ETV Bharat / state

ಪರಿಶೀಲಿಸಿದ ಕೆಲವೇ ನಿಮಿಷಗಳಲ್ಲಿ ಕುಸಿದ ಸೇತುವೆ.. ಅಪಾಯದಿಂದ ಪಾರಾದ ಮಾಜಿ ಡಿಸಿಎಂ ಪರಮೇಶ್ವರ್ - ಸೇತುವೆ ಕುಸಿತ

ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಸ್ವಲ್ಪದರಲ್ಲೇ ಭಾರಿ ಅನಾಹುತದಿಂದ ಪಾರಾಗಿದ್ದಾರೆ

Parameshwar narrowly escaped from bridge collapse
ಕುಸಿದ ಸೇತುವೆ..ಅಪಾಯದಿಂದ ಪಾರಾದ ಮಾಜಿ ಡಿಸಿಎಂ ಪರಮೇಶ್ವರ್
author img

By

Published : Aug 27, 2022, 7:32 AM IST

ತುಮಕೂರು: ಮಾಜಿ ಉಪಮುಖ್ಯಮಂತ್ರಿ, ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಸ್ವಲ್ಪದರಲ್ಲೇ ಭಾರಿ ಅನಾಹುತದಿಂದ ಪಾರಾಗಿದ್ದಾರೆ. ಪರಮೇಶ್ವರ್ ಭೇಟಿ ಬಳಿಕ ಕೆಲವೇ ನಿಮಿಷಕ್ಕೆ ಕೊರಟಗೆರೆ ತಾಲೂಕಿನ ತೀತಾ ಜಲಾಶಯದ ಬಳಿ ಇರುವ ಸೇತುವೆ ಕುಸಿತಗೊಂಡಿದೆ.

ಕುಸಿದ ಸೇತುವೆ..ಅಪಾಯದಿಂದ ಪಾರಾದ ಮಾಜಿ ಡಿಸಿಎಂ ಪರಮೇಶ್ವರ್

ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದ ನಿನ್ನೆ ಬೆಳಗ್ಗೆ ಸೇತುವೆ ಭಾಗಶಃ ಕುಸಿದಿತ್ತು. ಸೇತುವೆ ಕುಸಿತ ಹಿನ್ನೆಲೆ ಸಂಜೆ ಸ್ಥಳಕ್ಕೆ ಡಾ.ಜಿ ಪರಮೇಶ್ವರ್ ಕೊರಟಗೆರೆ ತಹಶೀಲ್ದಾರ್​​ ನಾಹಿದಾ ಸೇರಿದಂತೆ ಸ್ಥಳೀಯ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು.

ಭೇಟಿ ವೇಳೆ ಸೇತುವೆ ಮೇಲೆ ನಿಂತು ಸೇತುವೆ ಕುಸಿತವನ್ನು ವೀಕ್ಷಿಸಿದ್ದರು. ಸೇತುವೆ ವೀಕ್ಷಿಸಿ ಮುಂದೆ ಹೆಜ್ಜೆ ಹಾಕುತ್ತಿದ್ದಂತೆ ಭಾಗಶಃ ಕುಸಿದಿದ್ದ ಸೇತುವೆ ಸಂಪೂರ್ಣ ಕುಸಿತಗೊಂಡಿದೆ. ಇದರಿಂದಾಗಿ ಭಾರಿ ಗಂಡಾಂತರ ತಪ್ಪಿದಂತಾಗಿದೆ.

ಇದನ್ನೂ ಓದಿ: ನಿರಂತರ ಮಳೆ.. ತೀತಾ ಜಲಾಶಯದ ಸಮೀಪ ಕುಸಿದು ಬಿದ್ದ ಸೇತುವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.