ETV Bharat / state

ತುಮಕೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು: ವಿಡಿಯೋ

author img

By

Published : Nov 22, 2021, 3:04 PM IST

ತೊರೆಹಳ್ಳದ ಕೆರೆಕೋಡಿ ಬಳಿ ತೆರಳುತ್ತಿದ್ದ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲೇ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದಿದೆ.

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು

ತುಮಕೂರು: ಜಿಲ್ಲೆಯಲ್ಲಿ ಮಳೆಯಿಂದ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇವೆ. ಅಕಾಲಿಕ ಮಳೆಯಿಂದ ಬೆಳೆಗಳು ನೆಲಕಚ್ಚಿವೆ. ಇನ್ನೊಂದೆಡೆ, ರಸ್ತೆ ಅಪಘಾತಗಳು ಕೂಡಾ ಸಂಭವಿಸುತ್ತಿವೆ.

ಗುಬ್ಬಿ ತಾಲೂಕಿನ ತೊರೆಹಳ್ಳದ ಕೆರೆಕೋಡಿ ಬಳಿ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲೇ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದಿದೆ. ಈ ವೇಳೆ, ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಹಳ್ಳದಲ್ಲಿ ಮುಳುಗಿದ್ದ ಕಾರನ್ನು ಹೊರತೆಗೆಯಲು ತಕ್ಷಣಕ್ಕೆ ಸಾಧ್ಯವಾಗಿರಲಿಲ್ಲ. ನಂತರ ಸ್ಥಳೀಯರ ಸಹಕಾರದಿಂದ ಕ್ರೇನ್ ಬಳಸಿ ಕಾರನ್ನು ಹಳ್ಳದಿಂದ ಮೇಲೆತ್ತಲಾಗಿದೆ.

ಗುಬ್ಬಿಯಿಂದ ತೊರೆಹಳ್ಳದ ಕಡೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.