ತುಮಕೂರು: 'ನಾನು ಶಾಸಕನಾಗಿ, ಮಂತ್ರಿಯಾಗಿ ಅತ್ಯುನ್ನತ ಡಾಕ್ಟರೇಟ್ ಪದವಿಯನ್ನೂ ಪಡೆದು ಹಲವು ದೇಶ ಸುತ್ತಿ ಬಂದಿದ್ದೇನೆ. ಆದರೂ ಕೂಡ ದಲಿತ ಎಂಬ ಕಾರಣಕ್ಕೆ ದೇವಾಲಯಗಳಲ್ಲಿ ಒಳಗೆ ಬಿಟ್ಟುಕೊಳ್ಳುವುದಿಲ್ಲ' ಎಂದು ಡಾ.ಜಿ.ಪರಮೇಶ್ವರ್ ಬೇಸರ ಹೊರಹಾಕಿದರು.
ಕೊರಟಗೆರೆ ಪಟ್ಟಣ ಪಂಚಾಯಿತಿ ಮುಂಭಾಗ ಗುರುವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ತಿಳಿಸಿದರು. 'ನಾನು ಫಾರಿನ್‌ಗೂ ಹೋಗಿ ಬಂದೆ, ಶಾಸಕನಾಗಿದ್ದೀನಿ, ಸಚಿವನಾಗಿದ್ದೀನಿ, ಕರ್ನಾಟಕದಲ್ಲಿ ನಂಬರ್ 2 ಆಗಿದ್ದೀನಿ. ಆದರೆ, ನನ್ನನ್ನೇ ದೇವಸ್ಥಾನಕ್ಕೆ ಸೇರಿಸಲ್ಲ' ಎಂದು ಹೇಳಿದರು.
'ನಾನು ದೇವಸ್ಥಾನಕ್ಕೆ ಹೋದ್ರೆ ಸ್ವಲ್ಪ ಅಲ್ಲೇ ನಿಂತುಕೊಳ್ಳಿ, ಮಂಗಳಾರತಿ ತರ್ತೀನಿ ಅಂತಾರೆ. ನನ್ನ ನೋಡಿ ಅರ್ಚಕರೇ ಮಂಗಳಾರತಿ ತಟ್ಟೆ ತಂದುಬಿಡ್ತಾರೆ. ಯಾಕಂದ್ರೆ ನಾನು ಎಲ್ಲಿ ಒಳಬಂದು ಬಿಡ್ತೀನೋ ಅಂತ. ಇಂತಹ ಪರಿಸ್ಥಿತಿ ಈಗಲೂ ಸಮಾಜದಲ್ಲಿದೆ ಅಂದ್ರೆ ನಾನು ಏನು ಹೇಳೋದು?' ಎಂದು ಅಸಮಾಧಾನ ತೋಡಿಕೊಂಡರು.
ಇದನ್ನೂ ಓದಿ: ಭ್ರಷ್ಟಾಚಾರದ ಗಂಗೋತ್ರಿಯ ಅಧ್ಯಕ್ಷ ಸಿಎಂ ಬೊಮ್ಮಾಯಿ: ಸಿದ್ದರಾಮಯ್ಯ