ತುಮಕೂರು: ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರ ಕಾರನ್ನೂ ಸಹ ಇಂದು ಚುನಾವಣಾ ಅಧಿಕಾರಿಗಳು ಚೆಕ್ ಪೋಸ್ಟ್ನಲ್ಲಿ ನಿಲ್ಲಿಸಿ ತಪಾಸಣೆಗೊಳಪಡಿಸಿದರು.
ತುಮಕೂರು ಹೊರವಲಯದ ಜಾಸ್ ಟೋಲ್ ಗೇಟ್ ಸಮೀಪ ಇರುವ ಚೆಕ್ ಪೋಸ್ಟ್ನಲ್ಲಿ ಚುನಾವಣಾಧಿಕಾರಿಗಳ ಕೆಲಸಕ್ಕೆ ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಅವರ ಜೊತೆ ಇದ್ದಂತಹ ಸಿಬ್ಬಂದಿ ಸಹಕರಿಸಿದರು. ಪರಮೇಶ್ವರ್ ಅವರ ಬೆಂಗಾವಲು ವಾಹನಗಳನ್ನು ಕೂಡ ಇದೇ ವೇಳೆ ತಪಾಸಣೆಗೆ ಒಳಪಡಿಸಲಾಯಿತು.