ತುಮಕೂರು: ದೆಹಲಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 19 ಮಂದಿ ಪತ್ತೆಯನ್ನು ಪತ್ತೆಹಚ್ಚಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಅಷ್ಟು ಜನರ ವೈದ್ಯಕೀಯ ಪರೀಕ್ಷೆ ಕೂಡಾ ನಡೆಸಿದ್ದು, ಅವರೆಲ್ಲರನ್ನೂ ಐಸೋಲೇಷನ್ನಲ್ಲಿ ಇರಿಸಲಾಗಿದೆ. ಮಾರ್ಚ್ 8ರಿಂದ 20ರ ವರೆಗೂ ತುಮಕೂರು ಜಿಲ್ಲೆಯಿಂದ ಇನ್ನೂ ಹೆಚ್ಚಿನ ಜನರು ದೆಹಲಿಗೆ ತೆರಳಿರುವ ಸಾಧ್ಯತೆಗಳಿವೆ ಎಂದರು.
ಈ ಕುರಿತಂತೆ ಸಾರ್ವಜನಿಕರಿಗೆ ಅಂತವರ ಮಾಹಿತಿ ಲಭ್ಯವಾದರೆ ತುರ್ತಾಗಿ ಕಂಟ್ರೋಲ್ ರೂಂಗೆ ವಿಷಯ ತಿಳಿಸುವಂತೆ ಮನವಿ ಮಾಡಿದ್ದಾರೆ.