ETV Bharat / state

ತುಮಕೂರು: ವೈದ್ಯರ ಬೇಡಿಕೆಗೆ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

ತುಮಕೂರಿನಲ್ಲಿ ಏರುಗತಿಯಲ್ಲಿ ಮುಂದುವರೆದ ಕೊರೊನಾ ನಿಯಂತ್ರಣಕ್ಕೆ ಮುಂದಾದ ಜಿಲ್ಲಾಡಳಿತ ವೈದ್ಯರ ಸಭೆ ನಡೆಸಿತು. ಈ ವೇಳೆ ಜಿಲ್ಲಾಡಳಿತದ ವಿರುದ್ದ ವೈದ್ಯರು ತಿರುಗಿಬಿದ್ದ ಪ್ರಸಂಗವೂ ನಡೆಯಿತು.

dc-warning-against-docter-in-tumkur
ಜಿಲ್ಲಾಧಿಕಾರಿ
author img

By

Published : Apr 16, 2021, 11:03 PM IST

ತುಮಕೂರು: ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಜನರ ಆರೋಗ್ಯ ಸ್ಥಿತಿಗತಿಯನ್ನು ಅರಿತಿರುವ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ಸಭೆಯನ್ನು ನಡೆಸಿತು. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ಸಭೆ ಒಂದು ರೀತಿ ವೈದ್ಯರು ಹಾಗೂ ಜಿಲ್ಲಾಧಿಕಾರಿಗಳ ನಡುವೆ ಭಾರಿ ಜಟಾಪಟಿಗೆ ಕಾರಣವಾಯ್ತು.

ಕೊರೊನಾ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡ ಸಂದರ್ಭದಲ್ಲಿ ಸರ್ಕಾರ ಜಿಲ್ಲೆಯ ನರ್ಸಿಂಗ್ ಹೋಂಗಳು ಹಾಗೂ ವೈದ್ಯರನ್ನು ಬಳಸಿಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತರಲು ಮುಂದಾಗಿತ್ತು. ಆದರೆ ಸರ್ಕಾರದಿಂದ ಕಳೆದ ಬಾರಿ ನಮಗೆ ಕೊಡಬೇಕಿದ್ದಂತಹ ಗೌರವಧನವನ್ನು ಇದುವರೆಗೂ ಪಾವತಿ ಮಾಡಿಲ್ಲ ಎಂದು ವೈದ್ಯರು ಪ್ರಶ್ನಿಸಿದರು.

ವೈದ್ಯರ ಬೇಡಿಕೆಗೆ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

ಮುಂದುವರೆದು, ಕೊರೊನಾ ಸೋಂಕಿತರಿಗೆ ಈಗಾಗಲೇ ಚಿಕಿತ್ಸೆ ನೀಡಿ ಒಂದು ವರ್ಷ ಕಳೆದಿದೆ. ನರ್ಸಿಂಗ್ ಹೋಂಗಳಲ್ಲಿ ಚಿಕಿತ್ಸೆ ನೀಡಿದ ಸಂದರ್ಭದಲ್ಲಿ ಆಕ್ಸಿಜನ್ ಸೇರಿದಂತೆ ಮೂಲ ಸೌಲಭ್ಯಗಳಿಗೆ ವೆಚ್ಚ ಮಾಡಿದ್ದು, ಅದಕ್ಕೆ ಹಣ ಇನ್ನು ಪಾವತಿ ಮಾಡಿಲ್ಲ. ಈಗಾಗಲೇ ಸಾಕಷ್ಟು ಆರ್ಥಿಕ ದುಃಸ್ಥಿತಿಯಿಂದ ನಾವು ಬಳಲುತ್ತಿದ್ದೇವೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸ್ವಲ್ಪ ವ್ಯತ್ಯಯವಾದರೆ ವೈದ್ಯರನ್ನು ಅಪರಾಧಿಗಳಂತೆ ಬಿಂಬಿಸಿ ನ್ಯಾಯಾಲಯದಲ್ಲಿ ನಮಗೆ ಅಗೌರವ ತೋರಿಸಲಾಗುತ್ತದೆ. ಇಂತಹ ಸನ್ನಿವೇಶಗಳು ಇರುವುದರಿಂದ ನಾವು ಜಿಲ್ಲಾಡಳಿತದೊಂದಿಗೆ ಕೊರೊನಾ 2ನೇ ಅಲೆ ಸಂದರ್ಭದಲ್ಲಿ ಸಹಕರಿಸುವುದು ಹೇಗೆ ಸಾಧ್ಯ? ಎಂದು ಜಿಲ್ಲಾಡಳಿತಕ್ಕೆ ಕೇಳಿದರು.

ವೈದ್ಯರ ಈ ನಿಲುವಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ್, ಜಿಲ್ಲಾಡಳಿತಕ್ಕೆ ಗೌರವವನ್ನು ಸೂಚಿಸುವಂತಹ ಪ್ರಜ್ಞೆ ಹೊಂದಿರಬೇಕು. ಈ ಹಿಂದೆ ಕೊರೊನಾ ಸೋಂಕಿತರಿಗೆ ನೀಡಲಾಗಿರುವ ಚಿಕಿತ್ಸೆಯ ಗೌರವಧನ ಸರ್ಕಾರದಿಂದ ಬಂದಿಲ್ಲ ಎಂಬ ಉತ್ತರ ನೀಡುತ್ತಿರುವ ನೀವುಗಳು. ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಆದಂತಹ ತಪ್ಪುಗಳನ್ನು ಕೂಡ ಇಲ್ಲಿ ಪರಿಗಣಿಸಲಾಗಿದೆ. ಹಣ ಬಿಡುಗಡೆಯಾಗಿಲ್ಲ ಎಂಬುದು ಕೇವಲ ತುಮಕೂರು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ಸಮಸ್ಯೆ ಇದೆ.ನಮ್ಮ ಸಮಸ್ಯೆಗಳನ್ನೆಲ್ಲಾ ಬಗೆಹರಿಸಿ ಆನಂತರ ನಾವು ಜಿಲ್ಲಾಡಳಿತದೊಂದಿಗೆ ಸಹಕರಿಸುತ್ತೇವೆ ಎಂಬ ಭಾವನೆ ಹೊಂದಿದ್ದರೆ, ನನಗೂ ಗೊತ್ತಿದೆ ನಿಮ್ಮನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎಂಬುದಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಸಂದರ್ಭದಲ್ಲಿ ಆದೇಶವನ್ನು ಹೊರಡಿಸಿದೆ. ಆದೇಶದ ಪ್ರಕಾರ, ಪ್ರತಿ ಆಸ್ಪತ್ರೆಗಳಲ್ಲಿ ಶೇಕಡಾ 50ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮೀಸಲಿಡಬೇಕು. ಪಿಡುಗಿನ ಸಂದರ್ಭದಲ್ಲಿ ಹೀಗೇ ಇರಬೇಕು ಎಂಬ ಸರ್ಕಾರದ ನಿಯಮಾವಳಿಗಳ ಪಾಲನೆ ಮಾಡಲೇಬೇಕು. ಹೀಗೆ ಜಿಲ್ಲಾಡಳಿತದೊಂದಿಗೆ ಸಹಕರಿಸದೆ ನಿಲುವು ಹೊಂದಿದ್ದರೆ, ಜಿಲ್ಲಾಡಳಿತಕ್ಕೂ ಗೊತ್ತಿದೆ ನಿಮ್ಮನ್ನು ಹೇಗೆ ನಿಭಾಯಿಸಬೇಕೆಂದು. ಯಾವುದೇ ಕಾರಣಕ್ಕೂ ಜಿಲ್ಲಾಡಳಿತದೊಂದಿಗೆ ಆಟವಾಡಲು ಪ್ರಯತ್ನಿಸಬೇಡಿ ಎಂದು ಖಡಕ್ಕಾಗಿ ಉತ್ತರಿಸಿದರು.

ಓದಿ: ಸಾರಿಗೆ ಸಚಿವರನ್ನ‌ ಭೇಟಿ ಮಾಡಲು ನಮಗೇನೂ ಮುಜುಗರವಿಲ್ಲ : ಕೋಡಿಹಳ್ಳಿ ಚಂದ್ರಶೇಖರ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.