ETV Bharat / state

ಮಧುಗಿರಿ ನೂತನ ಜಿಲ್ಲೆಯೆಂದು ಘೋಷಿಸುವಂತೆ ಮಾಜಿ ಡಿಸಿಎಂ ಪರಮೇಶ್ವರ್ ಒತ್ತಾಯ - new district

ವಿಜಯನಗರ ನೂತನ ಜಿಲ್ಲೆ ಬೇಡಿಕೆಗೆ ಒತ್ತಾಯ ಕೇಳಿಬಂದ ಬೆನ್ನಲ್ಲೇ ಈಗ ಬೇರೆ ಬೇರೆ ಜಿಲ್ಲೆಗಳಲ್ಲೂ ವಿಭಜನೆಯ ಕೂಗು ಕೇಳಿಬರುತ್ತಿವೆ. ಇದೀಗ ಮಧುಗಿರಿ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಬೇರ್ಪಡಿಸಬೇಕೆಂಬ ಒತ್ತಾಯವನ್ನು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಮಾಡಿದ್ದಾರೆ.

ಮಧುಗಿರಿ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಬೇರ್ಪಡಿಸಬೇಕೆಂಬ ಒತ್ತಾಯ
author img

By

Published : Oct 1, 2019, 7:43 AM IST

ತುಮಕೂರು: ರಾಜ್ಯ ಸರ್ಕಾರ ಹೊಸ ಜಿಲ್ಲೆಗಳನ್ನು ರೂಪಿಸಲು ಈಗಾಗಲೇ ಹಲವು ರೀತಿಯಲ್ಲಿ ಮುಂದಾಗುತ್ತಿದೆ. ಅಲ್ಲದೆ ಈ ಕುರಿತು ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ. ಇದೀಗ ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಬೇರ್ಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

Former DCM Parameshwar
ಮಧುಗಿರಿ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಬೇರ್ಪಡಿಸಬೇಕೆಂಬ ಒತ್ತಾಯ

ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಈ ಕುರಿತು ಸುದೀರ್ಘವಾದ ಪತ್ರವೊಂದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದಿದ್ದು, ಮಧುಗಿರಿ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಮಧುಗಿರಿ ತಾಲೂಕು ಭೌಗೋಳಿಕವಾಗಿ ವಿಸ್ತಾರ ಹೊಂದಿದ್ದು, ಮಧುಗಿರಿ ಕೇಂದ್ರ ಸ್ಥಾನವಾಗಿ ಲೋಕೋಪಯೋಗಿ, ಜಿಲ್ಲಾ ಪಂಚಾಯತ್​, ಎತ್ತಿನಹೊಳೆ ಯೋಜನೆ ಹೀಗೆ ಅನೇಕ ಉಪವಿಭಾಗಗಳಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಅಲ್ಲದೆ ಜಿಲ್ಲಾ ನ್ಯಾಯಾಲಯ ಕಟ್ಟಡ ಕೂಡ ಅಸ್ತಿತ್ವದಲ್ಲಿದೆ. ಪ್ರತ್ಯೇಕ ಶೈಕ್ಷಣಿಕ ಜಿಲ್ಲೆಯಾಗಿರುವ ಮಧುಗಿರಿಯ ನೆರೆಯ ತಾಲೂಕುಗಳಾದ ಪಾವಗಡ, ಕೊರಟಗೆರೆ, ಶಿರಾ ತಾಲೂಕುಗಳಿಗೆ ಮಧುಗಿರಿ ವಾಣಿಜ್ಯೋದ್ಯಮ ಕೇಂದ್ರವಾಗಿದೆ. ಹೀಗಾಗಿ ಮಧುಗಿರಿಯನ್ನು ಕೊರಟಗೆರೆ, ಶಿರಾ, ಮಧುಗಿರಿ, ಪಾವಗಡ ಕಂದಾಯ ತಾಲೂಕುಗಳನ್ನಾಗಿ ಒಟ್ಟುಗೂಡಿಸಿ ಪ್ರತ್ಯೇಕ ನೂತನ ಜಿಲ್ಲೆಯಾಗಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

Intro:Body:ಮಧುಗಿರಿ ನೂತನ ಜಿಲ್ಲೆಯೆಂದು ಘೋಷಿಸುವಂತೆ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಒತ್ತಾಯ.....

ತುಮಕೂರು
ರಾಜ್ಯ ಸರ್ಕಾರ ಹೊಸ ಜಿಲ್ಲೆಗಳನ್ನು ರೂಪಿಸಲು ಈಗಾಗಲೇ ಹಲವು ರೀತಿಯಲ್ಲಿ ಮುಂದಾಗುತ್ತಿದೆ. ಅಲ್ಲದೆ ಈ ಕುರಿತು ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿದೆ.
ತುಮಕೂರು ಜಿಲ್ಲೆಯಲ್ಲಿರೋ ಮಧುಗಿರಿ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಬೇರ್ಪಡಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಈ ಕುರಿತು ಸುದೀರ್ಘವಾದ ಪತ್ರವೊಂದನ್ನು ಮುಖ್ಯಮಂತ್ರಿ ಯಡಿಯೂರಪ್ಪಗೆ ಬರೆದಿದ್ದು ಮಧುಗಿರಿ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಮಧುಗಿರಿ ತಾಲೂಕು ಭೌಗೋಳಿಕವಾಗಿ ವಿಸ್ತಾರ ಹೊಂದಿದ್ದು, ಮಧುಗಿರಿ ಕೇಂದ್ರ ಸ್ಥಾನ ವಾಗಿ ಲೋಕೋಪಯೋಗಿ ಜಿಲ್ಲಾ ಪಂಚಾಯಿತಿ, ಡಿವೈಎಸ್ಪಿ ಎತ್ತಿನಹೊಳೆ ಯೋಜನೆ ಉಪವಿಭಾಗಗಳಾಗಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಜಿಲ್ಲಾ ನ್ಯಾಯಾಲಯ ಕಟ್ಟಡ ಕೂಡ ಅಸ್ತಿತ್ವದಲ್ಲಿದೆ. ಪ್ರತ್ಯೇಕ ಶೈಕ್ಷಣಿಕ ಜಿಲ್ಲೆಯಾಗಿರುವ ಮಧುಗಿರಿಯ ನೆರೆಯ ತಾಲೂಕುಗಳಾದ ಪಾವಗಡ, ಕೊರಟಗೆರೆ, ಶಿರಾ, ತಾಲೂಕುಗಳಿಗೆ ಮಧುಗಿರಿ ವಾಣಿಜ್ಯೋದ್ಯಮ ಕೇಂದ್ರವಾಗಿದೆ. ಹೀಗಾಗಿ ಮಧುಗಿರಿಯನ್ನು ಕೊರಟಗೆರೆ, ಶಿರಾ, ಮಧುಗಿರಿ , ಪಾವಗಡ ಕಂದಾಯ ತಾಲೂಕು ಗಳನ್ನಾಗಿ ಒಟ್ಟುಗೂಡಿಸಿ ಪ್ರತ್ಯೇಕ ನೂತನ ಜಿಲ್ಲೆಯಾಗಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.