ETV Bharat / state

ಎಲ್ಲರೂ ಮಾನವ ಧರ್ಮ ಉಳಿಸಿಕೊಂಡು ಹೋಗಬೇಕು: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ - ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ

ತುಮಕೂರು ಜಿಲ್ಲೆಯ ನೊಣವಿನಕೆರೆಯಲ್ಲಿ ಆಂಜನೇಯ ದೇಗುಲ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಭಾಗವಹಿಸಿದ್ದರು.

dcm-dk-shivakumar-spoke-at-tumkur
ಎಲ್ಲರೂ ಮಾನವ ಧರ್ಮ ಉಳಿಸಿಕೊಂಡು ಹೋಗಬೇಕು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್
author img

By ETV Bharat Karnataka Team

Published : Aug 27, 2023, 8:31 PM IST

ಎಲ್ಲರೂ ಮಾನವ ಧರ್ಮ ಉಳಿಸಿಕೊಂಡು ಹೋಗಬೇಕು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್

ತುಮಕೂರು : ಮಾನವ ಧರ್ಮ ಉಳಿಸಲು ನಾವೆಲ್ಲ ಒಟ್ಟಾಗಿ ಪ್ರಯತ್ನಿಸಬೇಕು. ನಮ್ಮ ಧರ್ಮವನ್ನು ಉಳಿಸಿಕೊಂಡು ಹೋಗಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಜಿಲ್ಲೆಯ ತಾಲೂಕಿನ ನೊಣವಿನಕೆರೆಯಲ್ಲಿ ಆಂಜನೇಯ ದೇಗುಲ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 20 ವರ್ಷದಿಂದ ನಾನು ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಬರುತ್ತಿದ್ದೇನೆ. ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ನನಗೂ ಮಠಕ್ಕೂ ಭಕ್ತ ಮತ್ತು ಭಗವಂತನ ಸಂಬಂಧ ಎಂದು ಹೇಳಿದರು.

ರಾಮನ ತಂದೆ ದಶರಥ ಮಹಾರಾಜ.‌ ನಮಗೆ ದಶರಥನ ದೇವಸ್ಥಾನ ಎಲ್ಲಿಯೂ ಸಿಗುವುದಿಲ್ಲ. ಆದರೆ ರಾಮನ ಭಕ್ತ ಹನುಮಂತನ ದೇವಸ್ಥಾನ ಎಲ್ಲಾ ಕಡೆ ಇದೆ. ರಾಮನ ದೇವಸ್ಥಾನಕ್ಕಿಂತ ಹೆಚ್ಚು ಆಂಜನೇಯ ದೇವಸ್ಥಾನ ಇದೆ. ಹೀಗೆ ಯಾಕೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಯಾಕೆಂದರೆ ರಾಮನ ಬಂಟ ಆಂಜನೇಯ. ಆಂಜನೇಯ ಸೇವೆಯ ಪ್ರತೀಕ. ಸ್ವಾಮಿನಿಷ್ಠೆಯ ಪ್ರತೀಕ. ಹಿಂದಿನಿಂದಲೂ ಆಂಜನೇಯ ಸಮಾಜದ ಉದ್ಧಾರಕ್ಕಾಗಿ ಕೆಲಸ ಮಾಡಿದ್ದಕ್ಕೆ ಆತನನ್ನು ಸಮಾಜ ಗುರುತಿಸುತ್ತಿದೆ. ಹಾಗೆಯೇ ಇಂದು ಯಾರು ಸಮಾಜ ಸೇವೆ ಮಾಡುತ್ತಾರೋ ಅವರನ್ನು ಸರ್ಕಾರ ಗುರುತಿಸುತ್ತದೆ. ಇದಕ್ಕೆ ಆಂಜನೇಯನೇ ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿದರು.

ದೇವರು ನಮಗೆ ವರವನ್ನೂ ಕೊಡುವುದಿಲ್ಲ, ಶಾಪವನ್ನು ಕೊಡುವುದಿಲ್ಲ. ಆದರೆ ಒಳ್ಳೆಯ ಅವಕಾಶಗಳನ್ನು ಕೊಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಗಂಗಾಧರಜ್ಜನ ಮಾರ್ಗದರ್ಶನದಲ್ಲಿ ನಾವು ಸೇವೆ ಮಾಡುತ್ತಿದ್ದೇವೆ. ಈ ಪವಿತ್ರವಾದ ಕ್ಷೇತ್ರ ನಿಮ್ಮ ಮನೆ ಮುಂದೆ ಇದೆ. ಅದನ್ನು ಉಳಿಸಿಕೊಂಡು ಹೋಗಬೇಕು. ಜೊತೆಗೆ ಮಠವನ್ನು ಉಳಿಸಬೇಕು ಎಂದರು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಹೆಚ್​ ಡಿ ತಮ್ಮಯ್ಯ ಅವರು ದೊಡ್ಡ ವಿಕೆಟ್​​ ತೆಗೆದಿದ್ದಾರೆ. ತಮ್ಮಯ್ಯ ಅವರು ಚಿಕ್ಕಮಗಳೂರಿನಲ್ಲಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ : ರಾಜಕೀಯ ಸೇಡು ತೀರಿಸಿಕೊಳ್ಳುವ ಹುನ್ನಾರ: ವಿಚಾರಣಾ ಆಯೋಗ ರಚನೆಗೆ ಬೊಮ್ಮಾಯಿ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.