ತುಮಕೂರು: ನಗರದಲ್ಲಿ ಅಲ್ಪಸಂಖ್ಯಾತ ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ದೇವೇಗೌಡ ಅವರು ಭಾಷಣ ಮಾಡುವ ವೇಳೆ ಸಮೀಪದ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸಲು ಆರಂಭಿಸಿದ್ರು. ಇದನ್ನು ಕೇಳಿದ ತಕ್ಷಣ ಭಾಷಣ ನಿಲ್ಲಿಸಿದ ದೇವೇಗೌಡರು ಮಸೀದಿಯಲ್ಲಿ ಆಜಾನ್ ಕೂಗುವುದಕ್ಕೆ ಗೌರವ ಸಲ್ಲಿಸಿದರು.
ಸುಮಾರು 4 ನಿಮಿಷಗಳ ಕಾಲ ಮೌನವಾಗಿ ನಿಂತು ಆಜಾನ್ಗೆ ಗೌರವ ಸಲ್ಲಿಸಿದರು. ತುಮಕೂರಿನ ಗ್ರಂಥಾಲಯ ಮೈದಾನದಲ್ಲಿ ಸಮಾವೇಶ ನಡೆಯುತ್ತಿತ್ತು. ಪಕ್ಕದಲ್ಲಿಯೇ ಇದ್ದ ಮಾಜಿ ಶಾಸಕ ಶಫೀ ಅಹಮದ್ ಅವರು ಅಜಾನ್ ಪೂರ್ಣಗೊಂಡಿರೋದನ್ನ ತಿಳಿಸಿದ ನಂತರವೇ ದೇವೇಗೌಡರು ಭಾಷಣ ಆರಂಭಿಸಿದರು.
ಇನ್ನೊಂದೆಡೆ ಕಾರ್ಯಕ್ರಮ ಪೂರ್ಣಗೊಳ್ಳುತ್ತಿದ್ದಂತೆ 'ಚೌಕಿದಾರ್ ಚೋರ್ ಹೈ ' ಎಂಬ ಘೋಷಣೆಗಳು ಮೋದಿ ವಿರುದ್ಧ ಮೊಳಗಿದ್ದು ಕಂಡು ಬಂತು.