ತುಮಕೂರು: ಕೆಆರ್ಎಸ್ ಡ್ಯಾಂ ಬಿರುಕು ವಿಚಾರವಾಗಿ ಕುಣಿಗಲ್ನಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ದೊಡ್ಡ ದೊಡ್ಡವರ ಸುದ್ದಿ ನಮಗೆ ಬೇಡ. ಕೆಆರ್ಎಸ್ ವಿವಾದದಲ್ಲಿ ಅವರವರ ವಾದವನ್ನು ಅವರವರು ಮಾಡುತ್ತಿದ್ದಾರೆ ಎಂದರು.
ಡ್ಯಾಂ ಪರಿಸ್ಥಿತಿ ನಮಗೇನು ಗೊತ್ತು. ಡ್ಯಾಂ ನಿರ್ವಹಣೆಗಾಗಿ ಸರ್ಕಾರವೇ ಅಧಿಕಾರಿಗಳನ್ನು ನೇಮಿಸಿರುತ್ತದೆ. ಅದಕ್ಕಾಗಿ ಅವರಿಗೆ ವೇತನ ನೀಡಲಾಗುತ್ತದೆ. ಅವರೇ ಹೇಳಬೇಕು. ಇದ್ರಲ್ಲಿ ರಾಜಕಾರಣಿಗಳ ಕೆಲಸ ಏನಿದೆ?. ಡ್ಯಾಂ ಪರಿಸ್ಥಿತಿ ಅರಿಯಲು ಸಮಿತಿಯಿದೆ. ಪ್ರತಿ ವರ್ಷವೂ ಡ್ಯಾಂ ಸ್ಥಿತಿಗತಿ ಬಗ್ಗೆ ಅವರು ಮಾಹಿತಿ ನೀಡುತ್ತಾರೆ. ಡ್ಯಾಂಗೆ ಏನಾಗಿದೆ ಎಂಬುದನ್ನು ಅವರೇ ಹೇಳಬೇಕು ಎಂದರು.
ರಾಜಕೀಯ ವ್ಯಕ್ತಿಗಳಿಗೆ ಇದ್ರಲ್ಲಿ ಏನು ಸಂಬಂಧ?, ನಾವು ಮಾತಾಡೋ ಹಾಗಿಲ್ಲ. ಕೆಆರ್ಎಸ್ ವಿಚಾರ ಎತ್ತಿದವರೆಲ್ಲಾ ದೊಡ್ಡವರು ಅವರ ಬಗ್ಗೆ ಮಾತಾಡಲ್ಲ ಎಂದರು.
ಇದನ್ನೂ ಓದಿ: ಕುಮಾರಸ್ವಾಮಿ, ಸುಮಲತಾ ನಡುವಿನ ವಾಗ್ಯುದ್ಧ ಇಂದು ನಿನ್ನೆಯದಲ್ಲ, ಆ ಸೋಲಿನಿಂದಲೇ ಶುರು!