ETV Bharat / entertainment

14 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ: ಗೋವಾದಲ್ಲಿ ಪ್ರಿಯತಮನನ್ನು ವರಿಸಲಿರುವ ನಟಿ ಕೀರ್ತಿ ಸುರೇಶ್? - KEERTHY SURESH WEDDING

ಜನಪ್ರಿಯ ನಟಿ ಕೀರ್ತಿ ಸುರೇಶ್ ಡಿಸೆಂಬರ್​​ನಲ್ಲಿ ಮದುವೆಯಾಗಲಿದ್ದಾರೆ.

Keerthy Suresh
ನಟಿ ಕೀರ್ತಿ ಸುರೇಶ್ (Photo: IANS)
author img

By ETV Bharat Entertainment Team

Published : Nov 19, 2024, 4:00 PM IST

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯ, ಉದ್ಯಮಿ ಆಂಟೋನಿ ಥಟ್ಟಿಲ್ (Antony Thattil) ಅವರನ್ನು ಇದೇ ಡಿಸೆಂಬರ್‌ನಲ್ಲಿ ಮದುವೆ ಆಗಲಿದ್ದಾರೆ ಎಂದು ವರದಿಯಾಗಿದೆ. ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ ನಡೆಯಲಿದೆ. ಜನಪ್ರಿಯ ತಾರೆಯಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲವಾದ್ರೂ, 14 ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ಹೈಸ್ಕೂಲ್ ಸಮಯದಿಂದ ಪ್ರೀತಿಯಲ್ಲಿರುವ ಜೋಡಿ ತಮ್ಮ ಪ್ರೇಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದ್ದಾರೆ.

ವರದಿಗಳ ಪ್ರಕಾರ, ಆಂಟೋನಿ ಥಟ್ಟಿಲ್ ಕೇರಳದ ಕೊಚ್ಚಿ ಮೂಲದವರಾಗಿದ್ದು, ರಾಜ್ಯದಲ್ಲಿ ಹೆಸರಾಂತ ರೆಸಾರ್ಟ್​​ಗಳನ್ನು ಹೊಂದಿದ್ದಾರೆ. ಈ ಮದುವೆ ಕಾರ್ಯಕ್ರಮ ಡಿಸೆಂಬರ್ 11-12ರ ನಡುವೆ ನಡೆಯಲಿದೆ ಎಂದು ಹೇಳಲಾಗಿದೆ. ಸಮಾರಂಭಕ್ಕೆ ಕುಟುಂಬಸ್ಥರು ಮತ್ತು ಸ್ನೇಹಿತರು ಭಾಗಿಯಾಗಲಿದ್ದಾರೆ. ನಟಿಯ ಪೋಷಕರಾದ, ಹಿರಿಯ ನಿರ್ಮಾಪಕ - ನಟ ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ಅವರು ಈ ಬಗ್ಗೆ ಉತ್ಸಾಹದಲ್ಲಿದ್ದಾರೆ ಎಂದು ವರದಿಯಾಗಿದೆ. ಗೋವಾದಲ್ಲಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿದ್ದು, ಅದ್ಧೂರಿ ಮತ್ತು ಬಹಳ ಖಾಸಗಿಯಾಗಿ ಕಾರ್ಯಕ್ರಮ ನಡೆಯಲಿದೆ.

ಈ ವರ್ಷಾರಂಭದಲ್ಲಿ ತಮ್ಮ ಮದುವೆ ಸುತ್ತಲಿನ ವದಂತಿಗಳನ್ನುದ್ದೇಶಿಸಿ ಮಾತನಾಡಿದ್ದ ನಟಿ ಕೀರ್ತಿ ಸುರೇಶ್​​, "ಸರಿಯಾದ ಸಮಯದಲ್ಲಿ" ಈ ಬಗ್ಗೆ ಬಹಿರಂಗಪಡಿಸುವುದಾಗಿ ತಿಳಿಸಿದ್ದರು. 2023ರಲ್ಲೂ ನಟಿಯ ಸ್ನೇಹಿತರೋರ್ವರನ್ನೇ ಉಲ್ಲೇಖಿಸಿ ಪಾರ್ಟ್​​ನರ್​ ಇರಬಹುದೇನೋ? ಎಂದು ಊಹಿಸಲಾಗಿತ್ತು. ಆ ಸಂದರ್ಭದಲ್ಲೂ ಸೂಕ್ತ ಸಮಯಕ್ಕೆ ಬಹಿರಂಗಪಡಿಸುವುದಾಗಿ ಭರವಸೆ ನೀಡಿದ್ದರು.

2000ರ ದಶಕದ ಆರಂಭದಲ್ಲಿ ಬಾಲ್ಯದಲ್ಲೇ ತಮ್ಮ ನಟನೆ ಪ್ರಾರಂಭಿಸಿದ ಕೀರ್ತಿ, ಮಹಾನಟಿಯಂತಹ ಹಿಟ್‌ ಸಿನಿಮಾಗಳ ಮೂಲಕ ಹೆಚ್ಚು ಜನಪ್ರಿಯರಾದರು. ಈ ಸಿನಿಮಾದಲ್ಲಿನ ಅಮೋಘ ಅಭಿನಯಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ (ಅತ್ಯುತ್ತಮ ನಟಿ) ಮುಡಿಗೇರಿಸಿಕೊಂಡರು.

ಇದನ್ನೂ ಓದಿ: ಶಿವರಾಜ್​ಕುಮಾರ್​ 'ಭೈರತಿ ರಣಗಲ್' ಚಿತ್ರದ ನಾಲ್ಕು ದಿನಗಳ ಕಲೆಕ್ಷನ್​ ಮಾಹಿತಿ ಇಲ್ಲಿದೆ

ನಟಿಯ ಮುಂದಿನ ಸಿನಿಮಾಗಳನ್ನು ಗಮನಿಸೋದಾದರೆ, 'ಬೇಬಿ ಜಾನ್‌' ಮೂಲಕ ಬಾಲಿವುಡ್‌ ಪ್ರವೇಶಿಸಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಬಹುಬೇಡಿಕೆ ನಟ ವರುಣ್ ಧವನ್ ಜೊತೆ ತೆರೆಹಂಚಿಕೊಂಡಿದ್ದಾರೆ. ಇದಲ್ಲದೇ ರಿವಾಲ್ವರ್ ರೀಟಾ ಮತ್ತು ಕನ್ನಿ ವೇದಿ ಅಂತಹ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಇದನ್ನೂ ಓದಿ: ಉಗ್ರಂ ಮಂಜುರನ್ನೇ ಮೌನಗೊಳಿಸಿದ ಶೋಭಿತಾ ಶೆಟ್ಟಿ: ಗಂಭೀರ ಸನ್ನಿವೇಶದಲ್ಲೂ ನಸುನಕ್ಕ ಹನುಮಂತ-ಧನರಾಜ್​

ಡಿಸೆಂಬರ್ 25 ರಂದು ಬೇಬಿ ಜಾನ್ ಬಿಡುಗಡೆ ಆಗಲಿದ್ದು, ಕೆಲವೇ ದಿನಗಳ ಮೊದಲು ನಟಿಯ ಮದುವೆ ನಿಗದಿಪಡಿಸಲಾಗಿದೆ. ವಿವಾಹದ ಬಗ್ಗೆ ಅಧಿಕೃತ ಘೋಷಣೆಗಾಗಿ ಅಭಿಮಾನಿಗಳ ಕಾತರರಾಗಿದ್ದಾರೆ. ಗೋವಾದ ಸುಂದ ಸ್ಥಳದಲ್ಲಿ ಅವರ ಮದುವೆ ಅದ್ದೂರಿಯಾಗಿ ಜರುಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.