ETV Bharat / state

ತುಮಕೂರಲ್ಲಿ ಈದ್​​ ಮಿಲಾದ್​ ಆಚರಣೆ... ಚಾಂದಿನಿ ಮೆರವಣಿಗೆ - ತುಮಕೂರು ಈದ್ ಮಿಲಾದ್ ಸಂಭ್ರಮ

ತುಮಕೂರಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಈದ್ ಮಿಲಾದ್ ಹಾಗೂ ಟಿಪ್ಪು ಜಯಂತಿ ಆಚರಿಸಿದರು. ಹಬ್ಬದ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ಚಾಂದಿನಿ ಮೆರವಣಿಗೆ ನಡೆಯಿತು.

ತುಮಕೂರಲ್ಲಿ ಈದ್​​ ಮಿಲಾದ್​ ಆಚರಣೆ
author img

By

Published : Nov 10, 2019, 7:03 PM IST

ತುಮಕೂರು: ಈದ್ ಮಿಲಾದ್ ಹಾಗೂ ಟಿಪ್ಪು ಜಯಂತಿ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಚಾಂದಿನಿ ಮೆರವಣಿಗೆ ನಡೆಸಿದರು.

ತುಮಕೂರಲ್ಲಿ ಈದ್​​ ಮಿಲಾದ್​ ಆಚರಣೆ

ನಗರದ ಈದ್ಗಾ ಮೈದಾನದಿಂದ ಬನಶಂಕರಿ, ಕಾಲ್ಟೆಕ್ಸ್, ಬಿ.ಜಿ.ಪಾಳ್ಯ ಸರ್ಕಲ್, ನಜರಾಬಾದ್ ಪುರಸ್ ಕಾಲೋನಿ, ಟೌನ್ ಹಾಲ್ ಮುಂತಾದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಂಚರಿಸಿತು. ಮುಸ್ಲಿಂರು ಮೆಕ್ಕಾ, ಮಸೀದಿಗಳ ಆಕಾರವನ್ನು ಸೃಷ್ಟಿಸುವ ಮೂಲಕ ಅಲ್ಲಾಹುವನ್ನು ಜಪಿಸುತ್ತ, ಸ್ತುತಿಗಳನ್ನು ಪಠಿಸುತ್ತ ಸಂಭ್ರಮದಿಂದ ಈದ್​ ಮಿಲಾದ್​ ಆಚರಿಸಿದರು.

ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

Intro:ತುಮಕೂರು: ಈದ್ ಮಿಲಾದ್ ಹಾಗೂ ಟಿಪ್ಪು ಜಯಂತಿ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಚಾಂದಿನಿಯ ಮೆರವಣಿಗೆ ಮಾಡುವ ಮೂಲಕ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮಂತ್ರಗಳನ್ನು ಪಠಿಸುತ್ತಾ ಸಂಚರಿಸಿದರು.

Body:ನಗರದ ಈದ್ಗಾ ಮೈದಾನದಿಂದ ಹೊರಟ ಮೆರವಣಿಗೆ ಬನಶಂಕರಿ, ಕಾಲ್ಟೆಕ್ಸ್, ಬಿ.ಜಿ ಪಾಳ್ಯ ಸರ್ಕಲ್, ನಜರಾಬಾದ್ ಪುರಸ್ ಕಾಲೋನಿ, ಟೌನ್ ಹಾಲ್ ಮುಂತಾದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಪ್ರವಾದಿ ಮಹಮ್ಮದ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮೆರವಣಿಗೆಯನ್ನು ಮಾಡುವ ಮೂಲಕ ಅವರು ಹಾಕಿಕೊಟ್ಟಂತಹ ಶಾಂತಿಯ ಮಾರ್ಗವನ್ನು ಎಲ್ಲರೂ ಪಾಲಿಸಬೇಕು, ನಮ್ಮ ವ್ಯಕ್ತಿತ್ವ ಹೇಗೆ ಇರಬೇಕು ಎಂದು ಪ್ರವಾದಿ ಮಹಮ್ಮದ್ ಅವರ ಜೀವನದ ತತ್ವಗಳನ್ನು ಎಲ್ಲರೂ ಅನುಸರಿಸುವ ಮೂಲಕ ಶಾಂತಿ ರೀತಿಯಿಂದ ಜೀವನ ನಡೆಸಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಅವರ ನೆನಪಿಗಾಗಿ ಈ ಮೆರವಣಿಗೆ ನಡೆಸಲಾಯಿತು.
ಮೆಕ್ಕಾ, ಮಸೀದಿಗಳ ಆಕಾರವನ್ನು ಸೃಷ್ಟಿಸುವ ಮೂಲಕ ಅಲ್ಲಾಹುವನ್ನು ಜಪಿಸುತ್ತಾ ದೇವರ ಸ್ತುತಿಗಳನ್ನು ಪಠಿಸುತ್ತ ಹುಟ್ಟು ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

Conclusion:ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.