ETV Bharat / state

ತುಮಕೂರು ಗಣೇಶೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ವ್ಯಕ್ತಿ ಸಾವು - Ganapati immersion at Tumkuru

ತುಮಕೂರಿನಲ್ಲಿ ಡಿಜೆ ಸೌಂಡ್​ ಎಫೆಕ್ಟ್​ಗೆ ಕುಣಿಯುವಾಗ ವ್ಯಕ್ತಿಯೊಬ್ಬರು ಕುಸಿದುಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ತುಮಕೂರು ಗಣೇಶೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ವ್ಯಕ್ತಿ ಮೃತ

author img

By

Published : Sep 18, 2022, 10:18 PM IST

ತುಮಕೂರು: ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುವಾಗ ವ್ಯಕ್ತಿಯೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ತುಮಕೂರು ತಾಲ್ಲೂಕಿನ ಹೆಬ್ಬಾಕ ಗ್ರಾಮದಲ್ಲಿ ನಡೆದಿದೆ.

ಡಿಜೆ ಸೌಂಡ್ಸ್ ಎಫೆಕ್ಟ್‌ಗೆ ಹೃದಯಾಘಾತ: ವಿರೂಪಾಕ್ಷ (48) ಮೃತ ದುರ್ದೈವಿಯಾಗಿದ್ದಾರೆ. ಗಣಪತಿ ನಿಮಜ್ಜನದ ಮೆರವಣಿಗೆ ವೇಳೆ ಡಿಜೆ ಸೌಂಡ್ಸ್ ಹಾಕಲಾಗಿತ್ತು. ಸೌಂಡ್​ಗೆ ಕುಣಿಯುವಾಗ ವಿರೂಪಾಕ್ಷ ಸಾವನ್ನಪ್ಪಿದ್ದಾರೆ. ಶನಿವಾರ ಡಿಜೆ ಸೌಂಡ್ಸ್ ಎಫೆಕ್ಟ್‌ಗೆ ಹೃದಯಾಘಾತವಾಗಿರುವ ಶಂಕೆ‌ ವ್ಯಕ್ತವಾಗಿದೆ. ಈ ಸಂಬಂಧ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣಪತಿ ನಿಮಜ್ಜನ ಮಹೋತ್ಸವ: ಗ್ರಾಮಸ್ಥರೆಲ್ಲ ಸಂಭ್ರಮದಿಂದ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಗಣಪತಿಯನ್ನ ಸಂಭ್ರಮ ಸಡಗರದೊಂದಿಗೆ ನಿಮಜ್ಜನ ಮಾಡಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿ ಡಿಜೆ ಸೌಂಡ್​ಗೆ ವ್ಯಕ್ತಿಯೊಬ್ಬ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ನಡೆದ ಗಣಪತಿ ನಿಮಜ್ಜನ ಮಹೋತ್ಸವದ ವಿಡಿಯೋಗಳನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ.

ತುಮಕೂರು ಗಣೇಶೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ವ್ಯಕ್ತಿ ಮೃತ

ಅನಧಿಕೃತವಾಗಿ ಡಿಜೆ ಸೌಂಡ್: ಸರ್ಕಾರ ಡಿಜೆಗೆ ಸಂಬಂಧಿಸಿದಂತೆ ಕೆಲವು ಸುತ್ತೋಲೆಗಳನ್ನ ಹೊರಡಿಸಿದ್ದು, ಸಂಬಂಧಪಟ್ಟ ಇಲಾಖೆಗಳಿಂದ ಡಿಜೆ ತರಲು ಅನುಮತಿ ಕಡ್ಡಾಯ ಎಂದು ಆದೇಶ ಹೊರಡಿಸಿತು. ಆದರೆ, ಸರ್ಕಾರಿ ಆದೇಶವನ್ನು ಪಾಲಿಸದೆ ಅನಧಿಕೃತವಾಗಿ ಡಿಜೆ ಸೌಂಡ್​ಗೆ ಕಾರ್ಯಕ್ರಮದ ಆಯೋಜಕರ ಮೊರೆ ಹೋಗಿದ್ದರು ಎನ್ನಲಾಗಿದೆ. ಇನ್ನು ಡಿಜೆ ಸೌಂಡ್​ ಅನ್ನು ಬಳಸಿಕೊಳ್ಳಲು ಯಾವ ಇಲಾಖೆಯಿಂದ ಅನುಮತಿ ಪಡೆದಿದ್ದರು ಎನ್ನುವ ಅನುಮಾನ ವ್ಯಕ್ತವಾಗಿದೆ.

ಈ ರೀತಿಯ ಘಟನೆಗಳಿಗೆ ಯಾರು ಜವಾಬ್ದಾರರು? ಸಂಬಂಧಪಟ್ಟ ಇಲಾಖೆಗಳು ಇಂತಹ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿತ್ತು ಎನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಇನ್ನಾದರೂ ಕಾರ್ಯಕ್ರಮದ ಆಯೋಜಕರು ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವರೇ ಎಂಬುದನ್ನು ಕಾದು ನೋಡಬೇಕಿದೆ. ಬೆಳ್ಳಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ವಿಶ್ವ ಬಂಟರ ಮಹಾ ಅಧಿವೇಶನ: ಮುಂಬೈಗೆ ತೆರಳಿದ ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.