ತುಮಕೂರು : ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಮತ ಪಡೆಯಲು ಮಾತ್ರ ಬಿಜೆಪಿ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದಾಗಿ ಹೇಳಿಕೆ ಕೊಟ್ಟಿತ್ತು. ಮೂರು ತಿಂಗಳು ಕಳೆಯಲಿ ಆಮೇಲೆ ಗೊತ್ತಾಗುತ್ತೆ ಅವರೇನು ಭರವಸೆ ಈಡೇರಿಸಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿ, ಸುಮಾರು 6 ಲಕ್ಷ ಮಂದಿ ಕಾಡುಗೊಲ್ಲ ಸಮುದಾಯದವರು ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾಣ ಸಿಗುತ್ತಾರೆ. ರಾಜ್ಯಾದ್ಯಂತ ವಿವಿಧ ಹೆಸರಿನಲ್ಲಿ ಗೊಲ್ಲ ಸಮುದಾಯದವರು ಸುಮಾರು 40 ಲಕ್ಷ ಮಂದಿ ಇದ್ದಾರೆ, ಆದರೆ ಕೇವಲ 6 ಲಕ್ಷ ಮಂದಿ ಇರುವ ಕಾಡುಗೊಲ್ಲ ಸಮುದಾಯದವರಿಗೆ ಪ್ರತ್ಯೇಕ ನಿಗಮ ಭರವಸೆ ನೀಡಿರುವುದು ಸಾಕಷ್ಟು ಪ್ರಶ್ನಾರ್ಹವಾಗಿದೆ ಎಂದಿದ್ದಾರೆ.
ಓದಿ : ಶರ್ಟ್ ನಿಕಾಲೋ ಸಂಗಣ್ಣ... ಸದನದಲ್ಲಿ ಸಂಗಮೇಶ್ ಶರ್ಟ್ ಬಿಚ್ಚಿಸಿದ್ದು ಯಾರು ಗೊತ್ತಾ!?
ಶಿರಾ ವಿಧಾನಸಭಾ ಉಪ ಚುನಾವಣೆಯಲ್ಲಿ ಕೇವಲ 40 ಸಾವಿರ ಮತಗಳನ್ನು ಪಡೆಯಲು ಕಾಡು ಗೊಲ್ಲ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಬಿಜೆಪಿಯವರು ಭರವಸೆ ನೀಡಿದ್ದರು. ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.