ETV Bharat / state

ಸ್ವಾಮೀಜಿಯಿಂದ ನಕಲಿ ದಾಖಲೆ ಸೃಷ್ಟಿಸಿ ಅಮಾಯಕರಿಗೆ ವಂಚನೆ ಆರೋಪ - ಮಾಜಿ ಅಧ್ಯಕ್ಷ

ತಿಪಟೂರಿನಲ್ಲಿ ಸ್ವಾಮೀಜಿಯೊಬ್ಬರು ಖಾಲಿ ಸೈಟ್​ಗಳ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮಾರಾಟ ಮಾಡುವ ಮೂಲಕ ಅಮಾಯಕ ಜನರನ್ನು ವಂಚಿಸುತ್ತಿದ್ದಾರೆ ಎಂದು ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಹೆಚ್.ಎಸ್.ದೇವರಾಜ್ ಆರೋಪಿಸಿದರು.

ಮಾಜಿ ಅಧ್ಯಕ್ಷ ದೇವರಾಜ್
author img

By

Published : Aug 1, 2019, 10:23 PM IST

ತುಮಕೂರು: ತಿಪಟೂರು ನಗರದ ಖಾಲಿ ಸೈಟ್​​​ಗಳಿಗೆ ಅಲ್ಲಿನ ಸ್ವಾಮೀಜಿಯೊಬ್ಬರು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಮಾರಾಟ ಮಾಡುವ ಮೂಲಕ ಅಮಾಯಕ ಜನರನ್ನು ವಂಚಿಸುತ್ತಿದ್ದಾರೆ ಎಂದು ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಹೆಚ್.ಎಸ್.ದೇವರಾಜ್ ಆರೋಪಿಸಿದರು.

ಕಾರಣವಿಲ್ಲದೆ ತನ್ನ ಮೊದಲನೇ ಹೆಂಡತಿಯನ್ನು ಕೊಲೆ ಮಾಡಿದ ವಿಜಯ್ ಕುಮಾರ್ ಪೊಲೀಸರ ಕೈಗೆ ಸಿಕ್ಕಿ ಬೀಳುವ ಮೊದಲೇ ಅಲ್ಲಿಂದ ಓಡಿ ಹೋಗುತ್ತಾನೆ. ಇದರ ನಡುವೆ ಆತನಿಗೆ ಎರಡನೇ ಮದುವೆಯಾಗಿರುತ್ತದೆ. ಎರಡನೇ ಪತ್ನಿ ಅನಾರೋಗ್ಯದ ಕಾರಣ ಸಾಯುವ ಮೊದಲು ತನ್ನ ಆಸ್ತಿಯನ್ನೆಲ್ಲ ತನ್ನ ಸಹೋದರಿ ಹೆಸರಿಗೆ ವಿಲ್ ಬರೆಸಿ ಆಕೆಯು ಮರಣ ಹೊಂದುತ್ತಾಳೆ.

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಓರ್ವ ಸ್ವಾಮೀಜಿ ಕಣ್ಣು ಆಕೆಯ ಆಸ್ತಿಯ ಮೇಲೆ ಬೀಳುತ್ತದೆ. ಕೆಲ ಮಧ್ಯವರ್ತಿಗಳ ಸಹಾಯದಿಂದ ಆಸ್ತಿಯನ್ನು ನಾಜೂಕಾಗಿ ಲಪಟಾಯಿಸುವ ತಂತ್ರ ರೂಪಿಸುವ ಮೂಲಕ ಈ ಕೆಲಸವನ್ನು ಪೂರ್ಣಗೊಳಿಸುತ್ತಾರೆ.

ಸ್ವಾಮೀಜಿಯಿಂದ ನಕಲಿ ದಾಖಲೆ ಸೃಷ್ಟಿ ಆರೋಪ

ನಕಲಿ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಖಾಲಿ ಸೈಟ್​​ಗಳನ್ನು ಮಾರಾಟ ಮಾಡುವ ದಂಧೆಗೆ ಇಳಿದು, ನಾಲ್ಕೈದು ಮಂದಿಯಿಂದ ಮುಂಗಡ ಹಣ ಪಡೆದು ಸೈಟ್ ಮಾರಾಟ ಮಾಡಲು ಮುಂದಾಗಿರುತ್ತಾರೆ.

ಒಮ್ಮೆ ನಿವೇಶನದ ಬಗ್ಗೆ ಸಾಕಷ್ಟು ಮಾಹಿತಿ ಪಡೆದು ನಂತರ ಖರೀದಿ ಮಾಡಲು ಮುಂದಾದ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಮೂಲ ದಾಖಲೆಗಳಿಗೆ ಬೇಡಿಕೆ ಇಡುತ್ತಾರೆ ಮೂಲ ದಾಖಲೆಗಳನ್ನು ಒದಗಿಸುವಲ್ಲಿ ಮಧ್ಯವರ್ತಿಗಳು ವಿಫಲರಾಗುತ್ತಾರೆ. ಆಗ ನಿವೇಶನದ ಮೂಲ ಒಡತಿಯ ವಂಶವೃಕ್ಷ ಸೇರಿದಂತೆ ಹಲವು ದಾಖಲೆಗಳನ್ನು ತಿರುಚಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು. ಈ ಬಗ್ಗೆ ಸ್ಪಷ್ಟವಾಗಿ ತನಿಖೆ ನಡೆಸುವ ಮೂಲಕ ವಂಚಕರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

Intro:ತುಮಕೂರು: ತಿಪಟೂರು ನಗರದ ಖಾಲಿ ಸೈಟ್ ಗಳಿಗೆ ತಿಪಟೂರಿನ ಸ್ವಾಮೀಜಿಯೊಬ್ಬರು, ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಮಾರಾಟ ಮಾಡುವ ಮೂಲಕ ಅಮಾಯಕ ಜನರನ್ನು ವಂಚಿಸಲಾಗುತ್ತಿದ್ದಾರೆ ಎಂದು ಟಿ.ಎ.ಪಿ.ಸಿ.ಎಂ.ಎಸ್ ನ ಮಾಜಿ ಅಧ್ಯಕ್ಷ ಎಚ್.ಎಸ್. ದೇವರಾಜ್ ಆರೋಪಿಸಿದರು.

Body:ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಪಟೂರಿನಲ್ಲಿ ವಾಸಮಾಡುತ್ತಿದ್ದ ವಿಜಯ್ ಕುಮಾರ್ ಎಂಬುವವರು ತನ್ನ ಹೆಂಡತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಅವರ ಎರಡನೇ ಹೆಂಡತಿ 2015ರಲ್ಲಿ ತನ್ನ ಪತಿ ವಿಜಯ್ ಕುಮಾರ್ ತನ್ನ ಜೊತೆ ಇಲ್ಲ, ಊರುಬಿಟ್ಟು ಎಲ್ಲೋ ಹೋಗಿದ್ದಾರೆ,ನನ್ನ ಆರೋಗ್ಯ ಸರಿ ಇಲ್ಲದ ಕಾರಣ ನಮ್ಮ ಆಸ್ತಿ ನನ್ನ ತಂಗಿ ಅವರಿಗೆ ಸೇರಬೇಕು ಎಂಬುದಾಗಿ ವಿಲ್ ಬರೆಸಿ ಅವರು ಮರಣ ಹೊಂದಿದ್ದಾರೆ.
ಈ ಎಲ್ಲ ವಿಷಯ ತಿಳಿದಿದ್ದ ಸ್ವಾಮೀಜಿ ಹಾಗೂ ಕೆಲ ಮಧ್ಯವರ್ತಿಗಳು ಶಿವಶಂಕರಪ್ಪ ಎಂಬುವವರನ್ನು ಸೃಷ್ಟಿಸಿ ಮಾಡಿ, ವಿಜಯ್ ಕುಮಾರ್ ಅವರ ಆಸ್ತಿ ಶಿವಶಂಕರಪ್ಪ ರವರಿಗೆ ಸೇರಿದ್ದು ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಖಾಲಿ ಸೈಟ್ಗಳನ್ನು ಮಾರಾಟಮಾಡಲು ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಐದು ಜನರು ತಲಾ ಒಂದೊಂದು ಲಕ್ಷ ಮುಂಗಡ ಹಣ ನೀಡಿದ್ದಾರೆ, ಆದರೆ ಈ ಜಾಗವನ್ನು ಯಾರು ತೆಗೆದುಕೊಂಡಿಲ್ಲ, ಹೀಗಾಗಿ ಮಾಜಿ ನಗರಸಭೆ ಅಧ್ಯಕ್ಷ ಅಬ್ದುಲ್ ಖಾದರ್ ಎಂಬುವವರು ಸ್ವಾಮೀಜಿಗಳ ಬಳಿಗೆ ರವಿಕುಮಾರ್ ಎಂಬ ಸಾಮಾಜಿಕ ಕಾರ್ಯಕರ್ತನನ್ನು ಕರೆದುಕೊಂಡು ಹೋ,ಗಿ ಸೈಟ್ಗಳನ್ನು ಮಾರಾಟ ಮಾಡಬೇಕು ಎಂಬುದಾಗಿ ಶಿವಶಂಕರ್ ಎಂಬುವವರು ಇಲ್ಲದವೇಳೆ 600 ರೂಗಳಿಗೆ ವ್ಯವಹಾರ ಮಾಡಿ ಮುಗಿಸಿದರು.
ನಂತರ ಮೂಲ ದಾಖಲೆಗಳನ್ನು ಕೊಡಲು ಶಿವಶಂಕರ್ ಎಂಬುವವರನ್ನು ಕರೆಸಿ ಎಂದು ಕೇಳಿದಾಗ ಆ ವ್ಯಕ್ತಿಯ ಮಾಹಿತಿ ನೀಡದೆ, ಮೂಲ ದಾಖಲೆಗಳು ತೋರದೆ, ಸಂಪರ್ಕ ಕಲ್ಪಿಸಲಾಗದೇ ಸ್ವಾಮೀಜಿ ತಲೆ ಮಾಡಿಸಿಕೊಳ್ಳುತ್ತಾರೆ.
ಈ ಬಗ್ಗೆ ಅನುಮಾನ ಬಂದು ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಿದಾಗ ಈ ಜಾಗದ ಮೂಲ ಮಾಲೀಕರು ಬೇರೆ ಇದ್ದು, ಅವರು ಬದುಕಿರುವಾಗಲೇ ಮರಣ ಹೊಂದಿದ್ದಾರೆ ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿರುವುದು ಬೆಳಕಿಗೆ ಬಂದಿದೆ.
ಈ ವಿಚಾರದ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ಇಲ್ಲಿಯವರೆಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆದಿಲ್ಲ. ಕೇವಲ ಒಬ್ಬರನ್ನು ಮಾತ್ರ ಕರೆಸಿ ವಿಚಾರಣೆ ಮಾಡಿದ್ದಾರೆ, ಹೀಗಾಗಿ ಪೋಲಿಸ್ ಇಲಾಖೆಯು ಕಾನೂನು ಬದ್ಧವಾಗಿ ತನಿಖೆ ನಡೆಸಿ ಅಮಾಯಕರನ್ನು ಮೋಸಮಾಡಲು ಮುಂದಾದವರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಬೈಟ್: ಎಚ್.ಎಸ್. ದೇವರಾಜ್, ಟಿ.ಎ.ಪಿ.ಸಿ.ಎಂ.ಎಸ್ ನ ಮಾಜಿ ಅಧ್ಯಕ್ಷ.

Conclusion:ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.