ETV Bharat / state

ಸೆಪ್ಟೆಂಬರ್ 30ರವರೆಗೆ ಮಾತ್ರ ಉಚಿತ ಬೂಸ್ಟರ್ ಡೋಸ್: ಡಾ ವೀಣಾ - ಕೊರೊನಾ

ಕಳೆದ ಎರಡು ತಿಂಗಳಿನಿಂದ ಯಾವುದೇ ಕೊರೊನಾ ಸೋಂಕಿತರು ತುಮಕೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿಲ್ಲ. ಅಲ್ಲದೇ ಉಚಿತ ಕೊರೊನಾ ಬೂಸ್ಟರ್​ ಡೋಸ್​ನ್ನು ಸೆ.30ರವರೆಗೆ ಮಾತ್ರ ನೀಡಲಾಗುವುದು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ ವೀಣಾ ಹೇಳಿದ್ದಾರೆ.

Free Corona booster dose till 30th September o
ಸೆಪ್ಟೆಂಬರ್ 30ರವರೆಗೆ ಮಾತ್ರ ಉಚಿತ ಬೂಸ್ಟರ್ ಡೋಸ್
author img

By

Published : Sep 22, 2022, 1:08 PM IST

Updated : Sep 22, 2022, 3:21 PM IST

ತುಮಕೂರು: ಜಿಲ್ಲೆಯಲ್ಲಿ ಸೆಪ್ಟೆಂಬರ್ 30ರವರೆಗೆ ಮಾತ್ರ ಕೋವಿಡ್​​ ಬೂಸ್ಟರ್ ಡೋಸ್​ನ್ನು ಉಚಿತವಾಗಿ ನೀಡಲಾಗುವುದು. ಈ ಕುರಿತಂತೆ ಸರ್ಕಾರ ಕೂಡ ಸೂಚನೆ ನೀಡಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ ವೀಣಾ ತಿಳಿಸಿದ್ದಾರೆ.

ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ಕೊರೊನಾ ಸೋಂಕಿತರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿಲ್ಲ. ಅಲ್ಲದೇ ನಿತ್ಯ ನಡೆಸಲಾಗುತ್ತಿರುವ ಆರ್​ಟಿಪಿಸಿಆರ್​​ ಪರೀಕ್ಷೆಯನ್ನು, ಈಗ ಕೇವಲ ವಾರದಲ್ಲಿ ಎರಡು ದಿನ ಮಾತ್ರ ನಡೆಸಲಾಗುತ್ತಿದೆ. ಉಚಿತವಾಗಿ ನೀಡಲಾಗುತ್ತಿರುವ ಬೂಸ್ಟರ್​ ಡೋಸನ್ನು ಪಡೆಯಲು ಕೂಡ ಬೆರಳೆಣಿಕೆಯಷ್ಟು ಜನ ಬರುತ್ತಿದ್ದಾರೆ ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ ವೀಣಾ

ಕಳೆದ ಎರಡು ತಿಂಗಳಿನಿಂದ ನಿತ್ಯ ಕನಿಷ್ಠ ಐವರು ಮಾತ್ರ ಬೂಸ್ಟರ್​ ಡೋಸ್​ ಪಡೆಯಲು ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕೊರೊನಾ ಸೋಂಕಿತರು ಜಿಲ್ಲಾಸ್ಪತ್ರೆಗೆ ದಾಖಲಾಗಿಲ್ಲ. ಸರ್ಕಾರದ ಸೂಚನೆಯ ಮೇರೆಗೆ ಸೆಪ್ಟೆಂಬರ್ 30ರವರೆಗೆ ಮಾತ್ರ ಉಚಿತವಾಗಿ ಬೂಸ್ಟರ್​​ ಡೋಸ್​ ನೀಡಲಾಗುವುದು. ನಂತರ ಸರ್ಕಾರದ ಆದೇಶದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಬೂಸ್ಟರ್ ಡೋಸ್ ಪಡೆದುಕೊಳ್ಳುವ ಅಂತರದಲ್ಲಿ 9 ರಿಂದ 6 ತಿಂಗಳಿಗೆ ಇಳಿಕೆ.. ಕೇಂದ್ರದ ನಿರ್ಧಾರ

Last Updated : Sep 22, 2022, 3:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.