವಹಿವಾಟನ್ನು ಕೆಲವು ಗಂಟೆಗಳಿಗೆ ಮಾತ್ರ ಸೀಮಿತಗೊಳಿಸಲು ಮುಂದಾಗಿದ್ದಾರೆ.

ಸ್ವಯಂ ಲಾಕ್​ಡೌನ್​​ ಮೊರೆಹೋದ ವರ್ತಕರು

ಈಗಾಗಲೇ ಗುಬ್ಬಿ ತಾಲೂಕಿನಲ್ಲಿ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸ್ವಯಂ ಲಾಕ್​ಡೌನ್ ಮಾಡಲು ನಿರ್ಧರಿಸಿದ್ದಾರೆ. ಜೂನ್ 23ರಿಂದ ಜುಲೈ 6ರವರೆಗೆ ಪಟ್ಟಣದಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ನಿರ್ಧರಿಸಿದ್ದಾರೆ. ವರ್ತಕರ ಸಂಘ, ಕಿರಾಣಿ ವರ್ತಕರ ಸಂಘ, ಫ್ಯಾನ್ಸಿ ಸ್ಟೋರ್ ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘದ ಸದಸ್ಯರು ಇದಕ್ಕೆ ಕೈ ಜೋಡಿಸಿದ್ದಾರೆ.

ಸಾರ್ವಜನಿಕರು ಈ ವ್ಯವಸ್ಥೆಗೆ ಸಹಕರಿಸಬೇಕೆಂದು ವರ್ತಕರು ಮನವಿ ಮಾಡಿದ್ದಾರೆ. ಅಲ್ಲದೆ ತಮ್ಮ ನಿರ್ಧಾರದ ಬಗ್ಗೆ ತಹಶೀಲ್ದಾರ್ ಅವರಿಗೂ ಮನವಿ ಪತ್ರವನ್ನು ವರ್ತಕರು ಸಲ್ಲಿಸಿದ್ದಾರೆ. ಗುಬ್ಬಿ ತಾಲೂಕನ್ನು ಕೊರೊನಾ ಮುಕ್ತಗೊಳಿಸಲು ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

Last Updated : Jun 22, 2020, 10:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.