ತುಮಕೂರು: ಜಿಲ್ಲಾ ಹಾಲು ಒಕ್ಕೂಟದ ಹಾಲು ಉತ್ಪಾದಕರಿಗೆ ಇಂದಿನಿಂದಲೇ ಒಂದು ಲೀಟರ್ ಗೆ 1.5 ರೂ ಹೆಚ್ಚಿಸಲಾಗಿದೆ ಎಂದು ಜಿಲ್ಲೆಯ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಸಿ. ಮಹಾಲಿಂಗಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹಾಲು ಉತ್ಪಾದಕರಿಗೆ ಹೊಸ ವರ್ಷದ ಕೊಡುಗೆಯಾಗಿ ಬೆಲೆಯನ್ನು ನಿಗದಿ ಮಾಡಲಾಗುತ್ತದೆ. ಇದರಿಂದ ತಿಂಗಳಿಗೆ 3.15 ಕೋಟಿ ರೂ ಒಕ್ಕೂಟಕ್ಕೆ ಹೊರೆಯಾಗಲಿದೆ. ಒಕ್ಕೂಟಕ್ಕೆ ಬರುತ್ತಿರುವ ಹಾಲನ್ನು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟ ಮಾಡಲು ಒಕ್ಕೂಟ ಯಶಸ್ವಿಯಾಗಿರುವುದರಿಂದ ಹಾಲು ಉತ್ಪಾದಕರಿಗೆ ಬೆಂಬಲ ನೀಡಲು ಬೆಲೆ ಹೆಚ್ಚಿಸಲಾಗಿದೆ ಎಂದರು.
ತುಮಕೂರು ಸಹಕಾರಿ ಹಾಲು ಒಕ್ಕೂಟ ಬೆಲೆ ಹೆಚ್ಚಳದಿಂದ ಹಾಲು ಉತ್ಪಾದಕರಿಗೆ ಸರ್ಕಾರದ ಪ್ರೋತ್ಸಾಹ ಧನದೊಂದಿಗೆ 35 ರೂ ದೊರೆಯಲಿದೆ. ಬೆಂಗಳೂರು ಹಾಲು ಒಕ್ಕೂಟಕ್ಕೆ ಸರಿಸಮನಾಗಿ ತುಮಕೂರು ಹಾಲು ಒಕ್ಕೂಟ ರೈತರಿಗೆ ಬೆಲೆ ನೀಡುತ್ತಿದ್ದು, ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ದಿನಕ್ಕೆ 2.07 ಕೋಟಿ ರೂ ಬಟವಾಡೆ ಮಾಡುತ್ತಿದ್ದು, ಕಳೆದ ಒಂದು ವರ್ಷದಲ್ಲಿ ತುಮುಲ್ 5.50ರೂ. ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ನೆರವಾಗಿದೆ. ಒಕ್ಕೂಟದಿಂದ ಮೂಲಸೌಕರ್ಯ ಹಾಗೂ ರಾಸುಗಳಿಗೆ ವಿಮೆ ಒದಗಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಯೋಜನೆ ರೂಪಿಸಿದೆ ಎಂದು ಇದೆ ವೇಳೆ ಮಾಹಿತಿ ನೀಡಿದರು.