ತುಮಕೂರು: ಹುಲ್ಲು ತರಲು ಹೋಗಿದ್ದ ರೈತನೋರ್ವನಿಗೆ ಬಣವೆಯಲ್ಲಿ ಅಡಗಿದ್ದ ಹಾವು ಕಚ್ಚಿ ಆತ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಮೇಲನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವೆಂಕಟರಮಣ ಗೌಡ (60) ಹಾವು ಕಚ್ಚಿ ಮೃತಪಟ್ಟಿರುವ ರೈತ ಎಂದು ತಿಳಿದು ಬಂದಿದೆ. ದನಗಳಿಗೆ ಹುಲ್ಲು ತರಲು ಬಣವೆ ಬಳಿ ಹೋಗಿದ್ದರು. ಈ ಸಂದರ್ಭದಲ್ಲಿ ಅದರಲ್ಲಿ ಅಡಗಿದ್ದ ಹಾವು ಕಚ್ಚಿದೆ. ಹಾವಿನ ವಿಷವೇರಿದ ಹಿನ್ನೆಲೆ ನರಳಾಡುತಿದ್ದ ವೆಂಕಟರಮಣ ಗೌಡರನ್ನು ತಕ್ಷಣ ತಿಪಟೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.