ತುಮಕೂರು: ಫೇಸ್ಬುಕ್ನಲ್ಲಿ ಬಿಜೆಪಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಜೆಡಿಎಸ್ ಕಾರ್ಯಕರ್ತನನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಮಾಜಿ ಶಾಸಕ ಸುರೇಶ್ಗೌಡ ಫ್ಯಾನ್ಸ್ ಪೇಜ್ನಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಬಗ್ಗೆ ಟೀಕೆ ಮಾಡಿ ಕಮೆಂಟ್ ಹಾಕಿದ್ದರು. ಬರಗಾಲದ ಸಂದರ್ಭದಲ್ಲಿ ಶಾಸಕ ಗೌರಿಶಂಕರ್ ಮೋಜು ಮಸ್ತಿಗಾಗಿ ಸಿಂಗಾಪುರಕ್ಕೆ ಹೋಗಿದ್ದಾರೆ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾಗಿತ್ತು.
ಇದಕ್ಕೆ ಪ್ರತಿಯಾಗಿ ಜೆಡಿಎಸ್ ಕಾರ್ಯಕರ್ತ ಶಫಿ ಎಂಬಾತ ಬಿಜೆಪಿ ವಿರುದ್ದ ಕಾಮೆಂಟ್ ಹಾಕಿದ್ದನು. ಶಫಿ ಕಮೆಂಟ್ ವಿರುದ್ದ ಬಿಜೆಪಿಯಿಂದ ಇಂದು ಪ್ರತಿಭಟನೆ ನಡೆಸಿ, ಶಫಿಯನ್ನು ಬಂಧಿಸುವಂತೆ ಪ್ರತಿಭಟನಾಕಾರರು ಪೊರಕೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.